ನಟಿ ಪ್ರಿಯಾಂಕಾ ಚೋಪ್ರಾ ಹೆಸರಿನ ಆನ್ ಲೈನ್ ವೈರಸ್

ಬಾಲಿವುಡ್ ನ ಪಿಗ್ಗಿ ಚಾಪ್ಸ್ ಮೋಹಕ ನಟಿ ಪ್ರಿಯಾಂಕಾ ಚೋಪ್ರಾ ಆನ್ ಲೈನ್ ನ ಅತ್ಯಂತ ಅಪಾಯಕಾರಿ ನಟಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದಾರೆ. ಬಾಲಿವುಡ್ ತಾರೆಯರ ಹೆಸರನ್ನ ಬಳಸಿಕೊಂಡು ಆನ್ ಲೈನ್ ಗೆ ವೈರಸ್ ಸೇರಿಸುವುದು, ವೆಬ್ ಸೈಟ್ ಹ್ಯಾಕ್ ಮಾಡುವ ಕುಕೃತ್ಯಗಳಲ್ಲಿ ದುಷ್ಕರ್ಮಿಗಳು ತೊಡಗಿರುತ್ತಾರೆ. ಈ ರೀತಿ ಆನ್ ಲೈನ್ ಅಪರಾಧಗಳಿಗೆ ಪ್ರಿಯಾಂಕಾ ಚೋಪ್ರಾ ಹೆಸರನ್ನ ಹೆಚ್ಚಾಗಿ ಬಳಸಿಕೊಳ್ಳಲಾಗಿದ್ದು, ಪ್ರಿಯಾಂಕಾ ಆನ್ ಲೈನ್ ನ ಮೋಸ್ಟ್ ಡೇಂಜರಸ್ ನಟಿ ಎನಿಸಿಕೊಂಡಿದ್ದಾರೆ.
ಶಾರೂಖ್ ಖಾನ್, ಸಲ್ಮಾನ್ ಖಾನ್ ಬಳಿಕ ಇತ್ತೀಚೆಗೆ ಸನ್ನಿ ಲಿಯೋನ್ ಮೋಸ್ಟ್ ಡೇಂಜರಸ್ ನಟಿ ಎಂಬ ಕುಖ್ಯಾತಿಗೆ ಪಾತ್ರರಾಗಿದ್ದರು. ಇದೀಗ ಸನ್ನಿ ಲಿಯೋನ್ ಳನ್ನೂ 9ನೇ ಸ್ಥಾನಕ್ಕೆ ತಳ್ಳಿರುವ ಪ್ರಿಯಾಂಕಾ, ಅತ್ಯಂತ ಅಪಾಯಕಾರಿ ನಟಿ ಎನಿಸಿಕೊಂಡಿದ್ಧಾರೆ.

ಕರೀನಾ ಕಪೂರ್, ಅಕ್ಷಯ್ ಕುಮಾರ್ ಸಹ ಟಾಪ್ 5ನಲ್ಲಿ ಇದ್ದಾರೆ. ಕ್ರಿಮಿನಲ್ ಗಳು ಹೇಗೆ ಸೆಲೆಬ್ರಿಟಿಗಳ ಹೆಸರನ್ನ ಬಳಸಿಕೊಂಡು ಅಂತರ್ಜಾಲದಲ್ಲಿ ಅಪರಾಧಗಳನ್ನ ಮಾಡುತ್ತಾರೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆಯಾಗಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com