ಆಸ್ಟ್ರೇಲಿಯದ ಸಂಸತ್ ಚುನಾವಣೆಗೆ ಶಿಲ್ಪಾ ಹೆಗ್ಡೆ ಸ್ಪರ್ಧೆ; ಭರದ ಪ್ರಚಾರ; ತವರೂರಲ್ಲಿ ಸಂಭ್ರಮ

ಉಡುಪಿ: ತಾಲೂಕಿನ ಪೆರ್ಡೂರಿನಲ್ಲಿ ಹುಟ್ಟಿ ಬೆಳೆದ ಶಿಲ್ಪಾ ಹೆಗ್ಡೆ ಆಸ್ಟ್ರೇಲಿಯದ ಸಂಸತ್ ಚುನಾವಣೆಗೆ ಲಿಬರಲ್ ಪಕ್ಷದ ಅಭ್ಯರ್ಥಿಯಗಿ ಸ್ಪರ್ಧಿಸುತ್ತಿರುವ ಮೊದಲ ಕನ್ನಡತಿ. ಮೂಲತ ಹಿರಿಯಡ್ಕ ಮುತ್ತೂರಿನ ಮೋಹನದಾಸ್ ಹೆಗ್ಡೆ ಹಾಗೂ ವಡ್ಡರ್ಸೆಯ ಶಶಿಕಲಾ ದಂಪತಿಯ ಪ್ರಥಮ ಮಗಳಾದ ಶಿಲ್ಪಾ ಹೆಗ್ಡೆ ತನ್ನ ಪ್ರಾಥಮಿಕ ಪೂರ್ವ ಶಿಕ್ಷಣವನ್ನು ಬ್ರಹ್ಮಾವರ ಲಿಟ್ಲ್‍ರಾಕ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆರಂಭಿಸಿದರಾದರು ಅನಿವಾರ್ಯ ಕಾರಣದಿಂದಾಗಿ ತಂದೆತಾಯಿಯೊಂದಿಗೆ ಮಸ್ಕತ್‍ಗೆ ಹೋಗಬೇಕಾಯಿತು.4ನೇ ತರಗತಿಯವರೆಗೆ ಮಸ್ಕತ್ತಿನಲ್ಲಿ ಶಿಕ್ಷಣ ಪಡೆದು ಹುಟ್ಟೂರಿನ ಮಮತೆಯಿಂದ ಪೆರ್ಡೂರಿಗೆ ಆಗಮಿಸಿದರು.5ರಿಂದ 7ನೇ ತರಗತಿಯನ್ನು ಮಣಿಪಾಲದ ಮಾಧವ ಕೃಪಾದಲ್ಲೂ, 8 ರಿಂದ ಪಿಯುಸಿ ತನಕ ಮಣಿಪಾಲ ಜೂನಿಯರ್ ಕಾಲೇಜಿನಲ್ಲಿ ಪಡೆದರು. ಆರಂಭದಿಂದಲೂ ಕಲಿಕೆ ಹಾಗೂ ಇತರ ಚಟುವಟಿಕೆಯಲ್ಲಿ ಆಸಕ್ತಿಯಿರುವ ಶಿಲ್ಪಾ ನಿಟ್ಟೆ ಇಂಜಿನಿಯರಿಂಗ್ ಕಾಲೇಜಿನಲ್ಲಿ ಇಲೆಕ್ಟ್ರಾನಿಕ್ಸ್  ಮತ್ತು ಕಮ್ಯುನಿಕೇಷನ್ ವಿಭಾಗದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಎಳವೆಯಲ್ಲೇ ಸಾರ್ವಜನಿಕ ಕಾರ್ಯಕ್ರಮಗಳಲ್ಲಿ ಭಾಷಣ ಮಾಡುತ್ತಿದ್ದು ರಾಜಕೀಯದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಮೂಲತ ಕುಂದಾಪುರ ತಾಲೂಕಿನ ಅಜ್ಜಿಯವರಾದ ದಯಾನಂದ ಶೆಟ್ಟಿಯವರನ್ನು 2001ರಲ್ಲಿ ವಿವಾಹವಾದರು. ರಾಜಕೀಯದಲ್ಲಿ ಆಸಕ್ತಿ ಹಾಗೂ ಸಂಘ ಸಂಸ್ಥೆಗಳಲ್ಲಿ ಸಕ್ರೀಯವಾಗಿ ಗುರುತಿಸಿಕೊಂಡಿವ ದಯಾನಂದ ಶೆಟ್ಟಿ ಆಸ್ಟ್ರೇಲಿಯಾದಲ್ಲಿ ಸಾಫ್ಟ್‍ವೇರ್ ಇಂಜಿನಿಯರ್.ಲಿಬರಲ್ ಪಕ್ಷದ ಮೀಟಿಂಗ್‍ಗಳಿಗೆ ತನ್ನ ಪತ್ನಿಯನ್ನು ಕರೆದುಕೊಂಡು ಹೋಗುತ್ತಿದ್ದರು.ಅಲ್ಲಿ ಶಿಲ್ಪಾ ಹೆಗ್ಡೆಯನ್ನು ಗಮನಿಸಿದ ಪಕ್ಷದ ಮುಂದಾಳುಗಳು ಪಕ್ಷದ ಉತ್ತಮ ನಾಯಕಿಯಾಗುವ ಅರ್ಹತೆಯನ್ನು ಗಮನಿಸಿದ್ದರು. 
ಈ ಭಾರಿಯ ಆಸ್ಟ್ರೇಲಿಯದ ಸಂಸತ್ತಿನ ಸಾರ್ವತ್ರಿಕ ಚುನಾವಣೆಗೆ ಲಿಬರಲ್ ಪಕ್ಷದ ಅಭ್ಯರ್ಥಿಯಗಿ ಸ್ಪರ್ಧಿಸುವ ಅವಕಾಶ ಕೂಡಿ ಬಂದಿದೆ. ಸೆಷ್ಟಂಬರ್ 07ರಂದು  ಮಹಾಚುನಾವಣೆ ನಡೆಯಲಿದೆ. ಆಸ್ಟ್ರೇಲಿಯದ ಮಾಜಿ ಪ್ರಧಾನಿ ಸೇರಿದಂತೆ ರಾಜಕೀಯ ದಿಗ್ಗಜರ ಪೂರ್ಣ ಬೆಂಬಲ ಹರಿದುಬಂದಿದೆ.
ನನ್ನ ಮೊಮ್ಮಗಳು ಶಿಲ್ಪಾಗೆ ರಾಪ್ಟ್ರ ಮಟ್ಟದಲ್ಲಿ ಅವಕಾಶ ಸಿಕ್ಕಿರುವುದು ತುಂಬಾ ಖುಷಿಕೊಟ್ಟಿದೆ ಗೆಲ್ಲುವುದು ಮುಖ್ಯವಲ್ಲ ಅವಕಾಶ ಸಿಗುವುದು ಅವಳ ಅದೃಪ್ಟ ಎಂದು 58 ವರ್ಷಗಳಿಂದ ಪೆರ್ಡೂರಿನಲ್ಲಿ ವೈಧ್ಯರಾಗಿರುವ ಡಾ,ಎಮ್ ಆರ್ ಹೆಗ್ಡೆ ಅವರ ಹರ್ಷದ ಮಾತು. ಸೆಪ್ಟಂಬರ್ 7ರಂದು ನಡೆಯುವ ಚುನಾವಣೆಯಲ್ಲಿ ಶಿಲ್ಪಾ ಅತ್ಯಧಿಕ ಮತಗಳಿಂದ ಗೆದ್ದು ಬರಲಿ ಎಂಬುದು ನಮ್ಮ ಹಾರೈಕೆ.
ವಿಶೇಷ ವರದಿ : ಸುಕುಮಾರ್ ಮುನಿಯಾಲ್.

ಶಿಲ್ಪಾ ಹೆಗ್ಡೆ ಗಂಡ ದಯಾನಂದ ಶೆಟ್ಟಿ ಮತ್ತು ಮಕ್ಕಳ ಜೊತೆ ಪ್ರಚಾರದಲ್ಲಿ ನಿರತವಾಗಿರುವುದು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com