ಅಪರಿಚಿತ ಇ-ಮೇಲ್‌ ತೆರೆಯುವ ಮುಂಚೆ ಯೋಚಿಸಿ

ಮುಂದಿನ ಬಾರಿ ನೀವು ನಿಮ್ಮ ಕಂಪ್ಯೂಟರ್‌ನಲ್ಲಿ ನಿಮಗೆ ಬಂದಿರಬಹುದಾದ ಅಪರಿಚಿತ ಇ-ಮೇಲ್‌ ಡೌನ್‌ಲೋಡ್‌ ಮಾಡಿಕೊಳ್ಳುವ ಮುನ್ನ ಸಾವಿರ ಬಾರಿಯಾದರೂ ಯೋಚಿಸಿ. 

ಏಕೆಂದರೆ ಆ ಇ-ಮೇಲ್‌ ಜತೆಗಿರುವ ಅಟ್ಯಾಚ್‌ಮೆಂಟ್‌ ಮಾಲ್‌ವೇರ್‌ನಿಂದ ಕೂಡಿರಬಹುದು ಮತ್ತು ಅದನ್ನು ನೀವು ಡೌನ್‌ಲೋಡ್‌ ಮಾಡಿಕೊಂಡಾಕ್ಷಣವೇ ಅದು ನಿಮ್ಮ ನೆಟ್‌ ಬ್ಯಾಂಕಿಂಗ್‌ ಮತ್ತಿತರ ಅತ್ಯಮೂಲ್ಯ ಪಾಸ್‌ವರ್ಡ್‌ಗಳನ್ನು ಆ ಇ-ಮೇಲ್‌ ಕಳುಹಿಸಿದ ಅಪರಿಚಿತನಿಗೆ ಸುಲಭದಲ್ಲಿ ತಲುಪಿಸಿಬಿಡಬಲ್ಲುದು ! ಆ ಪಾಸ್‌ವರ್ಡ್‌ಗಳು ಸಿಕ್ಕಿದಾಕ್ಷಣ ಆ ಇ-ಮೇಲ್‌ ಕಳುಹಿಸಿದ ಅಪರಿಚಿತ ವ್ಯಕ್ತಿಯು ನಿಮ್ಮ ಬ್ಯಾಂಕ್‌ ಖಾತೆಯನ್ನು ನೀವೇ ಆಪರೇಟ್‌ ಮಾಡುವಂತೆ ಆತನೂ ಮಾಡಬಲ್ಲ. ನಿಮ್ಮ ಖಾತೆಯಿಂದ ನಿಮ್ಮ ದುಡ್ಡನ್ನೂ ಎಗರಿಸಬಲ್ಲ.

ಇಂತಹ ಒಂದು ಪ್ರಕರಣ ಈಗಲೇ ಆಗಿ ಹೋಗಿದೆ. ಎನ್‌ಆರ್‌ಐ ಒಬ್ಬರ ಬ್ಯಾಂಕ್‌ ಖಾತೆಯಿಂದ ಈ ರೀತಿಯಾಗಿ ಬರೋಬ್ಬರಿ 70 ಲಕ್ಷ ರೂ. ಲಪಟಾಯಿಸಿರುವ ನೈಜೀರಿಯದ ಇಬ್ಬರು ಖದೀಮರನ್ನು ದಿಲ್ಲಿ ಪೊಲೀಸರು ಬಂಧಿಸಿದ್ದಾರೆ. 

ಬಂಧಿತ ನೈಜೀರಿಯನ್‌ ಖದೀಮರ ಹೆಸರು ಸ್ಟಾನ್ಲಿ ರ್ಯಾನ್ಸಮ್‌ ಓಗುÌ (36) ಮತ್ತು ರೊಲ್ಯಾಂಡ್‌ ಚುಕುÌಡಿ ಅಲುಮೋನಾ (37) ಎಂಬುದಾಗಿದೆ. 

ದಿಲ್ಲಿಯ ರಾಜು ಪಾರ್ಕ್‌ ಎಂಬ ಪ್ರದೇಶದಲ್ಲಿ ತೀವ್ರ ತಾಂತ್ರಿಕ ಕಣ್ಗಾವಲು ಇರಿಸಿದ ಫ‌ಲವಾಗಿ ಈ ಖದೀಮರು ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾರೆ. ಇವರಿಂದ ವಶಪಡಿಸಿಕೊಳ್ಳಲಾಗಿರುವ 3 ಲ್ಯಾಪ್‌ಟಾಪ್‌ಗ್ಳಲ್ಲಿ ವಿವಿಧ ಬ್ಯಾಂಕ್‌ಗಳ ಜತೆಗೆ ನೆಟ್‌ ಬ್ಯಾಂಕಿಂಗ್‌ ವ್ಯವಹಾರ ನಡೆಸುವ ಸುಮಾರು 1.5 ಕೋಟಿ ಗ್ರಾಹಕ ಇ-ಮೇಲ್‌ ವಿಳಾಸಗಳು ಪತ್ತೆಯಾಗಿವೆ. 

