ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಸುವ್ರತಾ ಅಡಿಗ

ಕೋಟ: ಇಲ್ಲಿನ ವಿವೇಕ ಬಾಲಕಿಯರ ಪ್ರೌಢಶಾಲೆಯ ವಿದ್ಯಾ ರ್ಥಿನಿ ಸುವ್ರತಾ ಅಡಿಗ ಅ.1ರಂದು ಡಾ. ಕೋಟ ಶಿವರಾಮ ಕಾರಂತ ಥೀಂ ಪಾರ್ಕ್‌ನಲ್ಲಿ ನಡೆಯಲಿರುವ ಮಕ್ಕಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ. ಸಾಹಿತ್ಯ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿಕೊಂಡಿರುವ ಇವರು ಈಗಾಗಲೇ 'ಸೂರ್ತಿ' ಮತ್ತು 'ಪಾತಾಳ ಸಿಹಿ ಗೆಣಸು' ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ಪಾತಾಳ ಸಿಹಿ ಗೆಣಸು ಪುಸ್ತಕಕ್ಕೆ ಹದಿನಾರು ವರ್ಷದೊಳಗಿನವರು ಬರೆದ ಅತ್ಯುತ್ತಮ ಪುಸ್ತಕಕ್ಕೆ ಸಿಗುವ ಶಹಾಪುರ ತಾಲೂಕಿನ ಸಂಧ್ಯಾ ವೇದಿಕೆಯ ವಿದ್ಯಾ ಸಾಗರ ಬಾಲ ಪುರಸ್ಕಾರ-2011 ಪ್ರಶಸ್ತಿ ಲಭಿಸಿದೆ. ಅಲ್ಲದೇ ಇದೇ ಪುಸ್ತಕಕ್ಕೆ ಕನ್ನಡ ಸಾಹಿತ್ಯ ಪರಿಷತ್‌ನ ಜಿ.ಪಿ. ರಾಜರತ್ನಂ ಸಂಸ್ಮರಣ ದತ್ತಿ ಪ್ರಶಸ್ತಿ ಬಂದಿದೆ. 
     ಹಲವಾರು ಕಥೆಗಳನ್ನು ಬರೆದಿರುವ ಇವರು ಮಕ್ಕಳ ಧ್ವನಿ ಕವಿ ಗೋಷ್ಠಿಯಲ್ಲಿ ಕವನ ವಾಚಿಸಿದ್ದಾರೆ. ಕೋಟದಲ್ಲಿ ನಡೆದ ಪ್ರಥಮ ಕಾಂಬ ಮಕ್ಕಳ ಸಾಹಿತ್ಯ ಸಮ್ಮೇಳನದ ಕತೆ, ಕವಿಗೋಷ್ಠಿಯ ಅಧ್ಯಕ್ಷತೆ, ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯ ವರ್ಷ ಸಂಭ್ರಮದ ಅಧ್ಯಕ್ಷತೆ, ಸಂಪದ-2012ರ ಕಥಾಗೋಷ್ಠಿ ಅಧ್ಯಕ್ಷತೆ ವಹಿಸಿಕೊಂಡ ಪ್ರತಿಭಾನ್ವಿತೆ. ಸವಿಗನ್ನಡ, ಪ್ರಣತಿ ಕೈ ಬರಹ ಪತ್ರಿಕೆಯನ್ನು ಕಳೆದ 2 ವರ್ಷಗಳಿಂದ ಹೊರತರುತ್ತಿದ್ದಾರೆ. ಡಾ. ಕೋಟ ಶಿವರಾಮ ಕಾರಂತ ಮಕ್ಕಳ ಸಾಹಿತ್ಯ ವೇದಿಕೆಯ ವಿದ್ಯಾರ್ಥಿ ಪ್ರತಿನಿಧಿಯಾಗಿದ್ದು, ವೇದಿಕೆ ಹೊರ ತರುತ್ತಿರುವ ಅರಳು ಮೊಗ್ಗು ಪತ್ರಿಕೆಯಲ್ಲಿ ಇವರ ಕಥೆ, ಕವನ ಪ್ರಕಟವಾಗಿದೆ.
* News of Kundapura, Information of Kundapura, Photos of Kundapura, Videos of Kundapura, Kundapura Kannada | Kundapra Kannada, Kundapra Kannada Jokes, Kundapra Kannada Songs| 
*Tourism Places around Kundapura, Historical Places around Kundapura, Temples around Kundapura
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com