ಅಂಚೆ ಕಭೇರಿಯಲ್ಲಿ ಆಧಾರ್‌ ಸ್ಥಗಿತ

ಬೈಂದೂರು: ಬೈಂದೂರು ಅಂಚೆ ಕಚೇರಿಯಲ್ಲಿ ದಿನವೂ ಆಧಾರ್‌ ನೋಂದಣಿಗೆ 50 ಜನರ ಮಾಹಿತಿ ಪಡೆದುಕೊಳ್ಳಲಾಗುತ್ತಿದೆ. ಆಧಾರ್‌ ನೋಂದಣಿಗಾಗಿ ಜನರ ಬೇಡಿಕೆ ಹೆಚ್ಚಿದೆ. ಬೈಂದೂರು ಕಚೇರಿಯಲ್ಲಿ ಅಕ್ಟೋಬರ್‌ 31ರವರೆಗೆ ಸಮಯ ನಿಗದಿಪಡಿಸಲಾಗಿದೆ. ಹೀಗಾಗಿ ಬೈಂದೂರು ಕಚೇರಿಯಲ್ಲಿ ಕೆಲವು ದಿನಗಳವರೆಗೆ ಆಧಾರ್‌ ಅರ್ಜಿ ಸ್ವೀಕಾರವನ್ನು ನಿಲ್ಲಿಸಲಾಗಿದೆ. ಈಗಾಗಲೇ ಅರ್ಜಿ ಸಲ್ಲಿಸಿದವರಿಗೆ ತಿಳಿಸಿದ ದಿನಾಂಕ, ಸಮಯದ ಪ್ರಕಾರ ಕಚೇರಿಗೆ ಬಂದು ನೋಂದಣಿ ಪ್ರಕ್ರಿಯೆಯಲ್ಲಿ ಪಾಲ್ಗೊಳ್ಳಲು ಅಂಚೆ ಅಧೀಕ್ಷಕರು ಮನವಿ ಮಾಡಿದ್ದಾರೆ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com