ಉಚಿತ ಶ್ರವಣ ಸಾಧನ ವಿತರಣೆ

ಉಡುಪಿ: ರೆಡ್‌ಕ್ರಾಸ್‌ ಸಂಸ್ಥೆ ರಾಜ್ಯ ಶಾಖೆ ಮತ್ತು ಅಮೆರಿಕದ ಸ್ಟಾರ್‌ ಕೀ ಫೌಂಡೇಶನ್‌ ವತಿಯಿಂದ ಶ್ರವಣದೋಷವುಳ್ಳ 6ರಿಂದ 14 ವರ್ಷ ಪ್ರಾಯದ ಮಕ್ಕಳಿಗೆ ಉಚಿತವಾಗಿ ನೀಡುವ ಶ್ರವಣ ಸಾಧನ ವಿತರಣೆಗೆ ಸಂಬಂಧಿಸಿ ಮಕ್ಕಳ ಕಿವಿಯ ಅಳತೆಯನ್ನು ಸ್ಟಾರ್‌ ಕೀ ಸಿಬಂದಿಗಳು ಸೆ.14ರಂದು ತೆಗೆಯುವರು.
     ಉಡುಪಿ ಮತ್ತು ದ.ಕ. ಜಿಲ್ಲೆಯಲ್ಲಿ ಈಗಾಗಲೇ ಅರ್ಜಿ ಸಲ್ಲಿಸಿದವರು ಬೆಳಗ್ಗೆ 9ರಿಂದ 12 ಗಂಟೆವರೆಗೆ ಉಡುಪಿ ಅಜ್ಜರಕಾಡು ರೆಡ್‌ಕ್ರಾಸ್‌ ಭವನಕ್ಕೆ ಮತ್ತು ಅಪರಾಹ್ನ 2 ಗಂಟೆಗೆ ಮಂಗಳೂರು ಲೇಡಿಹಿಲ್‌ ಗಾಂಧಿನಗರ ಹಿ.ಪ್ರಾ.ಶಾಲೆಗೆ ಆಗಮಿಸಬೇಕು ರೆಡ್‌ಕ್ರಾಸ್‌ ರಾಜ್ಯ ಸಭಾಪತಿ ಬಸ್ರೂರು ರಾಜೀವ ಶೆಟ್ಟಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com