ಎಸ್.ವಿ. ಕಾಲೇಜು: ಶಿಕ್ಷಕರ ದಿನಾಚರಣೆ

ಗಂಗೊಳ್ಳಿ: ಶಿಕ್ಷಕರು ಮತ್ತು ವಿದ್ಯಾರ್ಥಿಗಳು ಒಬ್ಬರಿಗೊಬ್ಬರು ಪೂರಕವಾಗಿ ಸ್ಪಂದಿಸಿದಾಗ ಮಾತ್ರ ಶಿಕ್ಷಣದ ಉದ್ದೇಶ ಈಡೇರಲು ಸಾಧ್ಯ ಮತ್ತು ಶಿಕ್ಷಣ  ನಿಜವಾದ ಅರ್ಥದಲ್ಲಿ ಸಾರ್ಥಕತೆಯನ್ನು  ಪಡೆಯುತ್ತದೆ. ಒಂದೆರಡು ಮಕ್ಕಳನ್ನು ಸಂಭಾಳಿಸುವುದೇ ತ್ರಾಸದಾಯಕವಾದ ಕೆಲಸ. ಅಂತಾದ್ದರಲ್ಲಿ ಆರವತ್ತು ಎಪ್ಪತ್ತು ವಿದ್ಯಾರ್ಥಿಗಳನ್ನು ಒಂದೆಡೆ ಕುಳ್ಳಿರಿಸಿಕೊಂಡು ಪಾಠ ಮಾಡುತ್ತ ಅವರ ವ್ಯಕ್ತಿತ್ವವನ್ನು ರೂಪಿಸುವ  ಶಿಕ್ಷಕರು ನಿಜಕ್ಕೂ ಶ್ರೇಷ್ಠರಾದವರು. ಅವರಿಗೆ ಪೂರಕವಾದ ವಾತಾವರಣವನ್ನು ನಿರ್ಮಿಸಿಕೊಡಬೇಕಾಗಿರುವುದು ನಮ್ಮೆಲ್ಲರ ಕರ್ತವ್ಯ ಎಂದು ಸರಸ್ವತಿ ವಿದ್ಯಾಲಯ ಕಾಲೇಜಿನ ವಿದ್ಯಾರ್ಥಿ ಪ್ರತಿನಿಧಿಗಳಾದ ವಿದ್ಯಾಶ್ರೀ ಮತ್ತು ದೀಪಿಕಾ ಅಭಿಪ್ರಾಯಪಟ್ಟರು. ಅವರು ಗಂಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜಿನ `ರಾಷ್ಟ್ರೀಯ ಸೇವಾ ಯೋಜನೆ'ಯ ಆಶ್ರಯದಲ್ಲಿ ನಡೆದ ಶಿಕ್ಷಕರ ದಿನಾಚರಣೆಯ ಕಾರ್ಯಕ್ರಮದಲ್ಲಿ ಗುರುವಂದನೆಗೈಯುತ್ತಾ ಮಾತನಾಡಿದರು.”
      ಸ. ವಿ. ಕಾಲೇಜಿನ ಪ್ರಾಂಶುಪಾಲರಾದ ಕೆ. ಸರಸ್ವತಿ ರಾವ್ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಸೇವಾ ಯೋಜನೆಯ ಅಧಿಕಾರಿ ಭಾಸ್ಕರ ಶೆಟ್ಟಿ, ರಸಾಯನ ಶಾಸ್ತ್ರ ಉಪನ್ಯಾಸಕರಾದ ಆರ್ ಎನ್ ರೇವಣಕರ್, ಅರ್ಥ ಶಾಸ್ತ್ರ ಉಪನ್ಯಾಸಕರಾದ ಸುಗುಣ ಆರ್, ಕಾಲೇಜಿನ ವಿದಾರ್ಥಿ ಪ್ರತಿನಿಧಿಗಳಾದ ವಿದ್ಯಾಶ್ರೀ  ಮತ್ತು ದೀಪಿಕಾ  ಉಪಸ್ಥಿತರಿದ್ದರು. ಪವಿತ್ರ ಮತ್ತು ಪಲ್ಲವಿ ಪ್ರಾರ್ಥಿಸಿದರು. ಅಭಿಜಿತ್ ಸ್ವಾಗತಿಸಿದರು. ವಿದ್ಯಾಶ್ರೀ  ಮತ್ತು ದೀಪಿಕಾ ಗುರುವಂದನೆ ಗೈದರು. ಫ್ರಥ್ವಿ ಕಾರ್ಯಕ್ರಮ ನಿರೂಪಣೆ ಮಾಡಿದರು. ಸ್ವಾತಿ  ವಂದಿಸಿದರು. ಕಾರ್ಯಕ್ರಮದಲ್ಲಿ ಗುರುಗಳೆಲ್ಲರಿಗೂ ಹೂಗುಚ್ಛದೊದಿಗೆ ಕಿರು ಕಾಣಿಕೆ ನೀಡಿ ಗೌರವಿಸಲಾಯಿತು. ಶಿಕ್ಷಕರಿಗಾಗಿ ವಿವಿಧ ಬಗೆಯ ಸ್ಪರ್ಧೆಗಳನ್ನು ಮಕ್ಕಳು ನಡೆಸಿದ್ದರು”
                     ವರದಿ:ನರೇಂದ್ರ ಎಸ್ ಗಂಗೊಳ್ಳಿ. 
                                
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com