ಮಾದರಿ ಗ್ರಾಮ ಸಭೆಗೆ ಪೂರ್ವಭಾವಿ ಸಭೆ

ವಂಡ್ಸೆ: ‘ಗ್ರಾಮದ ಪ್ರತಿಯೊಬ್ಬ ನಾಗರಿಕರೂ ಗ್ರಾಮ ಸಭೆಯ ಸದಸ್ಯರು. ಸ್ಥಳೀಯ ಸರ್ಕಾರವಾದ ಗ್ರಾಮ ಪಂಚಾಯತ್‍ನಲ್ಲಿ ನಡೆಯುವ ವಾರ್ಡ್ ಸಭೆ ಮತ್ತು ಗ್ರಾಮ ಸಭೆಗಳಲ್ಲಿ ಸಕ್ರೀಯವಾಗಿ ಭಾಗವಹಿಸಿ, ಪ್ರಜಾಪ್ರಭುತ್ವದ ತಳಹದಿಯಾದ ಪ್ರಜೆಗಳಿಗೆ ನೀಡಿರುವ ಅಧಿಕಾರವನ್ನು ಸದ್ಬಳಕೆ ಮಾಡಿಕೊಳ್ಳಬೇಕು’ ಎಂದು ಪಂಚಾಯತ್ ರಾಜ್ ಸಂಪನ್ಮೂಲ ವ್ಯಕ್ತಿಗಳು   ನ್ಯಾಯವಾದಿ, ಟಿ.ಬಿ. ಶೆಟ್ಟಿ ವಂಡ್ಸೆ ಪಂಚಾಯತ್‍ನ ಮಾದರಿ ಗ್ರಾಮ ಸಭೆಯ ಪೂರ್ವಭಾವಿ ತಯಾರಿ ಸಭೆಯಲ್ಲಿ ಮಾತನಾಡುತ್ತಾ ಹೇಳಿದರು.
ಸೆ.21ರಂದು ನೆಡೆಯುವ ವಂಡ್ಸೆ ಗ್ರಾಮ ಪಂಚಾಯತ್‍ನ ಗ್ರಾಮ ಸಭೆಗೆ ಪೂರ್ವಭಾವಿಯಾಗಿ ಸೆ. 13ರಂದು ನಡೆಸಿದ ‘ಮಾದರಿ ಗ್ರಾಮ ಸಭೆಯ ಪೂರ್ವಭಾವಿ ಸಭೆ’ಯಲ್ಲಿ ‘ಗ್ರಾಮ ಪಂಚಾಯತ್ ಹಕ್ಕೋತ್ತಾಯ ಆಂದೋಲನ’ ಸೌಕರ್ಯಕಾರರಾಗಿ ಭಾಗವಹಿಸಿತ್ತು. ಆ ಸಭೆಯಲ್ಲಿ ಗ್ರಾಮಸಭೆಗೆ ಪೂರ್ವದಲ್ಲಿ ನಡೆಯಬೇಕಾದ ವಿವಿಧ ಗುಂಪುಗಳ ಜೊತೆಗಿನ ಚರ್ಚೆ, ಪ್ರದೇಶವಾರು ಸಭೆ, ವಾರ್ಡ್ ಸಭೆಯಂತಹ ವಿವಿಧ ಸಭೆಗಳ ಮಹತ್ವ, ಅದರಲ್ಲಿ ಅರ್ಥಪೂರ್ಣ ಜನ ಭಾಗವಹಿಸುವಿಕೆಯ ಪರಿಣಾಮಗಳ ಕುರಿತು ಚರ್ಚೆ ನಡೆಸಲಾಯಿತು. ಅಲ್ಲದೇ ಈ ಎಲ್ಲಾ ಸಭೆಗಳನ್ನು ನಡೆಸಿ, ಅವುಗಳಿಂದ ಬಂದ ತೀರ್ಮಾನಗಳನ್ನು ಗ್ರಾಮ ಸಭೆಯ ಮುಂದಿಡಬೇಕೆಂದು ನಿರ್ಣಯಿಸಲಾಯಿತು. ಅಲ್ಲದೇ ಪ್ರದೇಶವಾರು ಗ್ರಾಮ ಸಭಾ ಸದಸ್ಯರ ಬೇಡಿಕೆಯ ಪಟ್ಟಿ ತಯಾರಿಸುವುದು ಹಾಗೂ ಆಧ್ಯತಾ ಪಟ್ಟಿ ತಯಾರಿಸುವ ಕುರಿತು ಚರ್ಚಿಸಲಾಯಿತು.
