ಕುಗ್ರಾಮಗಳಲ್ಲಿ ಸೌರಶಕ್ತಿಗೆ ಸರಕಾರದಿಂದ ನೆರವು ಅಗತ್ಯ: ಡಾ| ಹರೀಶ್‌ ಹಂದೆ

ಕುಂದಾಪುರ: ಗ್ರಾಮೀಣ ಭಾಗದ ಮನೆಗಳಿಗೆ ಸೌರಶಕ್ತಿಯ ಉಪಕರಣಗಳನ್ನು ಜೋಡಿಸಿ ಬೆಳಕು ಕಾಣದ ಕುಗ್ರಾಮಗಳಲ್ಲಿ ಬೆಳಕು ತರುವ ಯೋಜನೆಯನ್ನು ಸೆಲ್ಕೋ ಸೋಲಾರ್‌ ಲೈಟ್ಸ್‌ ಮಾಡುತ್ತಿದ್ದು, ಈ ಬಗ್ಗೆ ಸರಕಾರ ಸೋಲಾರ್‌ ಉಪಕರಣಗಳ ಮೇಲೆ ವಿಧಿಸುವ ಶೇ.5.5 ತೆರಿಗೆಯನ್ನು ಮನ್ನಾಮಾಡಿದರೆ ಬಡ ಜನತೆಗೆ ಅನುಕೂಲವಾಗುತ್ತದೆ ಎಂದು ರಾಮನ್‌ ಮ್ಯಾಗ್ಸೆಸ ಪ್ರಶಸ್ತಿ ಪುರಸ್ಕೃತ ಡಾ| ಹರೀಶ್‌ ಹಂದೆ ಹೇಳಿದರು.

ರಾಜ್ಯದಲ್ಲಿ ಎರಡು ಲಕ್ಷಕ್ಕೂ ಅಧಿಕ ಸೋಲಾರ್‌ ಬಳಕೆದಾರಿದ್ದು, ಪೂರ್ಣ ಪ್ರಮಾಣದಲ್ಲಿ ಜನ ಸೌರಶಕ್ತಿಯನ್ನು ಬಳಸಿಕೊಂಡು, ಶಕ್ತಿ ಸ್ವಾವಲಂಬನೆಗಳಿಸಬೇಕು. ದೇಶದಲ್ಲಿಯೇ ರಾಜ್ಯ ಮಾದರಿಯಾಗಬೇಕು. ಅದಕ್ಕೆ ರಾಜ್ಯ ಸರಕಾರದ ಸಹಕಾರ ಅಗತ್ಯ ಎಂದರು.

ಜಡ್ಕಲ್‌ ಸಮೀಪದ ವಿದ್ಯುತ್‌ ಸಂಪರ್ಕವಿಲ್ಲದ ಬಸ್ರಿಬೇರು ಪ್ರದೇಶಕ್ಕೆ 10 ವರ್ಷಗಳ ಹಿಂದೆಯೇ ಸೋಲಾರ್‌ ದೀಪಗಳನ್ನು ಸಿಂಡಿಕೇಟ್‌ ಬ್ಯಾಂಕ್‌ ಕೊಲ್ಲೂರು ಶಾಖೆಯ ಸಹಯೋಗದೊಂದಿಗೆ 25ಕ್ಕೂ ಮನೆಗಳಿಗೆ ಸೋಲಾರ್‌ ದೀಪಗಳನ್ನು ಅಳವಡಿಸಿತ್ತು. ಈಗ ಮತ್ತೂಮ್ಮೆ ಶ್ರೀ ಕ್ಷೇ.ಧ.ಗ್ರಾ.ಯೋಜನೆಯ ಸಹಯೋಗದೊಂದಿಗೆ 20ಕ್ಕೂ ಹೆಚ್ಚು ಮನೆಗಳಿಗೆ ಸೌರ ದೀಪಗಳನ್ನು ಅಳವಡಿಸಿದ್ದೇವೆ. ಒಟ್ಟಾರೆ ಎಲ್ಲಾ ಮನೆಗಳಿಗೂ ಕೂಡಾ ಸೌರ ದೀಪಗಳನ್ನು ಅಳವಡಿಸಿದಂತಾಗಿದೆ. ಹಾಗೆಯೇ ವಿದ್ಯುತ್‌ ಸಮಸ್ಯೆ ಅನುಭವಿಸುತ್ತಿರುವ ಜಡ್ಕಲ್‌, ಚಿತ್ತೂರು, ಕೆರಾಡಿ, ಬೆಳ್ಳಾಲ, ಹೊಸೂರು, ಮುದೂರು, ಉದಯನಗರ, ತಾರಿಬೇರು, ಹಳ್ಳಿಹೊಳೆ, ಚಾರ್‌ ಸಾಲ್‌ ಗ್ರಾಮಗಳ ವಿದ್ಯುತ್‌ ಸಂಪರ್ಕವಿಲ್ಲದ 300ಕ್ಕೂ ಹೆಚ್ಚು ಮನೆಗಳಿಗೆ ಸೆಲ್ಕೋ ಸೋಲಾರ್‌ ಕುಂದಾಪುರ ಶಾಖೆಯು ಧ.ಗ್ರಾ.ಯೋಜನೆಯ ಸಹಕಾರದೊಂದಿಗೆ ಸೌರ ದೀಪಗಳನ್ನು ಅಳವಡಿಸಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಮೋಹನ ಹೆಗಡೆ, ಸೆಲ್ಕೋ ಸೋಲಾರ್‌ ಲೆ„ಟ್‌ ಸಂಸ್ಥೆಯ ಕುಂದಾಪುರ ಶಾಖೆಯ ಸೀನಿಯರ್‌ ಮ್ಯಾನೇಜರ್‌ ಶೇಖರ ಶೆಟ್ಟಿ, ಸೆಲ್ಕೋ ದಕ್ಷಿಣ ಭಾರತದ ಗುರುಪ್ರಸಾದ್‌ ಶೆಟ್ಟಿ, ಮಂಜುನಾಥ ಮೊದಲಾದವರು ಉಪಸ್ಥಿತರಿದ್ದರು.
* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com