ಬಿಜಾಪುರ ಸೈನಿಕ ಶಾಲೆಗೆ ಸೇರ್ಪಡೆಗೆ ಅರ್ಜಿ ಆಹ್ವಾನ

ಉಡುಪಿ: ಬಿಜಾಪುರದ ಸೈನಿಕ ಶಾಲೆಗೆ 2014 - 15ನೇ ಸಾಲಿಗೆ 6 ಮತ್ತು 9ನೇ ತರಗತಿ ಪ್ರವೇಶ ಪರೀಕ್ಷೆಗೆ ಹಾಜರಾಗಲು ಅರ್ಜಿ ಆಹ್ವಾನಿಸಲಾಗಿದೆ.

6ನೇ ತರಗತಿಗೆ 10 - 11 ವರ್ಷದೊಳಗಿನ ಮತ್ತು 9ನೇ ತರಗತಿಗೆ 13ರಿಂದ 14 ವರ್ಷದೊಳಗಿನ ಕರ್ನಾಟಕದಲ್ಲಿ ವಾಸಿಸುತ್ತಿರುವ/ರಕ್ಷಣಾ ಪಡೆಯ ಸಿಬಂದಿ ಮಕ್ಕಳು ಅರ್ಹತೆ ಪಡೆದಿದ್ದು, ಆಸಕ್ತರು ಡಿ. 10ರ ಒಳಗೆ ಅರ್ಜಿ ಸಲ್ಲಿಸಬಹುದು.

ಅರ್ಜಿಯನ್ನು ಪ್ರಾಚಾರ್ಯರು, ಸೈನಿಕ ಶಾಲೆ, ಬಿಜಾಪುರ - ಇವರಿಗೆ ಸಲ್ಲಿಸಬಹುದು. 2014ರ ಜ. 5ರಂದು ಬಿಜಾಪುರ, ಬೆಳಗಾವಿ, ಬೆಂಗಳೂರು, ಧಾರವಾಡ, ಗುಲ್ಬರ್ಗಾಗಳಲ್ಲಿ 6ನೇ ತರಗತಿಗೆ ಮತ್ತು ಬಿಜಾಪುರದಲ್ಲಿ 9ನೇ ತರಗತಿಗೆ ಅರ್ಹತಾ ಪರೀಕ್ಷೆ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com