ಕೊರವಡಿ ತೀರದಲ್ಲಿ ಕಡಲಾಮೆಗಳ ಸಾವು: ಸಂತಾನೋತ್ಪತ್ತಿಗೆ ಬಂದಾಗ ಕಾಡುವ ಮೃತ್ಯು

ಕುಂದಾಪುರ: ಜಗತ್ತಿನ ಅತ್ಯಂತ ಅಪರೂಪದ ಕಡಲಾಮೆಗಳು ಕುಂದಾಪುರ ಸಮೀಪದ ಕೊರವಡಿ ಕಡಲ ತೀರದಲ್ಲಿ ಸತ್ತು ಬೀಳುತ್ತಿದ್ದು, ಆತಂಕಕ್ಕೆ ಕಾರಣ ವಾಗಿದೆ. ಆಲಿವ್ ರಿಡ್ಲೇ ಜಾತಿಗೆ ಸೇರಿದ ಮೂರು ಕಡಲಾಮೆಗಳು ತೀರದಲ್ಲಿ ಸತ್ತ ಸ್ಥಿತಿಯಲ್ಲಿ ಗುರುವಾರ ಕಂಡುಬಂದಿದ್ದು, ಕಳೆದ 2 ತಿಂಗಳಿಂದ ಈ ರೀತಿ ಸಾವುಗಳು ಸಂಭವಿಸುತ್ತಿವೆ ಎಂದು ಸ್ಥಳೀಯರು ಪತ್ರಿಕೆಗೆ ತಿಳಿಸಿದ್ದಾರೆ. 

ಈ ಜಾತಿಯ ಕಡಲಾಮೆಗಳು ಸಂತಾನೋತ್ಪತ್ತಿಗಾಗಿ ಸೆಪ್ಟೆಂಬರ್ ತಿಂಗಳಲ್ಲಿ ಹೆಚ್ಚಾಗಿ ದಡಕ್ಕೆ ಬರುತ್ತಿದ್ದು, ಈ ಸಂದರ್ಭ ಮೀನುಗಾರಿಕೆಗೆ ತೆರಳುವ ಗಿಲ್‌ನೆಟ್ ಹಾಗೂ ಟ್ರಾಲ್ ಬೋಟ್‌ಗಳ ಹೊಡೆತಕ್ಕೆ ಸಿಲುಕಿ ಸಾವನ್ನಪ್ಪುತ್ತಿವೆ ಎಂದು ಶಂಕಿಸಲಾಗಿದೆ. ಆಲಿವ್ ರಿಡ್ಲೇ ಕಡಲಾಮೆಗಳು ಮೀನುಗಾರಿಕೆಯ ಬಲೆಗಳಲ್ಲಿ ಮೀನಿನೊಂದಿಗೆ ಸಿಕ್ಕಿ ಹಾಕಿಕೊಂಡು ಪ್ರಾಣ ಕಳೆದುಕೊಳ್ಳುತ್ತಿವೆ. ಮೀನುಗಾರರು ಬಿಡುವ ಬಲೆಗಳಲ್ಲಿ ಸಿಕ್ಕಿ ಹಾಕಿಕೊಂಡರೂ ಒಂದು ಗಂಟೆ ಕಾಲ ಬದುಕುವ ಶಕ್ತಿ ಇವುಗಳಿಗೆ ಇವೆಯಾದರೂ ಬಳಿಕ ಉಸಿರುಗಟ್ಟಿ ಸಾಯುವ ಅಪಾಯ ಇದೆ ಎಂದು ಕಡಲಾಮೆ ಸಂರಕ್ಷಣೆ ಕಾರ್ಯಕರ್ತ ದಯಾನಂದ ಸಾಲಿಯಾನ್ ತಿಳಿಸಿದ್ದಾರೆ. 

ಸಂರಕ್ಷಣೆ ಕಾನೂನು: ಭಾರತ ಸರ್ಕಾರ ಕಡಲಾಮೆಯನ್ನು ಅತಿ ವಿನಾಶದಂಚಿ ನಲ್ಲಿರುವ ಪ್ರಾಣಿ ಎಂದು ಗುರುತಿಸಿ ಶೆಡ್ಯೂಲ್ಡ್ ವರ್ಗ 1ಕ್ಕೆ ಸೇರಿಸಿದೆ. ಅದರ ಲ್ಲೂ ಹುಲಿ ಮತ್ತು ಚಿರತೆಗಳು ಇದೇ ಕಾನೂನಿನ ಆಡಿಯಲ್ಲಿ ಬರುತ್ತಿದ್ದರೂ ಈ ಪ್ರಾಣಿಗಳಿಗೆ ಇದ್ದ ಬೆಲೆ ಕಡಲಾಮೆಗಳಿಗೆ ಇಲ್ಲ ಎಂಬುದು ಬೇಸರ ಸಂಗತಿ. ಇನ್ನಾದರೂ ಸಂಬಂಧಪಟ್ಟ ಇಲಾಖೆಗಳು ಕಡಲಾಮೆಗಳ ನಿತ್ಯ ಮಾರಣ ಹೋಮವನ್ನೂ ತಡೆಯಲು ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸುತ್ತಾರೆ ಸಾಲಿಯಾನ್. 

ಇಲ್ಲಿ ಸತ್ತ ಆಮೆಗಳನ್ನು ಪುನಃ ಸಮುದ್ರಕ್ಕೆ ಎಸೆಯುವ ಪರಿಪಾಠವಿದೆ. ವಿದೇಶಗಳಲ್ಲಿ ಮೀನುಗಾರರೂ ಆಮೆಗಳನ್ನು ಪಾರು ಮಾಡಲು ಬೋಟ್‌ಗಳಲ್ಲಿ ವಿಶೇಷ ಉಪಕರಣಗಳನ್ನು ಅಳವಡಿಸಿ ಮೀನುಗಾರಿಕೆ ನಡೆಸಬೇಕೆಂಬ ಕಾನೂನು ಇದೆ ಎನ್ನುತ್ತಾರೆ ಸಂರಕ್ಷಣೆ ಕಾರ್ಯಕರ್ತರು.

ವರದಿ ಕೃಪೆ: ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com