ಕುಂದಾಪುರ ಡಿವೈಎಸ್‌ಪಿಯಾಗಿ ಸಿ.ಪಿ.ಪಾಟಿಲ್‌ ಅಧಿಕಾರ ಸ್ವೀಕಾರ

ಕುಂದಾಪುರ: ಬೆಂಗಳೂರಿನ ಲೋಕಾಯುಕ್ತ ಡಿವೈಎಸ್‌ಪಿಯಾಗಿದ್ದ ಸಿ.ಬಿ.ಪಾಟೀಲ್‌ ಅವರು ಕುಂದಾಪುರ ಉಪವಿಭಾಗದ ನೂತನ ಡಿವೈಎಸ್‌ಪಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು.
      1981ರಿಂದ ರಾಣೆಬೆನ್ನೂರು ನಗರ ಪೊಲೀಸ್‌ ಠಾಣೆೆಯಲ್ಲಿ ಸಬ್‌ ಇನ್ಸ್‌ಪೆಕ್ಟರ್‌ ಆಗಿ ಸೇವೆಯನ್ನು ಆರಂಭಿಸಿದ ಅವರು ಕುಂದಗೋಳ, ನವಲ್‌ಗ‌ುಂದ, ಗೋಕಾಕ್‌, ಮತ್ತು ಹರಿಹರ ಠಾಣೆಗಳಲ್ಲಿ ಉಪ ನಿರೀಕ್ಷಕರಾಗಿ, ಚಿಕ್ಕಮಗಳೂರು, ಮಾನ್ವಿಯಲ್ಲಿ ವೃತ್ತ ನಿರೀಕ್ಷಕರಾಗಿ, ಧಾರವಾಡದ ಸಂಚಾರಿ ಪೊಲೀಸ್‌ ಠಾಣೆಯಲ್ಲಿ , ಬೆಂಗಳೂರಿನ ಸಿಒಡಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದರು.
      ಡಿವೈಎಸ್‌ಪಿಯಾಗಿ ಭಡ್ತಿಹೊಂದಿದ ಅನಂತರ ಅವರು ಬೆಳಗಾವಿಯಲ್ಲಿ ಕಾರ್ಯನಿರ್ವಹಿಸಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com