ಆನೆಗಳಿಂದ ಬಸ್ ನಿಲ್ದಾಣದ ಅಶ್ವತ್ಥ ವಕ್ಷದ ರೆಂಬೆಗಳ ತೆರವು

ತ್ರಾಸಿ: ಶಿರ್ಡಿಯಿಂದ ಸಾಯಿಬಾಬಾ ಭಕ್ತರೊಂದಿಗೆ ಬಂದಿರುವ ಆನೆಗೆ ಭರಪೂರ ಮೇವು ಜತೆಗೆ ಸಂಚಾರಿಗಳಿಗೆ ನೆರವಾದ ಪ್ರಸಂಗ ಬುಧವಾರ ರಾಷ್ಟ್ರೀಯ ಹೆದ್ದಾರಿ ಹಾದು ಹೋಗುವ ತ್ರಾಸಿ ಜಂಕ್ಷನ್‌ನಲ್ಲಿ ಜರುಗಿತು. 

ಜನನಿಬಿಡ ತ್ರಾಸಿ ಜಂಕ್ಷನ್‌ನಲ್ಲಿ ಬೆಳೆದು ನಿಂತಿರುವ ಅಶ್ವತ್ಥ ವಕ್ಷದ ರೆಂಬೆ, ಕೊಂಬೆಗಳು ಕೆಲದಿನಗಳಿಂದ ರಸ್ತೆಗೆ ಚಾಚಿಕೊಂಡಿದ್ದವು. ಇದರಿಂದ ಬಸ್ ನಿಲುಗಡೆಗೆ ತೊಂದರೆಯಾಗುತ್ತಿತ್ತು. ಘನವಾಹನಗಳಿಗೆ ಮರದ ರೆಂಬೆ ಕೊಂಬೆಗಳು ಬಡಿಯುತ್ತಿದ್ದವು. ಸ್ಥಳೀಯರ ವಿನಂತಿ ಮೇರೆಗೆ ತ್ರಾಸಿಯಲ್ಲಿ ಸಂಚರಿಸುತ್ತಿದ್ದ ಆನೆ ಸಾಗಿಸುವ ಸಾಯಿಬಾಬಾ ಭಕ್ತವಂದ ಜನರಿಗೆ ಆಗುತ್ತಿರುವ ಸಂಕಷ್ಟ ದೂರ ಮಾಡಿದೆ. ರಸ್ತೆಗೆ ಚಾಚಿಕೊಂಡಿದ್ದ ಅಶ್ವತ್ಥ ವಕ್ಷದ ರೆಂಬೆ ಕೊಂಬೆ ಕಡಿದು ಆನೆಗೆ ನೀಡಲಾಯಿತು. ಆನೆ ರೆಂಬೆ ಕೊಂಬೆಯಲ್ಲಿನ ಎಲೆ ಮೇಯ್ದು ಹೊಟ್ಟೆ ತುಂಬಿಸಿಕೊಂಡಿತು. ಇದರೊಂದಿಗೆ ಸ್ಥಳೀಯರು, ವಾಹನ ಸವಾರರು ಕೆಲದಿನಗಳಿಂದ ಎದುರಿಸುತ್ತಿದ್ದ ಸಂಕಷ್ಟಕ್ಕೂ ಪರಿಹಾರ ದೊರಕಿತು.

ಕೃಪೆ: ವಿಕ
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com