ರಾಜ್ಯಮಟ್ಟದ ವನ್ಯಜೀವಿ ಛಾಯಾಚಿತ್ರ ಸ್ಪರ್ಧೆ

ಉಡುಪಿ: ಅರಣ್ಯ ಇಲಾಖೆ, ಕುದುರೆಮುಖ ವನ್ಯಜೀವಿ ವಿಭಾಗದ ವತಿಯಿಂದ 59ನೇ ವನ್ಯಜೀವಿ ಸಪ್ತಾಹದ ಅಂಗವಾಗಿ ಪಶ್ಚಿಮ ಘಟ್ಟಗಳ ಅದ್ಭುತಗಳು ಎಂಬ ವಿಷಯದಲ್ಲಿ ಛಾಯಾಚಿತ್ರ ಸ್ಪರ್ಧೆ ಆಯೋಜಿಸಲಾಗಿದೆ.
   ಪಶ್ಚಿಮ ಘಟ್ಟಗಳಲ್ಲಿ ಕಂಡುಬರುವ ಅಪೂರ್ವ ಪ್ರಾಣಿ - ಪಕ್ಷಿ ಸಂಕುಲಗಳ ಛಾಯಾಚಿತ್ರಗಳು ಮಾತ್ರ ಸ್ಪರ್ಧೆಗೆ ಕಳುಹಿಸಲು ಅವಕಾಶವಿದ್ದು, 30x20 ಸೆಂ.ಮೀ. ಅಳತೆಯ ಸಾಫ್ಟ್ ಹಾಗೂ ಹಾರ್ಡ್‌ ಕಾಪಿಗಳನ್ನು ಕಳುಹಿಸಬಹುದು. ಅದರೊಂದಿಗೆ 50 ಪದಗಳಿಗೆ ಮೀರದಂತೆ ಛಾಯಾಚಿತ್ರದಲ್ಲಿರುವ ಪ್ರಾಣಿ ಅಥವಾ ಪಕ್ಷಿ ಸಂಕುಲಗಳ ಹಾಗೂ ಅಲ್ಲಿನ ಪರಿಸರದ ಕುರಿತು ಒಕ್ಕಣೆ ಬರೆದಿರಬೇಕು.
    ಸ್ಪರ್ಧಾ ಪ್ರವೇಶ ಪತ್ರಗಳನ್ನು ಸೆ.26 ರೊಳಗೆ ಉಪ ಅರಣ್ಯ ಸಂರಕ್ಷಣಾಧಿಕಾರಿ, ಕುದುರೆಮುಖ ವನ್ಯಜೀವಿ ವಿಭಾಗ, ಕಾರ್ಕಳ, ಉಡುಪಿ ಜಿಲ್ಲೆ - 574104 ವಿಳಾಸಕ್ಕೆ ಕಳುಹಿಸಬಹುದು ಎಂದು ಪ್ರಕಟನೆ ತಿಳಿಸಿದೆ. ವಿಜೇತರಿಗೆ ನಗದು ಬಹುಮಾನವಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com