5 ಜನ ಮಕ್ಕಳಿದ್ದೂ ಅನಾಥೆಯಂತಿರುವ ವೃದ್ಧೆ

ಕೆದೂರು: ಆಕೆ ಸರಾಸರಿ 5 ಜನ ಮಕ್ಕಳ ತಾಯಿ. 4 ಗಂಡು, ಆರತಿಗೊಬ್ಬಳೇ ಮಗಳು. ಜೀವಮಾನವಿಡಿ ಸವೆಸಿ ಮಕ್ಕಳಿಗೆಲ್ಲ ವಿದ್ಯಾಭ್ಯಾಸ ನೀಡಿ ತನಗೆ ಬಂದ ನಿವತ್ತಿಯ ಹಣದಿಂದ (ಖಾಸಗಿ ಆಸ್ಪತ್ರೆಯಲ್ಲಿ 22 ವರ್ಷ ವಾರ್ಡ ಆಯಾ ಆಗಿ ಸೇವೆ )ಮಗಳಿಗೂ ಒಳ್ಳೆಯ ಕಡೆ ಸಂಬಂಧ ಹುಡುಕಿ ವಿಜಂಭಣೆಯಿಂದ ಮದುವೆ ಮಾಡಿಸಿ ಕೆ ಖಾಲಿ ಮಾಡಿಕೊಂಡವಳಿಗೆ ಆಶ್ರಯವಾಗಿ ನಿಲ್ಲಬೇಕಾದ ಗಂಡು ಮಕ್ಕಳು ಕೆ ಎತ್ತಿ ಬಿಟ್ಟರು. ತುತ್ತು ನೀಡಿ ಸಲಹಿದವಳನ್ನು ಕತ್ತು ಹಿಡಿದು ಹೊರದಬ್ಬಿದರು. 

ಅನಾಥಳಾದ ತಾಯಿ ಸರಕಾರಿ ಆಸ್ಪತ್ರೆಯಲ್ಲಿ ಶುಶ್ರೂಷೆಗಾಗಿ ಸೇರಿಕೊಂಡಾಗ ಯಾರೋ ಪುಣ್ಯಾತ್ಮರು ಸ್ಫೂರ್ತಿಧಾಮದ ದಾರಿ ತೋರಿದರು. ತನಗೆ ಯಾರೂ ಇಲ್ಲ ಎಂದುಕೊಂಡೇ ಸ್ಫೂರ್ತಿಧಾಮಕ್ಕೆ ಬಂದ ಆ ಮಹಾತಾಯಿಯ ಬಗ್ಗೆ ಆಗಲೇ ವಾರೀಸುದಾರರ ಪತ್ತೆಗಾಗಿ ಪತ್ರಿಕಾ ಪ್ರಕಟಣೆ ನೀಡಲಾಗಿತ್ತು. ಆಗ ಬಂದ ಒಬ್ಬ ಮಗ ತಾಯಿಯನ್ನು ಕರೆದೊಯ್ಯುತ್ತೇನೆಂದ. ಆಕೆಯೂ ಹೊರಟಳು. ಸ್ಫೂರ್ತಿಧಾಮವೂ ಆಕೆಯನ್ನು ಮಗನ ಜತೆ ಕಳುಹಿಸಿಕೊಡಲು ನಿರ್ಧರಿಸಿತು. ಆದರೆ ಮಗ ಇವತ್ತು ಬೇಡ, ನಾಳೆ ಕರೆದುಕೊಂಡು ಹೋಗುತ್ತೇನೆ ಎಂದ. ಹೀಗೆ ಹೇಳಿ ಹೋದ ಆತ ಈಗ 1 ವರ್ಷ ಕಳೆದರೂ ಇಲ್ಲಿಗೆ ಬಂದಿಲ್ಲ. 80 ವರ್ಷದ ವದ್ಧೆ 5 ಜನ ಮಕ್ಕಳಿದ್ದೂ ಅನಾಥಳಂತೆ ಸ್ಫೂರ್ತಿಧಾಮದಲ್ಲಿ ದಿನ ಸವೆಸುತ್ತಿದ್ದಾರೆ. ಇತ್ತೀಚೆಗೆ ಕಾಲು ಜಾರಿ ಬಿದ್ದು ಸೊಂಟದ ಮೂಳೆ ಮುರಿದುಕೊಂಡ ವದ್ಧೆಗೆ ಸಂಸ್ಥೆಯು ತನ್ನ ಕೆಯಿಂದ ಹಣ ವ್ಯಯ ಮಾಡಿ ಶಸ್ತ್ರಚಿಕಿತ್ಸೆ ಮಾಡಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com