ಶಿರೂರಿನಲ್ಲಿ ರಂಜಿಸಿದ ಚಿಟ್ಟಾಣಿ ಯಕ್ಷನೃತ್ಯ ವೈಭವ

ಬೈಂದೂರು : ಜೆ.ಸಿ.ಐ ಶಿರೂರು ಇದರ ಜೇಸಿ ಸಪ್ತಾಹದ ಅಂಗವಾಗಿ ಹಮ್ಮಿಕೊಂಡ ಯಕ್ಷನೃತ್ಯ ವೈಭವ ಜಿಲ್ಲೆಯ ಯಕ್ಷಗಾನ ಕ್ಷೇತ್ರದಲ್ಲಿ ವಿನೂತನ ಪ್ರಯೋಗವಾಗುವ ಮೂಲಕ ಜನಮನ ಸೂರೆಗೊಂಡಿತ್ತು.

ಆಯ್ದ ಕಲಾವಿದರ ಕೂಡುವಿಕೆಯಿಂದ ಪ್ರಸಿದ್ದ ಪ್ರಸಂಗಗಳ ತುಣುಕುಗಳಿಗೆ ನೃತ್ಯ ಸಂಯೋಜಿಸುವ ಪ್ರಯತ್ನ ಯಕ್ಷಗಾನ ಆಸಕ್ತರನ್ನು ರಂಜಿಸಿತ್ತು. ವಿಶೇಷ ಆಕರ್ಷಣೆಯಾಗಿ ಮೂಡಿಬಂದ ಪದ್ಮಶ್ರೀ ಪುರಸ್ಕೃತ ಚಿಟ್ಟಾಣಿ ರಾಮಚಂದ್ರ ಹೆಗಡೆಯವರ ಸಾಲ್ವ ಶೃಂಗಾರ ಸಭಿಕರನ್ನು ರಸದೌತಣ ನೀಡಿತ್ತು. ಇಳಿವಯಸ್ಸಿನಲ್ಲೂ ಗೆಜ್ಜೆಕಟ್ಟಿ ಕುಣಿದ ಚಿಟ್ಟಾಣಿಯವರ ಯಕ್ಷಗಾನದ ಆಸಕ್ತಿಗೆ ಬೇಷ್‌ ಎನಿಸಿಕೊಂಡಿತ್ತು.

ಚಂದ್ರಾವಳಿ ಪ್ರಸಂಗದಲ್ಲಿ ಕಾರ್ತಿಕ ಚಿಟ್ಟಾಣಿ, ಕೃಷ್ಣ ನಾಗಿ ಶ್ರೀಧರ ಭಟ್‌ ಕಾಸರಕೋಡ, ಲಂಕಾದಹನ ತುಣುಕುಗಳಲ್ಲಿ ಸುಬ್ರಹ್ಮಣ್ಯ ಚಿಟ್ಟಾಣಿ ಹನುಮಂತ , ವಿಜಯ ಗಾಣಿಗ ಸೀತೆ, ಕೃಷ್ಣಾರ್ಜುನ ಪ್ರಸಂಗದ ನೃತ್ಯಕ್ಕೆ ಕಡಬಾಳ ಉದಯ ಹೆಗಡೆ ಕೃಷ್ಣ, ಮಂಕಿ ಈಶ್ವರ ನಾಯ್ಕ ಅರ್ಜುನ, ಕಾರ್ತವೀರಾರ್ಜುನ ಪ್ರಸಂಗದಲ್ಲಿ ನರಸಿಂಹ ಚಿಟ್ಟಾಣಿ ಕಾರ್ತವೀರ, ನಾಗೇಶ ಕುಳಿಮನೆ, ರಾವಣನಾಗಿ ನೃತ್ಯ ಪ್ರದರ್ಶನಗೈದರು.

ಹಿಮ್ಮೇಳದಲ್ಲಿ ಹೆರೆಂಜಾಲು ಗೋಪಾಲ ಗಾಣಿಗ, ಮೂರೂರು ಸರ್ವೆಶ್ವರ ಹೆಗಡೆ ಭಾಗವತಿಕೆ, ಗಜಾನನ ಭಂಡಾರಿ ಬೊಳYರೆ ಮದ್ದಲೆ, ವಿಘ್ನೇಶ್ವರ ಚೆಂಡೆಯಲ್ಲಿ ಸಹಕರಿಸಿದ್ದರು.


ಕೃಪೆ: ಅರುಣಕುಮಾರ್ ಶಿರೂರು
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

1 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com