ತೂದಳ್ಳಿ ಅತ್ಯಾಚಾರ ಆರೋಪಿಯ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಬೈಂದೂರು: ತೂದಳ್ಳಿ ಅಪ್ರಾಪ್ತ ಬಾಲಕಿಯ ಮೇಲಿನ ಅತ್ಯಾಚಾರ ಪ್ರಕರಣ ನಡೆದು 10 ದಿನಗಳ ನಂತರ ಪ್ರಕರಣ ಬೆಳಕಿಗೆ ಬಂದಿದೆ. ಆನಂತರ ಪ್ರಕರಣ ದಾಖಲಾದರೂ ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂಬ ನೆಪವೊಡ್ಡಿ ಆರೋಪಿಯನ್ನು ರಕ್ಷಿಸಲಾಗುತ್ತಿದೆ. ಸ್ಥಳೀಯ ಕೆಲವು ರಾಜಕೀಯ ಪ್ರಮುಖರು ಆರೋಪಿತನ ಪರ ನಿಂತು ಪ್ರಕರಣ ಗಂಭೀರತೆ ಕಳೆದುಕೊಳ್ಳುವಂತೆ ಮಾಡುತ್ತಿದ್ದಾರೆ.

ಬೈಂದೂರು ಹಾಗೂ ಕುಂದಾಪುರ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದಿಗೂ 8ನೆಯ ತರಗತಿಯ ನಂತರ ಹೆಣ್ಮಕ್ಕಳು ಅಧಿಕ ಸಂಖ್ಯೆಯಲ್ಲಿ ಶಾಲೆಯಿಂದ ಹೊರಗುಳಿಯುತ್ತಿದ್ದಾರೆ. ಅದಕ್ಕೆ ಪಾಲಕರು ನೀಡುವ ಗಂಭೀರ ಕಾರಣ ಒಂಟಿ ಹೆಣ್ಮಕ್ಕಳು ಹಳ್ಳಿ ಪ್ರದೇಶದಲ್ಲಿ ತಿರುಗಾಡುವಂತಿಲ್ಲವೆಂಬುವುದು. ಇಂತಹ ಪರಿಸ್ಥಿತಿ ಹೋಗಲಾಡಿಸಿ ಗ್ರಾಮೀಣ ಜನರಲ್ಲಿ ಧೈರ್ಯ ತುಂಬಬೇಕಾದರೆ ಪೋಲೀಸ್ ಇಲಾಖೆ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ತೂದಳ್ಳಿ ಬಾಲಕಿಯ ಅತ್ಯಾಚಾರಕೆತ್ನಿಸಿದ ಆರೋಪಿಯನ್ನು ಶೀಘ್ರ ಬಂಧಿಸಬೇಕು ಎಂದು ಸ್ಫೂರ್ತಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕ ಡಾ|| ಕೇಶವ ಕೋಟೇಶ್ವರ ಆಗ್ರಹಿಸಿದ್ದಾರೆ.

ಎಲ್ಲೋ ದೂರದ ಮುಂಬೈ, ದೆಹಲಿ, ಬೆಂಗಳೂರಿನಲ್ಲಿ ಅತ್ಯಾಚಾರ ಪ್ರಕರಣಗಳು ನಡೆದಾಗ ನಾವಿಲ್ಲಿ ಪ್ರತಿಭಟನೆಗಿಳಿಯುತ್ತೇವೆ. ಆದರೆ ನಮ್ಮ ಸನಿಹದಲ್ಲೇ ಕಣ್ಣೆದುರಲ್ಲೇ ದುಷ್ಕೃತ್ಯಗಳು ನಡೆದಾಗ ಕಣ್ಮುಚ್ಚಿ ಕುಳಿತುಕೊಳ್ಳಲಾಗದು. ಹಾಗಾಗಿ ಎಲ್ಲಾ ಸಂಘ ಸಂಸ್ಥೆಗಳು ಯುವ ಜನರು ಇಂತಹ ಪ್ರಕರಣದ ಬಗ್ಗೆ ಸ್ವರ ಎತ್ತ ಬೇಕೆಂದು ಅವರು ಕರೆ ಕೊಟ್ಟಿದ್ದಾರೆ. ಮಾತ್ರವಲ್ಲ ಮುಂದಿನ ಒಂದೆರಡು ದಿನದಲ್ಲಿ ಆರೋಪಿಯನ್ನು ಬಂಧಿಸಿ ನ್ಯಾಯಾಲಯದ ಮುಂದೆ ತರಲಾಗದಿದ್ದರೆ ಪ್ರಕರಣದ ವಿರುದ್ಧ ಉಗ್ರ ಪ್ರತಿಭಟನೆಯನ್ನು ಬೈಂದೂರು, ಭಟ್ಕಳದಲ್ಲಿ ಹಮ್ಮಿಕೊಳ್ಳಲಾಗುವುದು ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com