ಹಿರಿಯ ಸಾಹಿತಿ ರಾಮಚಂದ್ರ ದೇವ ನಿಧನ

ಬೆಂಗಳೂರು: ಕನ್ನಡದ ಹಿರಿಯ ಕವಿ, ಕತೆಗಾರ, ವಿಮರ್ಶಕ ರಾಮಚಂದ್ರ ದೇವ(65) ಬುಧವಾರ ಹೃದಯಾಘಾತದಿಂದ ಬೆಂಗಳೂರಿನಲ್ಲಿ ನಿಧನರಾದರು.
ಶೇಕ್ಸ್‌ಪಿಯರ್‌ನ ಹಲವಾರು ನಾಟಕಗಳನ್ನು ಕನ್ನಡಕ್ಕೆ ತಂದಿರುವ ಇವರ 'ಶೇಕ್ಸ್‌ಪಿಯರ್ ಎರಡು ಸಂಸ್ಕೃತಿಗಳಲ್ಲಿ' ತೌಲನಿಕ ಅಧ್ಯಯನ ಕೃತಿ ಇತ್ತೀಚೆಗೆ ಬಿಡುಗಡೆಯಾಗಿತ್ತು. 1948ರ ಮಾರ್ಚ್‌ನಲ್ಲಿ ದಕ್ಷಿಣ ಕನ್ನಡದ ಕಲ್ಮಡ್ಕದಲ್ಲಿ ಜನಿಸಿದ ಇವರು ಬೆಂಗಳೂರು ವಿವಿಯಿಂದ ಡಾಕ್ಟರೇಟ್ ಪಡೆದಿದ್ದಾರೆ. ಕಾಲೇಜು ಶಿಕ್ಷಕ, ಗ್ರಂಥಾಧಿಕಾರಿ, ಪ್ರಜಾವಾಣಿ ಉಪಸಂಪಾದಕ, ಅಂಕಣಕಾರ, ಸಿನಿಮಾ ಚಿತ್ರಕಥೆಗಾರ, ಅಮೆರಿಕದ ಲೈಬ್ರೆರಿ ಆಫ್ ಕಾಂಗ್ರೆಸ್ ಸಲಹೆಗಾರರಾಗಿ ದುಡಿದಿದ್ದರು. ಗಿರೀಶ್ ಕಾಸರವಳ್ಳಿಯವರ ಚಿತ್ರ 'ಬಣ್ಣದ ವೇಷ'ಕ್ಕೆ ಕತೆ- ಚಿತ್ರಕತೆ ಬರೆದಿದ್ದರು. ನಿವೃತ್ತಿಯ ನಂತರ ತಮ್ಮ ಹಳ್ಳಿಯಲ್ಲಿ ನೆಲೆಸಿ ಪ್ರಗತಿಪರ ಕೃಷಿಕರಾಗಿದ್ದುದೂ ಅಲ್ಲದೆ ಬೋಧಿ ಟ್ರಸ್ಟ್ ಎಂಬ ಸಂಸ್ಥೆ ಸ್ಥಾಪಿಸಿ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿದ್ದರು. ಮೂಗೇಲ ಮತ್ತು ಇತರ ಕತೆಗಳು, ದಂಗೆಯ ಪ್ರಕರಣ ಕಥಾಸಂಕಲನಗಳು, ಐದು ಕವನಗಳು, ಇಂದ್ರಪ್ರಸ್ಥ, ಮಾತಾಡುವ ಮರ ಕವನ ಸಂಕಲನಗಳು, ಹ್ಯಾಮ್ಲೆಟ್, ಮ್ಯಾಕ್‌ಬೆತ್ ನಾಟಕ ಅನುವಾದಗಳು, ರಥಮುಸಲ, ಅಶ್ವತ್ಥಾಮ, ಡಾಗ್ ಶೋ ಮುಂತಾದ ನಾಟಕಗಳು, ಭಗವದಜ್ಜುಕೀಯಂನ ಇಂಗ್ಲಿಷ್ ಅನುವಾದ, ಮುಚ್ಚು ಮತ್ತು ಇತರ ಲೇಖನಗಳು ಇವರ ಪ್ರಮುಖ ಕೃತಿಗಳು. ಅವರ 'ದಂಗೆಯ ಪ್ರಕರಣ' ಮತ್ತು 'ರಿಸಾರ್ಟ್‌' ಕಥೆಗಳು ಹಲವು ಆಂಥಾಲಜಿಗಳಲ್ಲಿ ಸ್ಥಾನ ಪಡೆದಿವೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com