ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ ಗುರುತುಚೀಟಿ ವಿತರಣಾ ಸಮಾರಂಭ

ಕುಂದಾಪುರ: ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ (ರಿ) ಕುಂದಾಪುರ ಇದರ ಆಶ್ರಯದಲ್ಲಿ ಕುಂದಾಪುರದ ಲಕ್ಷ್ಮಿ ನರಸಿಂಹ ಕಲಾಮಂದಿರದಲ್ಲಿ ಗುರುತುಚೀಟಿ ಬಿಡುಗಡೆ ಹಾಗೂ ವಿತರಣಾ ಕಾರ್ಯಕ್ರಮ ಜರಗಿತು.
ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರು ಗುರುತು ಚೀಟಿ ಬಿಡುಗಡೆಗೊಳಿಸಿ ವಿತರಿಸಿದರು.
     ಕುಂದಾಪುರ ತಾಲೂಕು ಚಿನ್ನ ಬೆಳ್ಳಿ ಕೆಲಸಗಾರರ ಸಂಘ (ರಿ) ಇದರ ಅಧ್ಯಕ್ಷ ಕೋಟ ಕೇಶವ ಆಚಾರ್ಯ ಅವರು ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕುಂದಾಪುರ ಬಿಜೆಪಿ ಕ್ಷೇತ್ರಾಧ್ಯಕ್ಷ ರಾಜೇಶ್‌ ಕಾವೇರಿ, ಉದ್ಯಮಿಗಳಾದ ಸತೀಶ್‌ ಶೇಟ್‌, ಹರೀಶ್‌ ಬುರುಡೆ, ಪುಂಡಲೀಕ ಪಾಟೇಲ್‌, ಕುಂದಾಪುರ ಕೆನರಾ ಬ್ಯಾಂಕ್‌ನ ವಜ್ರೆàಶ್ವರಿ, ಉಡುಪಿ ಜಿಲ್ಲಾ ಚಿನ್ನ ಬೆಳ್ಳಿ ಕೆಲಸಗಾರರ ಸಂಘದ ಅಧ್ಯಕ್ಷ ಕಪ್ಪೆಟ್ಟು ಬಾಲಕೃಷ್ಣ ಆಚಾರ್ಯ ಉಪಸ್ಥಿತರಿದ್ದರು. ಈಸಂದರ್ಭದಲ್ಲಿ ಸದಸ್ಯರಿಗೆ ಆರೋಗ್ಯ ವಿಮಾಪಾಲಿಸಿಯನ್ನು ಹಸ್ತಾಂತರಿಸಲಾಯಿತು.
ಸಂಘದ ಕೋಶಾಧಿಕಾರಿ ಎ.ಗಣೇಶ್‌ ಆಚಾರ್ಯ ಕೋಟ,ಜೊತೆ ಕಾರ್ಯದರ್ಶಿ ಸಂಜಯ್‌ ಪಾಟೇಲ್‌, ರವೀಂದ್ರ ಆಚಾರ್ಯ, ಕೃಷ್ಣಯ್ಯ ಆಚಾರ್ಯ ಸಾಲಿಗ್ರಾಮ, ಜಗದೀಶ ಆಚಾರ್ಯ ಮೊದಲಾದವರು ಹಾಜರಿದ್ದರು.
     ರಾಘವೇಂದ್ರ ಆಚಾರ್ಯ ಸಾಲಿಗ್ರಾಮ ಸ್ವಾಗತಿಸಿದರು. ದಿನೇಶ್‌ ಆಚಾರ್ಯ ಚೇಂಪಿ ಕಾರ್ಯಕ್ರಮ ನಿರೂಪಿಸಿದರು. ಶ್ರೀಧರ ಆಚಾರ್ಯ ವಂದಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com