ಧರ್ಮಾಧಿಕಾರಿ, ಕುಟುಂಬದ ತೇಜೋವಧೆಗೆ ಖಂಡನೆ

ಗಂಗೊಳ್ಳಿ: ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧರ್ಮಸ್ಥಳದ ಧರ್ಮಾಧಿಕಾರಿ ಕುಟುಂಬ ವರ್ಗದ ಮಾನ ಹಾನಿಕಾರ ಹೇಳಿಕೆ ಖಂಡನಾರ್ಹ ಎಂದು ಗಂಗೊಳ್ಳಿಯ ಶ್ರೀ ಇಂದುಧರ ದೇವಸ್ಥಾನದ ಸರ್ವ ಸದಸ್ಯರು ಸಭೆಯಲ್ಲಿ ಅಭಿಪ್ರಾಯಪಟ್ಟಿದ್ದಾರೆ. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸದಸ್ಯರಲ್ಲಿ ವಿನಾಕಾರಣ ಕ್ಷೇತ್ರದ ಧರ್ಮಾಧಿಕಾರಿಗಳ ಬಗ್ಗೆ ತಪ್ಪು ಅಭಿಪ್ರಾಯ ಮೂಡಿಸಿ ಧಾರ್ಮಿಕ ಕ್ಷೇತ್ರಕ್ಕೆ ಕಳಂಕ ತರುವುದು ಸರಿಯಲ್ಲ. ಇದು ಖಂಡನಾರ್ಹ ಎಂದು ಅಭಿಪ್ರಾಯಪಟ್ಟಿದೆ. ರಾಮರಾಜ್ಯದ ಕನಸನ್ನು ರಾಷ್ಟ್ರಪಿತ ಗಾಂಧೀಜಿ ಕಂಡಿದ್ದರೂ ಅದನ್ನು ನನಸು ಮಾಡಿದ್ದು ಶ್ರೀ ಕ್ಷೇತ್ರದ ಧರ್ಮಸ್ಥಳದ ಧರ್ಮಾಧಿಕಾರಿಗಳು. 40 ವರ್ಷದ ಅವರ ಸ್ವಾರ್ಥ ರಹಿತ ಸಮಾಜ ಸೇವೆ, ದೀನದಲಿತರ ಬಗ್ಗೆ ಕಳಕಳಿ, ಅದನ್ನು ನಾವು ಮೊದಲು ನೆನಪು ಮಾಡಿಕೊಳ್ಳಬೇಕು ಎಂದು ಸಭೆಯಲ್ಲಿ ಸದಸ್ಯರು ಮನವಿ ಮಾಡಿದ್ದಾರೆ. ಸಭೆಯಲ್ಲಿ ಇಂದುಶ್ರೀ ಮಹಿಳಾ ಸಂಘ, ಮಾತೃಶ್ರೀ ಬಾಲಕಿಯರ ಭಜನಾ ತಂಡ ಹಾಗೂ ಇಂದುಧರ ಯುವಕ ಮಂಡಲದ ಸದಸ್ಯರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com