ದೇಶ ಪ್ರೇಮವನ್ನು ಬೆಳೆಸಿಕೊಂಡು ಬಲಾಡ್ಯರಾಗೋಣ: ಸುಪ್ರಸಾದ್‌ ಶೆಟ್ಟಿ

ಕುಂದಾಪುರ: ಭಾರತೀಯ ಮಜ್ದೂರ್‌ ಸಂಘ ಕಾರ್ಮಿಕರ ಸಂಘಟನೆಯಲ್ಲಿ ಅಗ್ರ ಪಂಕ್ತಿಯಲ್ಲಿರುವ ವಿಭಿನ್ನವಾದ, ತತ್ವ, ಸಿದ್ದಾಂತದಿಮದ ಕೆಲಸಮಾಡುವ ಸಂಘವಾಗಿದೆ. ಜಿಲ್ಲೆಯಲ್ಲಿ ಅತ್ಯಂತ ಪ್ರಭಾವಶಾಲಿ ಘಟಕವಾಗಿ ಮೂಡಿಬರುತ್ತಿರುವ ಕುಂದಾಪುರ ಘಟಕ ಮುಂಬರುವ ದಿನಗಳಲ್ಲಿ ನಿರ್ಣಾಯಕ ಸಂಘಟನೆಯಾಗಬೇಕು ಎಂದು ವಿಶ್ವ ಹಿಂದು ಪರಿಷತ್‌ನ ಉಡುಪಿ ಜಿಲ್ಲಾಧ್ಯಕ್ಷ ಸುಪ್ರಸಾದ್‌ ಶೆಟ್ಟಿ ಬೈಕಾಡಿ ಹೇಳಿದರು.

ಅವರು ಭಾರತೀಯ ಆಟೋರಿಕ್ಷಾ ಮಜ್ದೂರ್‌ ಸಂಘ (ಬಿ.ಎಂ.ಎಸ್‌.)ಇದರ ವತಿಯಿಂದ ನಡೆದ ವಾರ್ಷಿಕ ಮಹಾಸಭೆಯನ್ನು ಉದ್ದೇಶಿಸಿ ಮಾತನಾಡಿದರು.

ಭಾರತೀಯ ಮಜ್ದೂರ್‌ ಸಂಘ ದೇಶ ಪ್ರೇಮವನ್ನು ಗಟ್ಟಿಗೊಳಿಸುವ ಸಂದೇಶವನ್ನು ನೀಡುವ ಸಂಘವಾಗಿದೆ. ಈ ಸಮಘಟನೆಯಲ್ಲಿ ತೊಡಗಿಕೊಂಡಾಗ ಮಾತ್ರ ನಾವು ಸಮಘಟಿತರಾಗಿ ಬೆಳೆಯಲು ಸಾಧ್ಯ . ನಾವೆಲ್ಲ ವ್ಯಕ್ತಿ ವ್ಯಕ್ತಿಗಳಾಗಿ ಬೆಳೆಯುವುದರೊಂದಿಗೆ ದೇಶ ಪ್ರೇಮವನ್ನು ಬೆಳೆಸಿಕೊಳ್ಳೋಣ ಎಂದರು.

ಕುಂದಾಪುರ ತಾಲೂಕು ಭಾರತೀಯ ಆಟೋರಿಕ್ಷಾ ಮಜ್ದೂರ್‌ ಸಂಘ (ಬಿ.ಎಂ.ಎಸ್‌.) (ರಿ) ಗೌರವಾಧ್ಯಕ್ಷ , ನ್ಯಾಯವಾದಿ ಶ್ರೀಧರ ಎಂ. ವಹಿಸಿದ್ದರು. ನ್ಯಾಶನಲ್‌ ಇನ್ಸೂರೆನ್ಸ್‌ನ ಕುಂದಾಪುರ ಶಾಖೆಯ ಶಾಖಾಧಿಕಾರಿ ಪ್ರತಿಭಾ ಶೆಟ್ಟಿ ಅವರು ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿ ಅವಿಭಜಿತ ದ.ಕ.ಜಿಲ್ಲೆಯ ಬಿ.ಎಂ.ಎಸ್‌. ಪ್ರಮುಖ ವಿಶ್ವನಾಥ ಶೆಟ್ಟಿ , ನಾಗೇಂದ್ರ ಭಟ್‌, ಸುರೇಶ್‌ ಪುತ್ರನ್‌, ಸತೀಶ್‌ ಕೆ.ಟಿ., ಸುರೇಶ್‌ ಪುತ್ರನ್‌ ಉಪಸ್ಥಿತರಿದ್ದರು.

ಕುಂದಾಪುರ ಬಿ.ಎಂ.ಎಸ್‌. ಸ್ಥಾಪಕಾಧ್ಯಕ್ಷ ಶಂಕರ ಅಂಕದಕಟ್ಟೆ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

ರವಿ ಕಾರ್ಯಕ್ರಮ ನಿರ್ವಹಿಸಿದರು.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com