ಕೊಲ್ಲೂರು-ನಿಟ್ಟೂರು ಘಾಟಿ ಮಾರ್ಗ ಸಂಚಾರ ದುಸ್ತರ

ಕುಂದಾಪುರ: ಕೊಲ್ಲೂರು-ನಿಟ್ಟೂರು ಘಾಟಿ ಮಾರ್ಗ ಸಂಚಾರ ದುಸ್ತರವೆನಿಸಿದೆ. ಮಳೆಗಾಲದ ಮೊದಲು ಘಾಟಿಯ 8 ಕಿ.ಮೀ. ವ್ಯಾಪ್ತಿಯಲ್ಲಿ ಕಾಂಕ್ರೀಟಿಕರಣ ಕಾಮಗಾರಿ ಕೈಗೊಂಡಿದ್ದು, ಕಾಮಗಾರಿ ಪೂರ್ಣಗೊಂಡಿಲ್ಲ. ಮಳೆಯ ಹಿನ್ನೆಲೆಯಲ್ಲಿ ಕಾಮಗಾರಿ ಸ್ಥಗಿತ ಗೊಂಡಿದ್ದು ವಾಹನ ಸಂಚಾರಕ್ಕೆ ಘಾಟಿ ಮಾರ್ಗ ತೆರವುಗೊಳಿಸ ಲಾಗಿದೆ. ಕಾಂಕ್ರೀಟಿಕರಣಗೊಂಡ ರಸ್ತೆ ಹೊರತುಪಡಿಸಿದರೆ ಉಳಿದ ಭಾಗದಲ್ಲಿ ಸಂಚರಿಸುವುದೇ ಸಾಹಸ ಎಂಬಂತಾಗಿದೆ. ಕೊಲ್ಲೂರಿನಿಂದ ನಿಟ್ಟೂರುವರೆಗಿನ 16 ಕಿಮೀ ಹಾದಿಯಲ್ಲಿ 8 ಕಿಮೀ ವ್ಯಾಪ್ತಿ ಬಿಟ್ಟು ಉಳಿದ ಕಡೆಗಳಲ್ಲಿ ಎದ್ದಿರುವ ಭಾರಿ ಹೊಂಡಗಳು ವಾಹನ ಸಂಚಾರಕ್ಕೆ ತೀವ್ರ ಧಕ್ಕೆಯುಂಟುಮಾಡಿವೆ. ಸಾಕಷ್ಟು ತಿರುವಿನಿಂದ ಕೂಡಿರುವ ಘಾಟಿಯ ಇಕ್ಕೆಲಗಳಲ್ಲಿ ಚರಂಡಿ ದುರಸ್ತಿ ಕಾರ್ಯ ನಡೆಯದೆ ಇರುವುದು, ರಸ್ತೆಗೊರಗಿದ ಮರಮಟ್ಟು ತೆರವಾಗದ ಹಿನ್ನೆಲೆಯಲ್ಲಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಾಗುವಂತಾಗಿದೆ. ರಸ್ತೆಯ ಡಾಮರು ಕಿತ್ತುಹೋಗಿ ಉಂಟಾಗಿರುವ ಭಾರಿ ಗಾತ್ರದ ಹೊಂಡದಿಂದಾಗಿ ಶಿವಮೊಗ್ಗ, ಬೆಂಗಳೂರು ಮೊದಲಾದೆಡೆಯಿಂದ ಕೊಲ್ಲೂರಿಗೆ ಆಗಮಿಸುವ ಯಾತ್ರಿಕರ ವಾಹನಗಳು, ಕೊಲ್ಲೂರಿನಿಂದ ಬೆಂಗಳೂರು, ಶಿವಮೊಗ್ಗ ಮೊದಲಾದೆಡೆ ಹೋಗುವ ಸಾವಿರಾರು ವಾಹನಗಳ ಸಾಹಸ ಯಾತ್ರೆ ಮಾಡಬೇಕಾಗಿದೆ. 

ಘಾಟಿ ನಿರ್ವಹಣೆ ಇಲ್ಲ: ಕಳೆದ ಹಲವು ವರ್ಷಗಳಿಂದ ಕೊಲ್ಲೂರು- ನಿಟ್ಟೂರು ಘಾಟಿ ಮಾರ್ಗ ನಿರ್ವಹಣೆಯಿಲ್ಲದೆ ಸೊರಗಿದೆ. ವಾಹನ ಬದಿಗೆ ಸರಿಸಿದರೆ ಪ್ರಪಾತಕ್ಕೆ ಅಥವಾ ಕಮರಿಗೆ ಸಾಗಬೇಕು. ಕಾಂಕ್ರೀಟಿಕರಣ ಕಾಮಗಾರಿ ಮಂದ ಗತಿಯಲ್ಲಿ ಸಾಗುತ್ತಿದೆ. ಘಾಟಿ ಮಾರ್ಗದ ಇಕ್ಕೆಲಗಳು ಕೆಸರುಮಯ ಆಗಿರುವುದರಿಂದ ಇರುವ ರಸ್ತೆ ವಾಹನ ತೇಲಿಸಿಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಸಂಬಂಧಿತ ಇಲಾಖೆ ಗಮನಹರಿಸಬೇಕು. - ಜಯಪ್ರಕಾಶ್ ಶೆಟ್ಟಿ ಕೊಲ್ಲೂರು

ವರದಿ: ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com