ಸೆ. 27ರಿಂದ ಹೊಸೇರಿಯಲ್ಲಿ ವೀಗನ್ ಫೆಸ್ಟಿವಲ್

ಕುಂದಾಪುರ: ತಾಲೂಕಿನ ಯಳಜಿತ ಗ್ರಾಮದ ಹೊಸೇರಿಯ ಸ್ಥಿತಪ್ರಜ್ಞ ವೀಗನ್ ಸೆಂಟರ್‍ನಲ್ಲಿ ಸೆ. 27ರಿಂದ 29ರ ತನಕ ಇಂಡಿಯ ಇಂಟರ್‍ನೇಶನಲ್ ವೀಗನ್ ಫೆಸ್ಟಿವಲ್ ನಡೆಯಲಿದೆ. ಪ್ರತಿದಿನ ಪೂರ್ವಾಹ್ನ ಶಿಬಿರಾರ್ಥಿಗಳಿಗೆ ಧ್ಯಾನ, ವ್ಯಾಯಾಮ, ಸ್ಪರ್ಧೆಗಳು ನಡೆಯುವುವು. ಮಧ್ಯಾಹ್ನ 2 ಗಂಟೆ ಬಳಿಕ ಸಾರ್ವಜನಿಕರಿಗೆ ವಿವಿಧ ಕಾರ್ಯಕ್ರಮಗಳಿರುತ್ತವೆ. 27ರಂದು ನಿವೇದಿತಾ  ಅವರಿಂದ ಸೆಕ್ಸೋಫೋನ್ ವಾದನ, ಮುಂಬೈಯ ಡಾ. ಶಲಭ್ ಗುಪ್ತಾರಿಂದ ಕವಿತಾ ವಾಚನ, ಕೊಲ್ಲೂರು ಚಂದ್ರಶೇಖರ ಅಡಿಗರ ವನ್ಯಜೀವಿ ಚಿತ್ರ ಪ್ರದರ್ಶನ ನಡೆಯುವುವು. 28ರಂದು ಡಾ. ಬಿ. ಎಂ. ಹೆಗ್ಡೆ ಅವರ ಆಶಯ ಭಾಷಣದ ಬಳಿಕ ಕೊಲ್ಕೊತ್ತಾದ ಬಿಕ್ರಮಾದಿತ್ಯ ಗುಹಾ ರೋಯ್ ಅವರಿಂದ  'ಮುಕ್ತ ಜೀವನ' ಕುರಿತು ಹಾಗೂ ಬೆಂಗಳೂರಿನ ಆತ್ಮಜ್ಯೋತಿ ಸತ್ಸಂಗದ ಸ್ಥಾಪಕ ನರಸಿಂಹ ಪ್ರಭು ಅವರಿಂದ 'ಅಹಿಂಸಾ-ಒಂದು ಜೀವನ ವಿಧಾನ' ಕುರಿತು ಭಾಷಣ, 2007ರಲ್ಲಿ ಮುರ್ಡೇಶ್ವರದಲ್ಲಿ ನಡೆದಿದ್ದ 11ನೆಯ ಅಂತಾರಾಷ್ಟ್ರೀಯ ವೀಗನ್ ಫೆಸ್ಟಿವಲ್‍ನ ಚಲನಚಿತ್ರ ಪ್ರದರ್ಶನ ನಡೆಯಲಿವೆ. 29ರಂದು ಅಮೇರಿಕಾ ಸಂಯುಕ್ತ ಸಂಸ್ಥಾನದ ವೀಗನ್ ಬಾಕ್ಸರ್ ಒಮೊವೇಲ್ ಅಡ್ಯುವೇಲ್ ಅವರಿಂದ 'ದ ಟಾವೋ ಆಫ್ ಪ್ಲಾಂಟ್ ಬೇಸ್ಡ್ ಟ್ರೆಯ್ನಿಂಗ್', ಡಾ. ಎಚ್. ರಾಮಮೋಹನ್ ಅವರಿಂದ 'ನಿಮ್ಮ ಆರೋಗ್ಯ ನಿಮ್ಮ ಕೈಯಲ್ಲಿ' ಕುರಿತು ಭಾಷಣ ಮತ್ತು ಎ. ಅವಿನಾಶ ಹೆಬ್ಬಾರ್ ಅವರ ಸಿತಾರ್ ವಾದನ ನಡೆಯಲಿವೆ. ಬೆಳಗ್ಗಿನ ಕಾರ್ಯಕ್ರಮಗಳು ನೋಂದಾವಣೆಗೊಂಡ ಶಿಬಿರಾರ್ಥಿಗಳಿಗೆ ಸೀಮಿತ. ಹೆಚ್ಚಿನ ವಿವರಗಳಿಗೆ 9341128767 ಸಂಖ್ಯೆಯ ದೂರವಾಣಿಯನ್ನು ಸಂಪರ್ಕಿಸಬಹುದು ಎಂದು ಸಂಘಟಕ, ಇಂಡಿಯನ್ ವೀಗನ್ ಸೊಸೈಟಿಯ ಪ್ರಮುಖ ಶಂಕರನಾರಾಯಣ ತಿಳಿಸಿದ್ದಾರೆ.

* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com