ರಂಜಿಸಿದ ಯಕ್ಷಗಾನ ಗಾನ ವೈಭವ

ಕಾಮುಕಟ್ಟೆ: ಶ್ರೀ ದುರ್ಗಾಪರಮೇಶ್ವರಿ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಕಾಮುಕಟ್ಟೆ ಇಲ್ಲಿ 3ನೇ ವರ್ಷದ ಸಾರ್ವಜನಿಕ ಗಣೇಶೋತ್ಸವದ ಅಂಗವಾಗಿ ಬಡಗುತಿಟ್ಟಿನ 7 ಜನ ಭಾಗವತರಿಂದ ಯಕ್ಷಗಾನ ಗಾನ ವೈಭವ ನಡೆಯಿತು.
ಗಾನವೈಭವವನ್ನು  ಗಣೇಶೋತ್ಸವ ಸಮಿತಿ ಅಧ್ಯಕ್ಷ ಚಂದ್ರ ಮೊಗವೀರ ಬಾಳಿಕೆರೆ, ಗೌರವಾಧ್ಯಕ್ಷ ಮೋಹನ ದೇವಾಡಿಗ, ಭಾಗವತ ರಾಘವೇಂದ್ರ ಮಯ್ಯ, ಗೋಪಾಲ ಗಾಣಿಗ, ಅರ್ಚಕರಾದ ಗುರುರಾಜ್ ಭಟ್ ಉದ್ಘಾಟಿಸಿದರು.ಕಾರ್ಯದರ್ಶಿ ರವಿ ಗಾಣಿಗ ಮಲ್ಲಾರಿ, ಸಮಿತಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
      ಭಾಗವತ ಹೇರಂಜಾಲು ಗೋಪಾಲ ಗಾಣಿಗರ ನಿರ್ದೇಶನದಲ್ಲಿ ನಡೆದ ಗಾನ ವೈಭವದಲ್ಲಿ ರಾಘವೇಂದ್ರ ಮಯ್ಯ ಹಾಲಾಡಿ, ಸುಬ್ರಹ್ಮಣ್ಯ ಆಚಾರ್ ನಗರ, ರವಿ ಕುಮಾರ್ ಸೂರಾಲ್, ಗಣೇಶ ಶೆಟ್ಟಿ ಬೆಳ್ವೆ, ದೇವರಾಜ್ ದಾಸ್ ಮರವಂತೆ, ಪಲ್ಲವ್ ಹೇರಂಜಾಲು ಭಾಗವಹಿಸಿದ್ದರು. ಮದ್ದಲೆಯಲ್ಲಿ ಎನ್.ಜಿ.ಹೆಗಡೆ ಯಲ್ಲಾಪುರ, ರಾಘವೇಂದ್ರ ಹೆಗಡೆ, ಚಂಡೆಯಲ್ಲಿ ರಾಕೇಶ್ ಮಲ್ಯ ಹಳ್ಳಾಡಿ ಸಹಕರಿಸಿದ್ದರು.
   ಶಿಕ್ಷಕ ವಸಂತರಾಜ್ ಶೆಟ್ಟಿ ಕಾರ್ಯಕ್ರಮ ನಿರ್ವಹಿಸಿದರು.



ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com