ಬಾಳಿಕೆರೆಯಲ್ಲಿ 29ಕ್ಕೆ ನೇತ್ರ ತಪಾಸಣಾ ಶಿಬಿರ

ಕುಂದಾಪುರ: ದಿ. ಶಂಕರ ಪೂಜಾರಿ ಸ್ಮರಣಾರ್ಥ ಉಡುಪಿಯ ಪ್ರಸಾದ ನೇತ್ರಾಲಯ, ನೇತ್ರಜ್ಯೋತಿ ಚಾರಿಟಬಲ್ ಟ್ರಸ್ಟ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೊಸೈಟಿಯ ಅಂಧತ್ವ ನಿವಾರಣಾ ವಿಭಾಗ ಮತ್ತು ಹಾಯ್ಗುಳಿ ಸೇವಾ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ದೇವಲ್ಕುಂದ ಗ್ರಾಮದ ಬಾಳಿಕೆರೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆ. 29ರಂದು ಉಚಿತ ನೇತ್ರ ತಪಾಸಣಾ ಶಿಬಿರ ಏರ್ಪಡಿಸಲಾಗಿದೆ. ಅಂದು ಬೆಳಿಗ್ಗೆ 9ರಿಂದ ಮಧ್ಯಾಹ್ನ 12-30ರ ವರೆಗೆ ನಡೆಯುವ ಶಿಬಿರದಲ್ಲಿ ನೇತ್ರತಜ್ಞರು ಕಣ್ಣಿನ ಪರೀಕ್ಷೆ ನಡೆಸುವರು. ಪೊರೆ ಇರುವವರಿಗೆ ಉಚಿತ ಶಸ್ತ್ರಚಿಕಿತ್ಸೆ, ದೃಷ್ಟಿದೋಷ ಇರುವವರಿಗೆ ಉಚಿತ ಕನ್ನಡಕ ವಿತರಣೆ ನಡೆಯುವುದು ಎಂದು ಸಂಘಟಕರು ಪ್ರಕಟಿಸಿದ್ದಾರೆ.

* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com