ಕೆಂಪು ದೀಪದ ಕಾರು:ವಿವಾದದಲ್ಲಿ ಸಂಸದೆ ರಮ್ಯಾ

ಆನ್ಲೈನ್ ಪಿಕ್: ಸಿನಿಮಾದಲ್ಲಿ ನಟಿಸುವಾಗ ನಟಿ ರಮ್ಯಾ ಏನಾದರೊಂದು ವಿಷಯಕ್ಕೆ ಸಂಬಂಧಿಸಿದಂತೆ ಸದಾ ಸುದ್ದಿಯಲ್ಲಿರುತ್ತಿದ್ದರು. ಅದೇ ರೀತಿ ಆಕೆ ಚುನಾವಣೆಗೆ ನಿಂತಾಗಲೂ ಅಷ್ಟೇ ಆಕೆಯ ಪೋಷಕರ ಬಗ್ಗೆ ಬೃಹತ್ ವಿವಾದ ಉಂಟಾಗಿತ್ತು. ಈಗ ಗೆದ್ದು ಗದ್ದುಗೆಗೆ ಏರಿ ಆಗಿದೆ, ಈಗಾಕೆ ಮತ್ತೇ ಸುದ್ದಿಯಲ್ಲಿದ್ದಾರೆ. 
    ಯಾವ ವಿಷಯಕ್ಕೆ ಸಂಬಂಧ ಪಟ್ಟಂತೆ ಅಂದರೆ,  ಸಂಸದೆ ರಮ್ಯಾ ಕೆಂಪು ದೀಪದ ಸರ್ಕಾರಿ ಕಾರಿನಲ್ಲಿ ಕ್ಷೇತ್ರ ಪ್ರವಾಸ ಮಾಡುತ್ತಿದ್ದಾರೆ. ಇದು  ಸಾರ್ವಜನಿಕ ಚರ್ಚೆಯ ವಿಷಯವಾಗಿದೆ . ರಾಜ್ಯ, ಕೇಂದ್ರದ ಕ್ಯಾಬಿನೆಟ್ ದರ್ಜೆ ಸಚಿವರು ಹಾಗೂ ಹೈಕೋರ್ಟ್, ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳು ಮಾತ್ರ ಕೆಂಪು ದೀಪದ ಕಾರು ಬಳಕೆ ಮಾಡುವಂತೆ ನೀಡಿದ್ದ ತೀರ್ಪನ್ನು ಮೀರಿ ಸರ್ಕಾರ ಹೊರಬಿದ್ದ ದಿನದಿಂದಲೇ  ಜಿಲ್ಲಾಧಿಕಾರಿ,ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹಾಗೂ  ನಿಗಮ ಮಂಡಳಿ ಅಧ್ಯಕ್ಷರು ತಮ್ಮ ಕಾರಿನಲ್ಲಿದ್ದ ಕೆಂಪು ದೀಪಗಳನ್ನು ತೆರವುಗೊಳಿಸಿದ್ದರು. 
     ಆದರೆ ರಮ್ಯಾ ಬುಧವಾರ ಸರ್ಕಾರ ನೀಡಿರುವ ಕೆಂಪು ದೀಪದ ಕಾರಿನಲ್ಲೇ ಮಂಡ್ಯ ನಗರ ಹಾಗೂ ಕೆ.ಆರ್.ಪೇಟೆ ತಾಲೂಕಿನ ವಿವಿದೆಡೆ ಕ್ಷೇತ್ರ ಪ್ರವಾಸ ಹಮ್ಮಿಕೊಂಡಿದ್ದರು. ಅದನ್ನು ಗಮನಿಸದೆ ಪ್ರವಾಸ ಮಾಡುತ್ತಾ  ನ್ಯಾಯಾಲಯದ ಆದೇಶ ಉಲ್ಲಂಘನೆ ಮಾಡಿದ್ದಾರೆ.  
ಒಟ್ಟಾರೆ ರಮ್ಯ ಇದ್ದ ಕಡೆ ಏನಾದರೊಂದು ಗಲಾಟೆ ಇರಲೇಬೇಕು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com