     ಮತ್ತೋರ್ವ ಸಂಪನ್ಮೂಲ ವ್ಯಕ್ತಿ ಎಸ್. ಜನಾರ್ಧನ ಮರವಂತೆ ಇವರು ಪಂಚಾಯತ್ ರಾಜ್ ವ್ಯವಸ್ಥೆ ನಡೆದು ಬಂದ ಹಾದಿಯ ಕುರಿತು ಮಾಹಿತಿ ನೀಡಿದರು. ವಂಡ್ಸೆ ಗ್ರಾಮ ಪಂಚಾಯತ್‍ನ ಅಧ್ಯóóóಕ್ಷ ಉದಯ ಕುಮಾರ ಶೆಟ್ಟಿ, ಕುಂದಾಪುರ ರೋಟರಿ ದಕ್ಷಿಣ ಕ್ಲಬ್‍ನ ಅಧ್ಯóóóóಕ್ಷÀ ಶ್ರೀಧರ ಶೆಟ್ಟಿ,  ಸಿ.ಡಬ್ಲ್ಯೂ.ಸಿ. ಯ ಸಹ ನಿರ್ದೇಶಕ  ವೆಂಕಟೇಶ ಉಪಸ್ಥಿತರಿದ್ದರು.
     ಈ ಸಭೆಯಲ್ಲಿ ವಂಡ್ಸೆ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿನ ಗ್ರಾಮ ಪಂಚಾಯತ್‍ನ ಸದಸ್ಯರು, ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಪದಾಧಿಕಾರಿಗಳು, ಸ್ತ್ರೀಶಕ್ತಿ ಸ್ವಸಹಾಯ ಸಂಘದ ಪ್ರತಿನಿಧಿಗಳು, ಭಾರತ ನಿರ್ಮಾಣ  ಸ್ವಯಂ ಸೇವಕರು, ಶ್ರೀಚಕ್ರ ಯುವಕ ಮಂಡಲದ ಅಧ್ಯಕ್ಷರು, ಹಾಲು ಉತ್ಪಾದಕರ ಸಂಘದ ಅಧ್ಯಕ್ಷರು, ತಿರುಮಲ ಲಕ್ಷ್ಮೀ ವೆಂಕಟರಮಣ ದೇವಸ್ಥಾನದ ಮೂಕ್ತೇಸರರು, ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಹೆಚ್.ಎಮ್.ಸಿ ಫ್ರೆಂಡ್ಸ್ , ಆಶೀರ್ವಾದ ಫ್ರೆಂಡ್ಸ್, ಯುವಶಕ್ತಿ ಮಿತ್ರ ಮಂಡಳಿ ಶಾರ್ಕೆ, ಶ್ರೀ ಯಕ್ಷಿ ಯುವ ಸಂಘಟನೆ,  ಸಿ.ಡಬ್ಲ್ಯೂ.ಸಿ.ಯ ಕಾರ್ಯಕರ್ತರು, ಗ್ರಾಮಸ್ಥರು  ಭಾಗವಹಿಸಿದ್ದರು.  ವಂಡ್ಸೆ ಗ್ರಾಮ ಪಂಚಾಯತ್‍ನ ಅಭಿವೃದ್ಧಿ ಅಧಿಕಾರಿ  ನಾರಾಯಣ ಶೆಟ್ಟಿ ನಿರ್ವಸಿದರು, ಗ್ರಾ.ಪಂ. ಅಧ್ಯಕ್ಷ ಉದಯಕುಮಾರ್ ಶೆಟ್ಟಿ ಸ್ವಾಗತಿಸಿದರು, ಗ್ರಾ.ಪಂ. ಕಾರ್ಯದರ್ಶಿ  ಶಂಕರ ಆಚಾರ್ಯ ವಂದಿಸಿದರು.


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com