ನಟಿ ಪ್ರೀತಿ ಜಿಂಟಾ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್

ಮುಂಬೈ: ಚೆಕ್ ಬೌನ್ಸ್ ಪ್ರಕರಣವೊಂದರಲ್ಲಿ ಬಾಲಿವುಡ್ ನ ಲವ್ಲಿ ನಟಿ ಪ್ರೀತಿ ಜಿಂಟಾ ಸಂಕಷ್ಟಕ್ಕೆ ಸಿಲುಕಿದ್ದಾರೆ. ಅಂಧೇರಿಯ ಮೆಟ್ರೋ ಪಾಲಿಟನ್ ಕೋರ್ಟ್, ಪ್ರೀತಿ ಜಿಂಟಾ ವಿರುದ್ಧ ಜಾಮೀನು ರಹಿತ ಬಂಧನ ವಾರೆಂಟ್ ಹೊರಡಿಸಿದೆ. ಪ್ರತೀ ಜಿಂಟಾ ಪರ ವಕೀಲ ರತ್ನೇಶ್ವರ್ ಜಾ ಸುದ್ದಿಯನ್ನ ಖಚಿತಪಡಿಸಿದ್ದಾರೆ.

ಸದ್ಯ. ಪ್ರೀತಿ ಜಿಂಟಾ ವಿದೇಶದಲ್ಲಿದ್ದಾರೆ. ವಾರೆಂಟ್ ರದ್ದುಕೋರಿ ಬಾಂಬೆ ಹೈಕೋರ್ಟ್ ರಿಟ್ ಅರ್ಜಿ ಸಲ್ಲಿಸಲಾಗುವುದೆಂದು ವಕೀಲರು ತಿಳಿಸಿದ್ದಾರೆ.

ಏನಿದು ಪ್ರಕರಣ..?: ಕಳೆದ ವರ್ಷ ಬಿಡುಗಡೆಯಾದ `ಇಷ್ಕ್ ಇನ್ ಪ್ಯಾರಿಸ್' ಚಿತ್ರದ ಸಂಭಾಷಣೆಕಾರ ಅಬ್ಬಾಸ್ ಗೆ ಪ್ರೀತಿ ಜಿಂಟಾ 18.9 ಕೋಟಿ ರೂಪಾಯಿ ಚೆಕ್ ನೀಡಿದ್ದರು. ಆದರೆ, ಪ್ರೀತಿ ಜಿಂಟಾ ನೀಡಿದ್ದ ಚೆಕ್ ಬೌನ್ಸ್ ಆಗಿತ್ತು. ಈ ಸಂಬಂಧ ಅಬ್ಬಾಸ್, ಅಂಧೇರಿಯ ಕೋರ್ಟ್ ನಲ್ಲಿ ದಾವೆ ಹೂಡಿದ್ದರು. ಆದರೆ, ಪ್ರೀತಿ ಜಿಂಟಾ ಕೋರ್ಟ್ ಗೆ ಹಾಜರಾಗದೆ ನಿರ್ಲಕ್ಷ್ಯ ತೋರಿದ್ದರು. ಹೀಗಾಗಿ, ಕೋರ್ಟ್ ಜಾಮೀನು ರಹಿತ ಬಂಧನ ವಾರೆಂಟ್ ಜೊತೆಗೆ 5 ಸಾವಿರ ರೂಪಾಯಿ ದಂಡ ವಿಧಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com