ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿ ಆಹ್ವಾನ

ಉಡುಪಿ: ಭಾರತ ಸರಕಾರದ ನೆಹರೂ ಯುವ ಕೇಂದ್ರದಿಂದ ಜಿಲ್ಲಾ ಯುವ ಮಂಡಳಿ ಪ್ರಶಸ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಯುವ ಮಂಡಳಿಗಳು ಜಿಲ್ಲಾ ನೋಂದಣಾಧಿಕಾರಿಗಳ ಕಚೇರಿಯಲ್ಲಿ ನೋಂದಣಿಯಾಗಿದ್ದು, ನೆಹರೂ ಯುವ ಕೇಂದ್ರದಲ್ಲಿ ಸಂಯೋಜನೆ ಹೊಂದಿರಬೇಕು.

2012-13ರಲ್ಲಿ ಗ್ರಾಮದ ಅಭಿವೃದ್ಧಿಗಾಗಿ ಜನಪರ ಕಾರ್ಯಕ್ರಮಗಳನ್ನು ನಡೆಸಿರಬೇಕು. (ಸಾಕ್ಷರತೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಾರ್ಯಕ್ರಮಗಳು, ಪರಿಸರ ಸಂರಕ್ಷಣೆ, ಕ್ರೀಡೆ, ಸಾಂಸ್ಕೃತಿಕ, ಮಹಿಳಾ ಜಾಗೃತಿ, ವೃತ್ತಿಪರ ಶಿಕ್ಷಣ, ಗ್ರಾಮ ನೈರ್ಮಲ್ಯ, ಮಳೆ ನೀರು ಸಂಗ್ರಹ, ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ದಿನಗಳ ಆಚರಣೆ, ಶ್ರಮದಾನ ಇತ್ಯಾದಿ)

ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಅರ್ಜಿ ರಾಜ್ಯಮಟ್ಟಕ್ಕೆ ಅರ್ಹತೆ ಪಡೆಯುತ್ತದೆ. ಅರ್ಜಿ ಸಲ್ಲಿಸಲು ಅ. 20 ಕೊನೆಯ ದಿನ. ಅರ್ಜಿ ಹಾಗೂ ಹೆಚ್ಚಿನ ಮಾಹಿತಿಯನ್ನು ನೆಹರೂ ಯುವ ಕೇಂದ್ರ, ಡಿ.ಸಿ. ಆಫೀಸ್‌ ಕಾಂಪ್ಲೆಕ್ಸ್‌, ರಜತಾದ್ರಿ, 'ಬಿ' ಬ್ಲಾಕ್‌, ಮಣಿಪಾಲ, ಉಡುಪಿ ಜಿಲ್ಲೆ (0820-2574992); ನೆಹರೂ ಯುವ ಕೇಂದ್ರ, ಪಿಡಬ್ಲೂéಡಿ ಕಟ್ಟಡ, ನೆಹರೂ ಮೈದಾನ ರಸ್ತೆ, ಮಂಗಳೂರು (0824-2422264) ಕಚೇರಿಯಿಂದ ಪಡೆಯಬಹುದು ಎಂದು ಪ್ರಕಟನೆ ತಿಳಿಸಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com