ರಾಷ್ಟ್ರೀಯ ಹೆದ್ದಾರಿ ದುರವಸ್ಥೆ ಖಂಡಿಸಿ ಪ್ರತಿಭಟನೆ

ಶಿರೂರು: ಬೈಂದೂರಿನಿಂದ ಶಿರೂರಿನವರೆಗಿನ ರಾಷ್ಟ್ರೀಯ ಹೆದ್ದಾರಿ ದುರವಸ್ಥೆಯನ್ನು ಖಂಡಿಸಿ ಕುಂದಾಪುರ ತಾಲೂಕು ರೈತ ಸಂಘ ಹೆದ್ದಾರಿಯಲ್ಲಿ ಕೋಣ ಓಡಿಸುವ ಮೂಲಕ ಪ್ರತಿಭಟನೆ ನಡೆಸಿದರು. ಪ್ರತಿಭಟನೆ ನೇತ್ರತ್ವ ವಹಿಸಿ ಮಾತನಾಡಿದ ತಾಲೂಕು ರೈತ ಸಂಘದ ಅಧ್ಯಕ್ಷ ದೀಪಕ್‌ ಕುಮಾರ ಶೆಟ್ಟಿ ರಾಜಕೀಯ ಪಕ್ಷಗಳು ಕೇವಲ ಆಶ್ವಾಸನೆಗಳನ್ನು ನೀಡುವ ಮೂಲಕ ಜನರನ್ನು ಮರಳು ಮಾಡುತ್ತಿದೆ .ಹೆದ್ದಾರಿ ದುರವಸ್ಥೆಯಿಂದ ಪ್ರಯಾಣಿಕರು ಕಂಗೆಟ್ಟು ಹೋದರು ಸಹ ಇಲಾಖಾ ಅಧಿಕಾರಿಗಳು ಗಮನಹರಿಸುತ್ತಿಲ್ಲ .ಇದರಿಂದಾಗಿ ಪ್ರತಿದಿನ ಜನಸಾಮಾನ್ಯರು ತೀವೃ ಸಂಕಟಪಡುವಂತಾಗಿದೆ ಆದುದರಿಂದ ಕೋಣ ಓಡಿಸುವ ಮೂಲಕ ಹೆದ್ದಾರಿ ದುರವಸ್ಥೆಯನ್ನು ಖಂಡಿಸುತ್ತಿದ್ದೇವೆ. ಹಾಗೂ ಶೀಘ್ರ ದುರಸ್ಥಿಯಾಗಬೇಕು ಎಂದರು.
    ಶಿರೂರು ಕೆಳಪೇಟೆಯಿಂದ ಮಾರ್ಕೆಟ್‌ನವರೆಗೆ ಜಾಥಾ ನಡೆಸಲಾಯಿತು. ಬಳಿಕ ಕಂದಾಯ ಇಲಾಖೆಯ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿ ನೀಡಲಾಯಿತು. ಪ್ರತಿಭಟನೆಯಲ್ಲಿ ವಸಂತ ಹೆಗ್ಡೆ ಬೈಂದೂರು, ಪುಷ್ಪರಾಜ್‌ ಶೆಟ್ಟಿ, ದಿನೇಶ ಶಿರೂರು, ದಿವಾಕರ ಶೆಟ್ಟಿ, ಮುಂತಾದವರು ಹಾಜರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com