ಹಾಲು ಕೊಡುವ ಗೋವು ರಕ್ಷಿಸಿ: ರಾಘವೇಶ್ವರ ಶ್ರೀ

ವಿಟ್ಲ: ಅಮ್ಮ ತಿಂಗಳುಗಳ ಕಾಲ ಹಾಲು ಕೊಟ್ಟರೆ ಗೋಮಾತೆ ಜೀವನ ಪರ್ಯಂತ ಹಾಲು ಕೊಡುತ್ತಾಳೆ. ಆಕೆಯನ್ನು ರಕ್ಷಿಸುವ ಜವಾಬ್ದಾರಿ ನಮ್ಮೆಲ್ಲರದ್ದು ಎಂದು ಹೊಸನಗರ ರಾಮಚಂದ್ರಾಪುರ ಮಠಾಧೀಶ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ಯುವಕರಿಗೆ ಕರೆ ನೀಡಿದರು.
ಮಾಣಿ ಪೆರಾಜೆ ಶ್ರೀರಾಮಚಂದ್ರಾಪುರ ಮಠದಲ್ಲಿ 20ನೇ ಚಾತುರ್ಮಾಸ್ಯ ವ್ರತಾಚರಣೆ ಸಂದರ್ಭದಲ್ಲಿ, ಭಾನುವಾರ ನಡೆದ ಒಪ್ಪಣ್ಣ (ಬಾಲಕರು, ಯುವಕರು) ಸಮಾವೇಶದಲ್ಲಿ ಆಶೀರ್ವಚನ ನೀಡಿ, ಒಪ್ಪಣ್ಣಂದಿರು ಅಷ್ಟಮಿಯಂತೆ ಬೆಳಗಬೇಕು. ಗೋ ಉತ್ಪನ್ನಗಳು ಸರ್ವೋತ್ಕೃಷ್ಟವಾದದ್ದು. ಸಮಯ ಕಳೆದಂತೆ ಸತ್ವಯುತವಾಗುವ ತುಪ್ಪದಂತೆ ಯುವಕರೂ ಸರ್ವೋತ್ಕೃಷ್ಟರಾಗಬೇಕು ಎಂದರು.
ಪುಣ್ಯಕೋಟಿ ಚಿತ್ರ ಹಚ್ಚಿ: ನಮ್ಮ ಸುಂದರವಾದ ಮನೆಯ ಕೋಣೆಯೊಳಗೆ ಕಾರು, ಬೈಕ್‌ಗಳ ಚಿತ್ರ, ನಟ, ನಟಿಯರ ಚಿತ್ರ ಅಂಟಿಸುತ್ತೇವೆ. ಬದಲಿಗೆ ಪುಣ್ಯಕೋಟಿ, ಶ್ರೀರಾಮಾಂಜನೇಯರ, ಶಂಕರಾಚಾರ್ಯರ ಚಿತ್ರವಿರಲಿ ಎಂದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com