ಕಳಂಕ ರಹಿತ ಆಡಳಿತ ನಡೆಸಿದ ಶಕ ಪುರುಷ ಯಡ್ತರೆ ಮಂಜಯ್ಯ ಶೆಟ್ಟಿ

ಬೈಂದೂರು: ಯಡ್ತರೆ ಮಂಜಯ್ಯ ಶೆಟ್ಟರು ತನ್ನ ಜೀವಿತದ ಅವಯಲ್ಲಿ ಸುಮಾರು 40 ವರ್ಷಗಳ ಕಾಲ ಜಗದಾಂಬೆಯ ಸನ್ನಿಧಿಯಲ್ಲಿ ಆಡಳಿತ ಮೋಕ್ತೇಸರರಾಗಿ ಹಾಗೂ 3 ಬಾರಿ ಶಾಸಕರಾಗಿ ಸುರ್ಘ ಆಡಳಿತ ನಡೆಸಿದ ಅವರು ಯಾವುದೇ ಕಪ್ಪುಚುಕ್ಕೆಯಿಲ್ಲದೇ ಕಳಂಕ ರಹಿತರಾಗಿ ಆಡಳಿತ ನಡೆಸಿದ ಶಕ ಪುರುಷರಾಗಿದ್ದಾರೆ, ಅವರ ಶ್ರೇಷ್ಠತೆ ಸೂರ್ಯ ಚಂದ್ರರಿರುವ ತನಕ ಇರುತ್ತದೆ ಎಂದು ಬೆಜ್ಜವಳ್ಳಿ ಅಯ್ಯಪ್ಪ ಕ್ಷೇತ್ರದ ಹರಿಹರ ಪೀಠಾಪತಿ ಶ್ರೀ ಶ್ರೀ ಶ್ರೀ ವಿದ್ಯಾವಾಚಸ್ಪತಿ ಡಾ. ವಿಶ್ವಸಂತೋಷಭಾರತಿ ಶ್ರೀಪಾದಂಗಳರವರು ಹೇಳಿದ್ದಾರೆ.

ಶಕ್ತಿ ಶಕ್ಷೇತ್ರ ಶ್ರೀ ಮೂಕಾಂಬಿಕಾ ಸಾನಿಧ್ಯ ಕೊಲ್ಲೂರಿನ ಸ್ವರ್ಣಮುಖಿ ರಂಗಮಂಟಪದಲ್ಲಿ ಮಂಗಳವಾರ ಜರುಗಿದ ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಜನ್ಮ ಶತಮಾನೋತ್ಸವ ಸಮಾರಂಭದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿದರು.

 ಗ್ರಾಮದ ಅಭಿವೃದ್ಧಿಗೆ ಶಿಕ್ಷಣ ಮತ್ತು ಆಸ್ಪತ್ರೆಗಳು ತಳಪಾಯ ಎಂದು ಮನಗಂಡ ಅವರು ತನ್ನ ಶಾಸಕತ್ವದ ಅವಯಲ್ಲಿ ಕ್ಷೇತ್ರದಾದ್ಯಂತ ಸರಕಾರಿ ಶಾಲೆ ಹಾಗೂ ಆಸ್ಪತ್ರೆಗಳ ನಿರ್ಮಾಣಕ್ಕೆ ಹೆಚ್ಚಿನ ಒತ್ತನ್ನು ನೀಡುವುದರ ಮೂಲಕ ಅಗತ್ಯವಿರುವುದನ್ನು ನಿರ್ಮಿಸಿಕೊಟ್ಟ ನಿಜವಾದ ರಾಜಕಾರಣಿಯಾಗಿದ್ದಾರೆ. ಕೊಲ್ಲೂರು ದೇವಳದ ಆಡಳಿತ ಮೊಕ್ತೇಸರರಾಗಿ ಅವರು ಸಾರ್ವಜನಿಕ ದೇವಾಲಯವನ್ನು ತನ್ನ ಸ್ವಂತ ದೇವಾಲಯದ ಹಾಗೆ ಅಭಿವೃರಪಡಿಸುವ ಮೂಲಕ ಕೀರ್ತಿ ಶೆಷರಾಗಿದ್ದಾರೆ. ವರ ಬಗ್ಗೆ ಕೇವಲ ಭಾಷಣ ಮಾಡಿದರೆ ಸಾರ್ಥಕತೆ ಕಾಣಲು ಸಾಧ್ಯವಿಲ್ಲ ಬದಲಾಗಿ ಇಂತಹ ಮಹಾನ್ ಪುರುಷನನ್ನು ಮುಂದಿನ ಪೀಳಿಗೆಯವರು ನೆನಪಿಸಿಕೊಳ್ಳುವಂತೆ ಮಾಡಬೇಕಾಗಿದೆ ಈ ಹಿನ್ನೆಲೆಯಲ್ಲಿ ಬೈಂದೂರು ಕೊಲ್ಲೂರು ರಾಜ್ಯ ಹೆದ್ದಾರಿಗೆ  ಕೀರ್ತಿಶೇಷ ಯಡ್ತರೆ ಮಂಜಯ್ಯ ಶೆಟ್ಟಿ ಅವರ ಹೆಸರಿಡುವಂತೆ ಅವರು ಜಿಲ್ಲಾಡಳಿತಕ್ಕೆ ಮನವಿ ಮಾಡಿದರು.

