ತಗ್ಗರ್ಸೆ ಶಾರದೋತ್ಸವದ ಕರೆಯೋಲೆ

ಬೈಂದೂರು: ಇಲ್ಲಿನ ತಗ್ಗರ್ಸೆ ಶ್ರೀ ಬ್ರಹ್ಮದೇವರ ವಠಾರದಲ್ಲಿ 25ನೇ ವರ್ಷದ ಸಾರ್ವಜನಿಕ ಶ್ರೀ ಶಾರದೋತ್ಸವ ಜರುಗಲಿದೆ. ಅಕ್ಟೋಬರ್ 01ರಿಂದ ಮೂರು ದಿನಗಳ ಕಾಲ ಜರುಗುವ ಉತ್ಸವದಲ್ಲಿ ದಿ. 1ರ ಬೆಳಿಗ್ಗೆ ಶ್ರೀ ಶಾರದೆಯ ಮೂರ್ತಿಯಲ್ಲಿ ಪ್ರತಿಷ್ಠಾಪಿಸಲಾಗುವುದು. ಬಳಿಕ ದುರ್ಗಾಹೋಮ ಇತ್ಯಾದಿ ಧಾರ್ಮಿಕ ಕಾರ್ಯಕ್ರಮಗಳು, ಮಹಾ ಅನ್ನಸಂತರ್ಪಣೆ ಜರುಗಲಿದೆ. ಅದೇ ದಿನ ರಾತ್ರಿ ಮಂಗಳೂರಿನ ಕಲಾಮಂದಿರ್ ತಂಡದಿಂದ ನೃತ್ಯ ಕಾರ್ಯಕ್ರಮ ಜರುಗಲಿದೆ. ದಿ.2ರ ಬೆಳಿಗ್ಗೆ 9ರಿಂದ ಕೆ.ಎಂ.ಸಿ. ಮಣಿಪಾಲ ಇಲ್ಲಿನ ವೈದ್ಯರಿಂದ 'ಉಚಿತ ಆರೋಗ್ಯ ತಪಾಸಣಾ ಶಿಬಿರ' ಹಾಗೂ ರಾತ್ರಿ ತೆಕ್ಕಟ್ಟೆಯ ಶಿವಶಕ್ತಿ ಕಲಾ ತಂಡದಿಂದ 'ಗಮ್ಮತ್ತಿನ ಮದಿ' ಸಾಮಾಜಿಕ ನಗೆ ನಾಟಕ ನಡೆಯಲಿದೆ. ದಿ. 3ರ ಸಂಜೆ ಭವ್ಯ ಪುರಮೆರವಣಿಗೆಯೊಂದಿಗೆ ಶ್ರೀ ಶಾರದೆಯ ಮೂರ್ತಿಯಲ್ಲಿ ವಿಸರ್ಜಿಸಲಾಗುವುದು ಎಂದು  ಸಮಿತಿಯ ಪ್ರಕಟಣೆ ತಿಳಿಸಿದೆ.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com