20 ನಕ್ಸಲರ ತಲೆಗೆ 52 ಲಕ್ಷ ರೂ. ಬಹುಮಾನ

ಉಡುಪಿ: ರಾಜ್ಯದಲ್ಲಿ 20 ಮಂದಿ ನಕ್ಸಲರ ತಲೆಗೆ 52 ಲಕ್ಷ ರೂ. ಬಹುಮಾನವನ್ನು ಪೊಲೀಸ್ ಇಲಾಖೆ ಘೋಷಿಸಿದೆ. ಸಮಾಜದ ಮುಖ್ಯ ವಾಹಿನಿಗೆ ಬರಲು ಪೊಲೀಸ್ ಇಲಾಖೆ ಘೋಷಿಸಿದ ಶರಣಾಗತಿ ಪ್ಯಾಕೇಜಿಗೆ ನಕ್ಸಲರು ಸ್ಪಂದಿಸದ ಹಿನ್ನೆಲೆಯಲ್ಲಿ ಏಳು ಮಂದಿ ಉಗ್ರ ನಕ್ಸಲರ ತಲೆಗೆ ತಲಾ ಐದು ಲಕ್ಷ ರೂ. ಬಹುಮಾನವಿದೆ. ಇಬ್ಬರ ತಲೆಗೆ ತಲಾ 3 ಲಕ್ಷ ರೂ. ಹಾಗೂ 11 ಮಂದಿಯ ಪತ್ತೆಗೆ ತಲಾ ಒಂದು ಲಕ್ಷ ರೂ. ಬಹುಮಾನ ಘೋಷಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯ ಬರೋಬ್ಬರಿ 10 ಮಂದಿ ಉಗ್ರ ನಕ್ಸಲರ ಪಟ್ಟಿಯಲ್ಲಿ ಸೇರಿದ್ದಾರೆ. 

ಬೆಂಗಳೂರಿನ ಇಬ್ಬರು, ರಾಯಚೂರು, ಶಿವಮೊಗ್ಗ , ಉಡುಪಿ, ದಕ್ಷಿಣ ಕನ್ನಡ, ಚಿತ್ರದುರ್ಗ ಹಾಗೂ ಛತ್ತೀಸ್‌ಗಢ ರಾಜ್ಯದ ತಲಾ ಒಬ್ಬರು ನಕ್ಸಲ್ ತಂಡದಲ್ಲಿದ್ದರೂ ಅದರ ಇರವು ಪತ್ತೆಹಚ್ಚುವುದು ಸಾಧ್ಯವಾಗಿಲ್ಲ. ಇಬ್ಬರು ನಕ್ಸಲರ ಹೆಸರು ಗೊತ್ತೇ ಹೊರತು ಅವರ ಊರು ಪತ್ತೆ ಹಚ್ಚುವುದು ಇನ್ನೂ ಪೊಲೀಸ್ ಇಲಾಖೆಗೆ ಸಾಧ್ಯವಾಗಿಲ್ಲ. ಪೊಲೀಸ್ ಅಧಿಕಾರಿಗಳ ಪ್ರಕಾರ, ಪಟ್ಟಿಯಲ್ಲಿರುವ ನಕ್ಸಲರ ಮೇಲೆ ಕೊಲೆ, ಬೆದರಿಕೆ, ಸುಲಿಗೆ ಸಹಿತ ತಲಾ 5 ಪ್ರಕರಣಗಳಿವೆ. 5ಲಕ್ಷ ರೂ. ಬಹುಮಾನವುಳ್ಳ ಉಡುಪಿ ಜಿಲ್ಲೆಯ ವಿಕ್ರಂ ಗೌಡನಿಗೂ 1 ಲಕ್ಷ ರೂ. ಬಹುಮಾನವುಳ್ಳ ಚಿಕ್ಕಮಗಳೂರಿನ ಸಾವಿತ್ರಿಗೂ ಮದುವೆಯಾಗಿದೆ. ಅರಣ್ಯ ಭೂಮಿಯಿಂದ ಹೊರ ಬಂದು ಪುನರ್ವಸತಿ ಹೊಂದುವವರಿಗೆ 10ಲಕ್ಷ ರೂ. ಪರಿಹಾರ ಹಾಗೂ 2 ಎಕರೆ ಜಾಗ ಸಿಗಲಿದೆ. ರಾಜ್ಯ ಸರಕಾರ ನಕ್ಸಲ್ ಶರಣಾಗತಿಯ ಹೊಸ ಪ್ಯಾಕೇಜ್ ಪ್ರಕಟಿಸಿದ್ದು ವೈಯಕ್ತಿಕ ಹಾಗೂ ಶಸ್ತ್ರಾಸ್ತ್ರಗಳಿಗೆ ನೀಡುವ ಪರಿಹಾರದಲ್ಲಿ ವೃದ್ಧಿ ಮಾಡಲಾಗಿದೆ. ಯಾರ್ಯಾರಿಗೆ ಎಷ್ಟೆಷ್ಟು ?: 5ಲಕ್ಷ ರೂ.: ಬಿ. ಜಿ. ಕೃಷ್ಣಮೂರ್ತಿ ಚಿಕ್ಕಮಗಳೂರು, ಹೊಸಗದ್ದೆ ಪ್ರಭಾ ಶಿವಮೊಗ್ಗ, ನೀಲ್ಗುಳಿ ಪದ್ಮನಾಭ ಚಿಕ್ಕಮಗಳೂರು, ಲತಾ ಯಾನೆ ಲೋಕಮ್ಮ ಚಿಕ್ಕಮಗಳೂರು, ಕನ್ಯಾ ಕುಮಾರಿ ಯಾನೆ ಸುವರ್ಣ ಚಿಕ್ಕಮಗಳೂರು, ವಿಕ್ರಂ ಗೌಡ ನಾಡ್ಪಾಲು ಉಡುಪಿ, ಎ. ಎಸ್. ಸುರೇಶ ಚಿಕ್ಕಮಗಳೂರು. 3 ಲಕ್ಷ ರೂ.: ರಮೇಶ್ ಯಾನೆ ರಫಿ ಬೆಂಗಳೂರು, ವೀರಮಣಿ ಯಾನೆ ಸುನಿಲ್ ಬೆಂಗಳೂರು. 1 ಲಕ್ಷ ರೂ.: ಸಾವಿತ್ರಿ ಯಾನೆ ಉಷಾ ಚಿಕ್ಕಮಗಳೂರು, ಎಂ. ವನಜಾಕ್ಷಿ ಚಿಕ್ಕಮಗಳೂರು, ಭಾರತಿ ಯಾನೆ ದೀಪಾ, ಮನೋಜ್ ಛತ್ತೀಸ್‌ಗಢ, ಕಲ್ಪನಾ ಯಾನೆ ರಿಜ್ವಾನ್ ಬೇಗಂ ರಾಯಚೂರು, ಸುಂದರಿ ಯಾನೆ ಗೀತಾ ದಕ್ಷಿಣ ಕನ್ನಡ, ಜಾನ್ ಯಾನೆ ಜಯಣ್ಣ, ಸಿರಿಮನೆ ನಾಗರಾಜ್ ಚಿಕ್ಕಮಗಳೂರು, ರವೀಂದ್ರ ಚಿಕ್ಕಮಗಳೂರು, ಶ್ರೀಮತಿ ಚಿಕ್ಕಮಗಳೂರು, ಸಿ. ಎಂ. ನೂರ್ ಜುಲ್ಛೀಕರ್ ಚಿತ್ರದುರ್ಗ. ಮಾಹಿತಿ ಯಾರಿಗೆ ಕೊಡಬೇಕು? *ಐಜಿಪಿ ಮತ್ತು ಕಮಾಂಡರ್ ಎಎನ್‌ಎಫ್ ಕಾರ್ಕಳ(9480800502, 08258: 23311) *ಎಸ್ಪಿ , ಎಎನ್‌ಎಫ್ ಕಾರ್ಕಳ(9448092082, 08258: 233111) *ಎಸ್ಪಿ, ಶಿವಮೊಗ್ಗ(9480803301, 08182: 261400, 261413) *ಎಸ್ಪಿ, ಉಡುಪಿ(9480805401, 0820: 2534777, 2526444) *ಎಸ್ಪಿ, ಚಿಕ್ಕಮಗಳೂರು(94808905101, 08262: 230403, 235608) *ಎಸ್ಪಿ, ದಕ್ಷಿಣ ಕನ್ನಡ(9480805301, 0824: 2220503, 2220500) *ಎಸ್ಪಿ, ಹಾಸನ( 9480804701, 08172: 268410, 268845) *ಎಸ್ಪಿ, ಕೊಡಗು(9480804901, 08272: 229000, 228330) 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com