ಸಾಂಸ್ಕೃತಿಕ ರಸಪ್ರಶ್ನೆಯಿಂದ ಸನಾತನ ಸಂಸ್ಕತಿಯ ಪರಿಚಯ

ಕುಂದಾಪುರ: ರಸಪ್ರಶ್ನೆ ಕಾರ್ಯಕ್ರಮದ ಮೂಲಕ ವಿದ್ಯಾರ್ಥಿಗಳಿಗೆ ಭಾರತೀಯ ಇತಿಹಾಸ, ಸನಾತನ ಸಂಸ್ಕøತಿ, ವೇದ-ಪುರಾಣಗಳ ಉದಾತ್ತ ಪರಂಪರೆ ಹಾಗೂ ಜೀವನಮೌಲ್ಯಗಳ ಪರಿಚಯ ಹಾಗೂ ಅರಿವನ್ನು ಮೂಡಿಸುವ ಸಿದ್ಧಿವಿನಾಯಕ ಸಾಂಸ್ಕøತಿಕ ಕೇಂದ್ರದವರ ಪ್ರಯತ್ನ ಶ್ಲಾಘನೀಯ ಎಂದು ಬೈಂದೂರು ಸಮೂಹ ಸಂಪನ್ಮೂಲ ವ್ಯಕ್ತಿ ರಾಮಕೃಷ್ಣ ಅವರು ಹೇಳಿದರು.
  ಸ್ವಾಮಿ ವಿವೇಕಾನಂದರ 150ನೇ ಜನ್ಮವರ್ಷಾಚರಣೆ ಅಂಗವಾಗಿ ಯಳಜಿತ್ ಗ್ರಾಮದ ಸಿದ್ಧಿವಿನಾಯಕ ಸಾಂಸ್ಕೃತಿಕ  ಕೇಂದ್ರದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಪ್ರಕಟಿಸಲಾದ ಸಾಂಸ್ಕøತಿಕ ರಸಪ್ರಶ್ನೆ ಸಂಯೋಜನೆ ಪುಸ್ತಕ ಆಧರಿಸಿ ಬೈಂದೂರು ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟಂಬರ್ 14ರಂದು ಜರಗಿದ ಸಾಂಸ್ಕತಿಕ ರಸಪ್ರಶ್ನೆ ಸ್ಫರ್ಧೆಗೆ ಚಾಲನೆ ನೀಡಿ ಅವರು ಮಾತನಾಡಿದರು.
  ಶಾಲಾ ಮುಖ್ಯಶಿಕ್ಷಕ ಬಿ. ನಾರಾಯಣ ದೇವಾಡಿಗ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ ರಸಪ್ರಶ್ನೆ ಕಾರ್ಯಕ್ರಮವನ್ನು ಸಾಂಸ್ಕøತಿಕ ನೆಲೆಯಲ್ಲಿ ರೂಪಿಸಿದ ವಿನೂತನ ಪರಿಕಲ್ಪನೆಯಿಂದ ವಿದ್ಯಾರ್ಥಿಗಳ ಮೆದುಳಿಗೆ ಜ್ಞಾನದ ಮೇವು ನೀಡುವ ಪ್ರಯತ್ನ ಸಾರ್ಥಕ ಎಂದರು. 
  ಸಿದ್ಧಿವಿನಾಯಕ ಸಾಂಸ್ಕೃ ತಿಕ ಕೇಂದ್ರದ ಸಂಚಾಲಕ, ಲೇಖಕ ಮಂಗೇಶ್ ಶೆಣೈ ಮತ್ತು ಕಾರ್ಯಕ್ರಮದ ಸಂಯೋಜಕ, ಪತ್ರಕರ್ತ ಚಂದ್ರ ಕೆ. ಹೆಮ್ಮಾಡಿ ಅವರು ವಿದ್ಯಾರ್ಥಿಗಳಿಗೆ ರಸಪ್ರಶ್ನೆ ಸ್ಫರ್ಧೆ ನಡೆಸಿಕೊಟ್ಟರು. ಸಹಶಿಕ್ಷಕರಾದ ಪ್ರಭಾಕರ ಎಚ್., ವೀಣಾ ಹೆಗಡೆ, ಅನ್ನಪೂರ್ಣೇಶ್ವರಿ, ಭಾಗೀರಥಿ, ಗೌರವಶಿಕ್ಷಕರಾದ ನಾಗರತ್ನ, ಸರಸ್ವತಿ, ನಾಗರತ್ನ ದೇವಾಡಿಗ ಮೊದಲಾದವರು ಉಪಸ್ಥಿತರಿದ್ದರು. 
  ಸಹಶಿಕ್ಷಕ ತಿಮ್ಮಪ್ಪ ಗಾಣಿಗ ಅವರು ಸ್ವಾಗತಿಸಿದರು. ಚಂದ್ರ ಕೆ. ಹೆಮ್ಮಾಡಿ ಅವರು ಕಾರ್ಯಕ್ರಮ ನಿರ್ವಹಿಸಿದರು. ಸಹಶಿಕ್ಷಕಿ ಸುಮನಾ ಅವರು ವಂದಿಸಿದರು. ಸ್ಫರ್ಧೆಯಲ್ಲಿ ವಿಜೇತರಾದ ಹಾಗೂ ಪ್ರಶ್ನೆಗಳಿಗೆ ಸರಿಯುತ್ತರಗಳನ್ನು ನೀಡಿದ ಎಲ್ಲಾ ವಿದ್ಯಾರ್ಥಿಗಳಿಗೂ ಪುಸ್ತಕಗಳನ್ನು ಬಹುಮಾನವಾಗಿ ನೀಡಲಾಯಿತು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com