ವಿಶ್ವಕರ್ಮರಿಗೆ ಪ್ರತ್ಯೇಕ ನಿಗಮ ಸ್ಥಾಪನೆ: ಸೊರಕೆ

ಕಟಪಾಡಿ: ವಿಶ್ವಕರ್ಮ ಸಮಾಜದ ಶ್ರೇಯಸ್ಸಿಗಾಗಿ ವಿಶ್ವಕರ್ಮ ನಿಗಮ ಸ್ಥಾಪಿಸುವ ಗುರಿ ಇದೆ. ಬಜೆಟ್‌ನಲ್ಲೂ ಇದಕ್ಕಾಗಿ ಪ್ರತ್ಯೇಕ ಅನುದಾನ ಮೀಸಲಿಡಲಾಗಿದೆ. ಈ ಸಮಾಜದ ಅಭಿವೃದ್ಧಿಗೆ ಸರಕಾರ ಬದ್ಧವಾಗಿದೆ ಎಂದು ನಗರಾಭಿವೃದ್ಧಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದ್ದಾರೆ. ಕಟಪಾಡಿ ಶ್ರೀ ಕಾಳಿಕಾಂಬ ವಿಶ್ವಕರ್ಮೇಶ್ವರ ದೇವಸ್ಥಾನದಲ್ಲಿ ಆನೆಗುಂದಿ ಶ್ರೀ ಕಾಳಹಸ್ತೇಂದ್ರ ಸ್ವಾಮಿಗಳ ಚಾತುರ್ಮಾಸ್ಯ ವ್ರತ ಸಮಾರೋಪದಲ್ಲಿ ಮಾತನಾಡಿದರು. 

ಅಷ್ಟೋತ್ತರಶತ ಶ್ರೀ ಕಾಳಹಸ್ತೇಂದ್ರ ಸ್ವಾಮೀಜಿ ಆಶೀರ್ವಚನ ನೀಡಿ, ಮಾನವ ಪರರ ಹಿತಕ್ಕಾಗಿ ದುಡಿಯುವ ಮೂಲಕ ಸಾರ್ಥಕ್ಯ ಕಾಣಬೇಕು. ಅದೇ ನಿಜವಾದ ದೇವರ ಪೂಜೆ. ಗುರುಹಿರಿಯರ ಸೇವೆ ಮಾಡುವುದರಿಂದ ಸತ್ಪಲ ಪ್ರಾಪ್ತಿಯಾಗುತ್ತದೆ ಎಂದರು. 

ಆನೆಗುಂದಿ ಮಹಾ ಸಂಸ್ಥಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ ಮಾತನಾಡಿ, ತಮ್ಮ ಸಮಾಜಕ್ಕೆ ಮುಜರಾಯಿ ದೇವಸ್ಥಾನಗಳಲ್ಲಿ ಪ್ರಾತಿನಿಧ್ಯ ಹಾಗೂ ಸರಕಾರದಿಂದ ಸೂಕ್ತ ಪುರಸ್ಕಾರ ದೊರೆಯಬೇಕು. ಅಲ್ಲದೆ ಬೆಳಪುವಿನಲ್ಲಿ ಸ್ಥಾಪನೆಯಾಗಲಿರುವ ಆನೆಗುಂದಿ ಸಂಸ್ಥಾನಕ್ಕೆ ಸರಕಾರ ಆರ್ಥಿಕ ನೆರವು ನೀಡಬೇಕೆಂದು ಮನವಿ ಮಾಡಿದರು. ವಿಶ್ವಕರ್ಮ ಸಮಾಜದ ಪರವಾಗಿ ಸಚಿವರ ಮೂಲಕ ಸರಕಾರಕ್ಕೆ ಮನವಿ ನೀಡಲಾಯಿತು. 

ಶ್ರೀ ಕಾಳಿಕಾಂಬ ದೇವಸ್ಥಾನ ಮೊಕ್ತೇಸರ ಪಡುಕುತ್ಯಾರು ಸದಾಶಿವ ಆಚಾರ್ಯ ಅಧ್ಯಕ್ಷತೆ ವಹಿಸಿದ್ದರು. ವಿಧಾನ ಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಾಜಿ ಶಾಸಕ ಲಾಲಾಜಿ ಮೆಂಡನ್, ಕಟಪಾಡಿ ಗ್ರಾಪಂ ಅಧ್ಯಕ್ಷ ವಿನಯ ಬಳ್ಳಾಲ್, ಆನೆಗುಂದಿ ಸಂಸ್ಥಾನದ ಅಧ್ಯಕ್ಷ ತ್ರಾಸಿ ಸುಧಾಕರ ಆಚಾರ್ಯ, ವ್ರತ ನಿರ್ವಹಣೆ ಸಮಿತಿ ಗೌರವಾಧ್ಯಕ್ಷ ಗಂಗಾಧರ ಆಚಾರ್ಯ, ಬೆಳಗುತ್ತಿ ಮಠದ ಮಾತೋಶ್ರೀ ಸರಳಮ್ಮ ಗುರುನಾಥ ಸ್ವಾಮೀಜಿ ಉಪಸ್ಥಿತರಿದ್ದರು. 

ವೇ.ಮೂ. ಶಂಕರಾಚಾರ್ಯ ಗುರುನಾಥ ಸ್ವಾಮೀಜಿ ಧಾರ್ಮಿಕ ಪ್ರವಚನ ನೀಡಿದರು. ಕನ್ಯಾನ ಜನಾರ್ದನ ಆಚಾರ್ಯ ಪ್ರಾಸ್ತಾವಿಕ ಮಾತನಾಡಿದರು.
* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com