ಉಡುಪಿಯ ಪ್ರಸಾದ್ ನೇತ್ರಾಲಯಕ್ಕೆ ವಿಜಾಲಿಸ್ 500

ಉಡುಪಿ: ಕೇವಲ 1.8 ಮಿಮಿ ಅಂದರೆ ಪೆನ್ನಿನ ಮೊನೆಯಷ್ಟು ಸಣ್ಣ ಗಾಯ ಮಾಡಿ ಕಣ್ಣಿನ ಪೊರೆಯ ಶಸ್ತ್ರಚಿಕಿತ್ಸೆ ಮಾಡುವ ಮೈಕ್ರೋ ಇನ್ಸಿಶನಲ್ ಕೆಟರ್ಯಾಕ್ ಸರ್ಜರಿ(ಎಂಐಸಿಎಸ್) ಮಾಡುವ ಅತ್ಯಾಧುನಿಕ ಯಂತ್ರವೊಂದು ಅವಿಭಜಿತ ದ.ಕ. ಜಿಲ್ಲೆಯ ಸುಪ್ರಸಿದ್ಧ ಕಣ್ಣಿನ ಆಸ್ಪತ್ರೆ ಪ್ರಸಾದ್ ನೇತ್ರಾಲಯಕ್ಕೆ ಬಂದಿದೆ.
       ಜರ್ಮನಿಯ ಕಾರ್‌ಲೈಜಸ್ ಕಂಪನಿಯ ವಿಜಾಲಿಸ್ 500 ಎಂಬ ಈ ಯಂತ್ರ ಕರ್ನಾಟಕದಲ್ಲಿ ಮೊತ್ತಮೊದಲ ಬಾರಿ ಪ್ರಸಾದ್ ನೇತ್ರಾಲಯಕ್ಕೆ ತರಿಸಲಾಗಿದೆ. ಈಗಾಗಲೇ ಸುಮಾರು 50 ಜನರಿಗೆ ಈ ಯಂತ್ರದ ಮೂಲಕ ಶಸ್ತ್ರಚಿಕಿತ್ಸೆ ನಡೆಸಲಾಗಿದ್ದು ರೋಗಿಗಳಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ ಎಂದು ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಕೃಷ್ಣ ಪ್ರಸಾದ್ ತಿಳಿಸಿದ್ದಾರೆ.
     ಪೊರೆ ಶಸ್ತ್ರಚಿಕಿತ್ಸೆಯಲ್ಲಿ ಗಾಯ ಚಿಕ್ಕದಾದಷ್ಟೂ ಕಣ್ಣಿಗೆ ಹೆಚ್ಚು ಅನುಕೂಲಕರ. ಹೊಲಿಗೆರಹಿತವಾಗಿರುವ ಈ ಶಸ್ತ್ರಚಿಕಿತ್ಸೆಗೆ ಯಾವುದೇ ಚುಚ್ಚುಮದ್ದು ಅಥವಾ ಅರಿವಳಿಕೆ ಅಗತ್ಯವಿಲ್ಲ. ಶಸ್ತ್ರಚಿಕಿತ್ಸೆ ಆದ ಮರುದಿನವೇ ರೋಗಿ ತನ್ನ ಕೆಲಸಕ್ಕೆ ಹಾಜರಾಗಬಹುದು. ಶಸ್ತ್ರಚಿಕಿತ್ಸೆಯ ವೇಳೆ ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ, ಶಸ್ತ್ರಚಿಕಿತ್ಸೆ ಆದ ಬಳಿಕ ದೃಷ್ಟಿ ಹೆಚ್ಚಳವಾಗುವ ಅಸ್ಟಿಗ್ಮಾಟಿಸಂ ಇರುವುದಿಲ್ಲ ಎನ್ನುತ್ತಾರೆ ಡಾ. ಕೃಷ್ಣ ಪ್ರಸಾದ್.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com