ಜನ್ಮಶತಮಾನೋತ್ಸವ ಸಮಾರಂಭವನ್ನು ಉದ್ಘಾಟಿಸಿದ ಪದ್ಮಭೂಷಣ ಡಾ. ಬಿ.ಎಂ. ಹೆಗ್ಡೆ ಮಾತನಾಡಿ, ಜೀವಿತದ ಅವಯಲ್ಲಿ ಸಾತ್ವಿಕ, ಆದರ್ಶಯುತವಾಗಿ ಬಾಳಿದ ಮಂಜಯ್ಯ ಶೆಟ್ಟರು ಚಿರಂಜೀವಿಯಾಗಿದ್ದಾರೆ, ಅವರ ಜೀವನಶೈಲಿ ಉತ್ಕೃಷ್ಠ ವಾಗಿತ್ತು ಎಂದ ಅವರು  ಶೆಟ್ಟರು ಸಾಮಾಜಿಕ ಕಳಕಳಿ ಹಾಗೂ ಪ್ರಜ್ಞೆ  ಹೊಂದಿದವರಾಗಿದ್ದರು. ಸಮಾಜಕ್ಕೆ ಅವರು ನೀಡಿದ ಪ್ರಾಮಾಣಿಕ, ಆದರ್ಶಯುತ ಜೀವನ ಶೈಲಿಯನ್ನು ಮಾದರಿಯಾಗಿ ಮಾಡಿಕೊಳ್ಳುವುದೇ ನಾವು ಅವರಿಗೆ ನೀಡುವ ಉಡುಗೊರೆಯಾಗಿದೆ ಎಂದರು.

ಕೊಲ್ಲುರು ಮೂಕಾಂಬಿಕಾ ದೇವಳದ ಆಡಳಿತ ದರ್ಮಧರ್ಶಿ ಕೃಷ್ಣಪ್ರಸಾದ ಅಡ್ಯಂತಾಯ ಅಧ್ಯಕ್ಷತೆ ವಹಿಸಿದ್ದರು, ಮೂರನೇ ಹಣಕಾಸು ಆಯೋಗದ ಮಾಜಿ ಅಧ್ಯಕ್ಷ ಎ. ಜಿ. ಕೊಡ್ಗಿ, ದೇವಳದ ಕಾರ್ಯನಿರ್ವಹಣಾಕಾರಿ ಎಲ್.ಎಸ್. ಮಾರುತಿ, ಪ್ರಧಾನ ಅರ್ಚಕ ವೇ.ಮೂ. ಕೆ. ಮಂಜುನಾಥ ಅಡಿಗ, ಉಡುಪಿ ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ತಾ.ಪಂ. ಸದಸ್ಯ ರಮೇಶ ಗಾಣಿಗ, ಗ್ರಾ.ಪಂ. ಅಧ್ಯಕ್ಷೆ ಲಕ್ಷ್ಮೀ ಐತಾಳ್, ಡಾ. ಎಂ. ಲಕ್ಷ್ಮೀನಾರಾಯಣ ಶೆಟ್ಟಿ, ಯು.ಟಿ ಆಳ್ವ, ಸೀತಾರಾಮ ಶೆಟ್ಟಿ ಉಪ್ಪುಂದ, ಪ್ರೋ. ಸುಬ್ಬಣ್ಣ ಶೆಟ್ಟಿ ಉಪಸ್ಥಿತರಿದ್ದರು.

 ಮಾಜಿ ಶಾಸಕ ಅಪ್ಪಣ್ಣ ಹೆಗ್ಡೆ ಪ್ರಾಸ್ತಾವಿಕವಾಗಿ ಮಾತನಾಡಿದರು, ಬಿ. ಜಗನ್ನಾಥ ಶೆಟ್ಟಿ ಸ್ವಾಗತಿಸಿದರು, ಬಿ. ಕರುಣಾಕರ ಶೆಟ್ಟಿ ವಂದಿಸಿ, ಕಿಶೋರ ಕುಮಾರ ಶೆಟ್ಟಿ ಕಾರ್‍ಯಕ್ರಮ ನಿರೂಪಿಸಿದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com