ಉಪೇಂದ್ರ ನಿರ್ದೇಶಿಸುತ್ತಿರುವ ಹೊಸ ಚಿತ್ರ 'ಉಪ್ಪಿ-2'

ಕನ್ನಡ ಚಿತ್ರರಂಗದಲ್ಲಿ ಡಿಫರೆಂಟ್ ಡೈರೆಕ್ಟರ್ ಅಂತಾ ಹೆಸರು ಪಡೆದಿರುವ ರಿಯಲ್ ಸ್ಟಾರ್ ಉಪೇಂದ್ರ, ಸೂಪರ್ ನಂತರ ಮತ್ತೆ ನಿರ್ದೇಶನಕ್ಕೆ ಇಳಿದಿದ್ದಾರೆ. ಉಪೇಂದ್ರ ಚಿತ್ರದ ಎರಡನೇ ಭಾಗ ಮಾಡುವುದಾಗಿ ಕಳೆದ ವರ್ಷ ಅವರ ಹುಟ್ಟುಹಬ್ಬದಲ್ಲಿ ಹೇಳಿದ್ದ ಉಪ್ಪಿ , ಈ ವರ್ಷದ ಹುಟ್ಟುಹಬ್ಬದಂದು ಚಿತ್ರಕ್ಕೆ ಮೂಹೂರ್ತ ಇಟ್ಟಿದ್ದಾರೆ. 
    ಇನ್ನೂ ಉಪ್ಪಿ ಸಿನಿಮಾ ಅಂದಮೇಲೆ ಕೇಳಬೇಕೆ ಪೋಸ್ಟರ್ಸ್ ನಲ್ಲೇ ಸಸ್ಪೆನ್ಸ್ ಇಟ್ಟಿರುತ್ತಾರೆ. ಉಪೇಂದ್ರ ನಿರ್ದೇಶಿಸುತ್ತಿರುವ ಹೊಸ ಪೋಸ್ಟರ್ಸ್ ಹೇಗಿರುತ್ತೆ ಅಂತ ಕಾಯ್ತಿದ್ದವರಿಗೆ ಉಪ್ಪಿ ಮತ್ತೆ ತಮ್ಮ ಡಿಫರೆಂಟ್ ಗಿಮಿಕ್ನಿಂದ ಹುಳು ಬಿಟ್ಟಿದ್ದಾರೆ. ಚಿತ್ರದ ಮೂಹೂರ್ತ ಆಹ್ವಾನ ಪತ್ರಿಕೆಯಲ್ಲಿ `ಎಲ್ಲದಕ್ಕೂ ಕಾರಣ ಒಳಗಿದೆ' ಎಂದು ಬರೆದು, ಒಳಗಡೆ ಒಂದು ಕನ್ನಡಿಯನ್ನು ಇಟ್ಟಿದ್ದಾರೆ.
      ಜೊತೆಗೆ ಇದರಲ್ಲಿ ಅಂದು ಉಪೇಂದ್ರ ನಾನು. ಇಂದು ಉಪೇಂದ್ರ ನೀನೂ ಎಂಬ ಬರಹ ಇದೆ. ಇದರ ಜೊತೆಯಲ್ಲಿ ಕನ್ನಡ ಹಾಗೂ ಇಂಗ್ಲೀಷ್ನಲ್ಲಿ ಸ್ವಾಗತ ಕೋರಿರುವ ಉಪ್ಪಿ, ಚಿತ್ರದ ಟೈಟಲ್ ಜೊತೆಗೆ `ಉಪ್ಪಿ unknownu' ಎಂದು ಇಂಗ್ಲೀಷ್ನಲ್ಲಿ ಬರೆಸಿದ್ದಾರೆ. ಇದೇ ತಿಂಗಳ 18ರಂದು ಅವರ ಹುಟ್ಟುಹಬ್ಬಕ್ಕೆ ಅಭಿಮಾನಿಗಳ ಎದುರು ಚಿತ್ರ ಸೆಟ್ಟೇರಲಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com