ಪಿ.ಪಿ. ಲಕ್ಷ್ಮಣನ್‌ಗೆ ಡಾ| ಶಿವರಾಮ ಕಾರಂತ ಪ್ರಶಸ್ತಿ

ಕುಂದಾಪುರ : ಕುಂದಾಪುರದ ಕೈರಳಿ ಸುಹೃದ್‌ವೇದಿ ಆಶ್ರಯದಲ್ಲಿ ಸೆ. 22ರಂದು ಸಂಜೆ 5ಕ್ಕೆ ರೋಟರಿ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ನಡೆಯುವ ಓಣಂ ಸಮಾರಂಭದಲ್ಲಿ ಅಂತಾರಾಷ್ಟ್ರಿಯ ಫುಟ್‌ಬಾಲ್‌ ಆಟಗಾರ, ಬಹುಮುಖ ಪ್ರತಿಭೆಯ ಸಮಾಜ ಸೇವಕ ಕಣ್ಣೂರಿನ ಪಿ.ಪಿ. ಲಕ್ಷ್ಮಣನ್‌ ಅವರಿಗೆ ಡಾ| ಶಿವರಾಮ ಕಾರಂತ ಪ್ರಶಸ್ತಿ ಪ್ರದಾನ ಮಾಡಲಾಗುವುದು.

ಉಸ್ತುವಾರಿ ಸಚಿವ ವಿನಯಕುಮಾರ್‌ ಸೊರಕೆ ಅವರು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ ಎಂದು ಕೈರಳಿ ಸುಹೃದ್‌ವೇದಿಯ ಅಧ್ಯಕ್ಷ ಕೆ.ಪಿ. ಶ್ರೀಶನ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com