ಈ ಇ-ಮೇಲ್‌ ವಿಳಾಸಗಳಿಗೆ ಇವರು ತಮ್ಮ ಮಾಲ್‌ವೇರ್‌ ಯುಕ್ತವಾಗಿರುವ ಇ-ಮೇಲ್‌ ಕಳುಹಿಸುತ್ತಾರೆ. ಈ ಇ-ಮೇಲ್‌ ಪಡೆಯುವ ಅಮಾಯಕ ಗ್ರಾಹಕರು ಅದನ್ನು ತಮ್ಮ ಕಂಪ್ಯೂಟರ್‌ಗಳಲ್ಲಿ ಡೌನ್‌ಲೋಡ್‌ ಮಾಡಿಕೊಂಡಾಗ ಇವರ ಕಂಪ್ಯೂಟರ್‌ಗಳಲ್ಲಿ ದಾಖಲಾಗಿರುವ ಅಮೂಲ್ಯ ನೆಟ್‌ ಬ್ಯಾಂಕಿಂಗ್‌ ಇತ್ಯಾದಿ ಪಾಸ್‌ವರ್ಡ್‌ಗಳನ್ನು ಒಳಗೊಂಡ ಇನ್ನೊಂದು ಫೋಲ್ಡರ್‌ ತತ್‌ಕ್ಷಣವೇ ಖದೀಮ ಹ್ಯಾಕರ್‌ಗಳ ಕಂಪ್ಯೂಟರ್‌ಗಳಲ್ಲಿ ಸೃಷ್ಟಿಗೊಂಡು ಅವರಿಗೆ ಇವರ ಎಲ್ಲ ಮಾಹಿತಿಗಳು ಸಿಗುತ್ತವೆ. ಇದು ಈ ಖದೀಮರ ಕಂಪ್ಯೂಟರ್‌ ತಂತ್ರಗಾರಿಕೆ !

ಬಂಧಿತ ನೈಜೀರಿಯನ್‌ ಖದೀಮರು ಪೊಲೀಸರಲ್ಲಿ ಬಾಯಿ ಬಿಟ್ಟಿರುವ ಪ್ರಕಾರ ಈ ರೀತಿಯಾಗಿ ಮಾಲ್‌ವೇರ್‌ ಸೃಷ್ಟಿ ಮಾಡಿ ಮಾಹಿತಿ ಕದ್ದು ನೆಟ್‌ ಬ್ಯಾಂಕಿಂಗ್‌ನಿಂದ ಅಮಾಯಕ ಗ್ರಾಹಕರ ಲಕ್ಷಾಂತರ ದುಡ್ಡು ಲಪಟಾಯಿಸುವ ಭಾರೀ ದೊಡ್ಡ ಹ್ಯಾಕರ್‌ಗಳ ಗುಂಪೇ ಇಲ್ಲಿದೆ ಎಂಬ ಆಘಾತಕಾರಿ ಮಾಹಿತಿಯನ್ನು ಲಭ್ಯವಾಗಿದೆ ಎಂಬುದಾಗಿ ಅಡಿಶನಲ್‌ ಪೊಲೀಸ್‌ ಕಮಿಶನರ್‌ ಪಿ ಎಸ್‌ ಕುಶವಾಹ್‌ ತಿಳಿಸಿದ್ದಾರೆ. 

ಈ ಹ್ಯಾಕರ್‌ಗಳು ಎಷ್ಟು ಬುದ್ಧಿವಂತರೆಂದರೆ ನೆಟ್‌ ಬ್ಯಾಂಕಿಂಗ್‌ ಮೂಲಕ ತಾವು ದುಡ್ಡು ಲಪಟಾಯಿಸಿದಾಗ ಆ ಕುರಿತ ಯಾವುದೇ ಎಚ್ಚರಿಕೆ ಮಾಹಿತಿ ಮೊಬೈಲ್‌ ಮೂಲಕ ಎಸ್‌ಎಂಎಸ್‌ ರೂಪದಲ್ಲಿ ಆಯಾ ಗ್ರಾಹಕರ ಮೊಬೈಲ್‌ಗೆ ಬಾರದಂತೆ ಅವರ ಮೊಬೈಲ್‌ ನಂಬರನ್ನೇ ಬ್ಲಾಕ್‌ ಮಾಡುತ್ತಾರೆ. 

ಹ್ಯಾಕರ್‌ಗಳು ಈ ರೀತಿ ಬ್ಯಾಂಕ್‌ ಗ್ರಾಹಕರ ಮೊಬೈಲ್‌ ನಂಬರನ್ನು ಬ್ಲಾಕ್‌ ಮಾಡಿದ ಬಳಿಕ ಅದರ ಮಾಹಿತಿಯನ್ನು ತಮ್ಮ ಗುಂಪಿನ ಇತರರಿಗೆ ಕಳುಹಿಸಿ ತಾವು ಎಗರಿಸಿದ ಹಣವನ್ನು ವಿವಿಧ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಬ್ಯಾಂಕುಗಳ ಬೋಗಸ್‌ ಖಾತೆಗೆ ಜಮೆಯಾಗುವಂತೆ ಮಾಡುತ್ತಾರೆ ಎಂದು ಕುಶವಾಹ್‌ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com