ನ.23ರಿಂದ ಉಡುಪಿಯಲ್ಲಿ ರಾಜ್ಯಮಟ್ಟದ ನಾಟಕ ಸ್ಪರ್ಧೆ

ಉಡುಪಿ: ಇಲ್ಲಿನ ನಾಟಕ ಸಂಸ್ಥೆ 'ರಂಗಭೂಮಿ'ಯು ನ.23ರಿಂದ ಡಿ.4ರವರೆಗೆ ದಿ. ಡಾ.ಟಿ.ಎಂ.ಎ.ಪೈ, ದಿ. ಮಲ್ಪೆ ಮಧ್ವರಾಜ್ ಮತ್ತು ಡಿ.ಎಸ್.ಎಲ್. ಭಟ್ ಸ್ಮಾರಕ ರಾಜ್ಯಮಟ್ಟದ 34ನೇ ಕನ್ನಡ ನಾಟಕ ಸ್ಪರ್ಧೆ ನಡೆಸಲಿದೆ.  ರಾಜ್ಯದ (ಕಾಸರಗೋಡು ಜಿಲ್ಲೆ ಸಹಿತ) ಯಾವುದೇ ಪ್ರದೇಶದ ಹವ್ಯಾಸಿ ನಾಟಕ ತಂಡಕ್ಕೆ ಸ್ಪರ್ಧೆಯಲ್ಲಿ ಭಾಗವಹಿಸಲು ಅವಕಾಶವಿದೆ. ಸ್ಪರ್ಧೆಗೆ ಗರಿಷ್ಠ 12 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುವುದು. ವಿಜೇತ ತಂಡಗಳಿಗೆ ಪ್ರಥಮ 15 ಸಾವಿರ, ದ್ವಿತೀಯ 10 ಸಾವಿರ ಹಾಗೂ ತೃತೀಯ 5 ಸಾವಿರ ನಗದು ಬಹುಮಾನ ಹಾಗೂ ಪರ್ಯಾಯ ಫಲಕಗಳನ್ನು ನೀಡಲಾಗುವುದು. ನಟ, ನಟಿ, ಸಂಗೀತ, ಬೆಳಕು, ಬಾಲನಟನೆ, ಪ್ರಸಾದನ, ರಂಗಸಜ್ಜಿಕೆಗಳಿಗೂ ನಗದು ಸಹಿತ ಬಹುಮಾನ ನೀಡಲಾಗುವುದು. ಭಾಗವಹಿಸುವ ತಂಡಗಳಿಗೆ ಉಚಿತ ಊಟ, ವಸತಿ ಜತಗೆ ಉಡುಪಿಗೆ ಹೋಗಿ ಬರುವ ಪ್ರಯಾಣ ವೆಚ್ಚ ನೀಡಲಾಗುವುದು. ಆಸಕ್ತ ತಂಡಗಳು ಪ್ರವೇಶ ಪತ್ರವನ್ನು ಪ್ರಧಾನ ಕಾರ್ಯದರ್ಶಿ, ರಂಗಭೂಮಿ, ಮಥುರಾ ಛತ್ರ, ಉಡುಪಿ- 576101 ಇವರಿಗೆ ತಲುಪಿಸಬೇಕು (ಮೊ-9880593079). ಪ್ರವೇಶ ಪತ್ರ ಸ್ವೀಕರಿಸಲು ಅ.21 ಕೊನೆ ದಿನ ಎಂದು ಪ್ರಕಟಣೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com