ಅಡಿಕೆ ಕೊಳೆ ರೋಗ ಪರಿಹಾರಕ್ಕೆ ಅರ್ಜಿ ಆಹ್ವಾನ

ಉಡುಪಿ: ನಿರಂತರ ಮಳೆಯಿಂದಾಗಿ ಅಡಿಕೆ ಮರಗಳಿಗೆ ಕೊಳೆರೋಗದ ಹಾವಳಿ ತೀವ್ರವಾಗಿ ಕಾಣಿಸಿಕೊಂಡಿದ್ದು ಅಡಿಕೆ ಫ‌ಸಲು ನಷ್ಟವಾಗಿದೆ. ಸಂತ್ರಸ್ತ ರೈತರು ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಪರಿಹಾರ ಪಡೆಯಲು ಅರ್ಜಿ ಸಲ್ಲಿಸಬಹುದಾಗಿದೆ.

ವಿಪರೀತ ಮಳೆಯಿಂದಾಗಿ ಶೇ. 50ಕ್ಕಿಂತ ಹೆಚ್ಚು ಫ‌ಸಲು ನಷ್ಟವಾಗಿರುವುದಕ್ಕೆ ಪ್ರಕೃತಿ ವಿಕೋಪ ಪರಿಹಾರ ಯೋಜನೆಯಡಿ ಹೆಕ್ಟೇರಿಗೆ 12,000 ರೂ. (ಎಕರೆಗೆ 4,800 ರೂ.) ಕಂದಾಯ ಇಲಾಖೆ ಮೂಲಕ ಪರಿಹಾರ ನೀಡಲು ಅವಕಾಶವಿದೆ.

ಅರ್ಜಿಯೊಂದಿಗೆ ಬೆಳೆದಾಖಲೆಗೆ ಪಹಣಿ ಪತ್ರ (ಆರ್‌ಟಿಸಿ) ಇಟ್ಟು ಅರ್ಜಿಯನ್ನು ಗ್ರಾಮ ಮಟ್ಟದಲ್ಲಿ ಗ್ರಾಮಕರಣಿಕರಿಗೆ ನೀಡಲು ಕೋರಿದೆ. ಕಂದಾಯ ಮತ್ತು ತೋಟಗಾರಿಕೆ ಇಲಾಖೆಯಿಂದ ಜಂಟಿ ಸಮೀಕ್ಷೆ ನಡೆಸಿ ಪರಿಹಾರ ನೀಡಲು ಕ್ರಮವಹಿಸಲಾಗುವುದು. ಅರ್ಜಿಯನ್ನು ಸೆ. 30ರೊಳಗೆ ಸಲ್ಲಿಸಬೇಕು ಎಂದು ತೋಟಗಾರಿಕೆ ಇಲಾಖೆಯ ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com