ಬಾಲ್ ಬ್ಯಾಡ್ಮಿಂಟನ್:ಗಂಗೊಳ್ಳಿ ಸರಸ್ವತಿ ವಿದ್ಯಾಲಯಕ್ಕೆ ಅಗ್ರಸ್ಥಾನ

 ಗಂಗೊಳ್ಳಿ: ಪದವಿಪೂರ್ವ ಶಿಕ್ಷಣ ಇಲಾಖೆ ಉಡುಪಿ  ಮತ್ತು ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ಗಂಗೊಳ್ಳಿ ಇವರ ಸಂಯುಕ್ತ ಆಶ್ರಯದಲ್ಲಿ ಗಂಗೊಳ್ಳಿಯಲ್ಲಿ ನಡೆದ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳ ಜಿಲ್ಲಾ ಮಟ್ಟದ ಬಾಲ್ ಬ್ಯಾಡ್ಮಿಂಟನ್  ಮತ್ತು ಟೆನ್ನಿಕಾಯ್ಟ್ ಪಂದ್ಯಾಟದಲ್ಲಿ ಗ0ಗೊಳ್ಳಿಯ ಸರಸ್ವತಿ ವಿದ್ಯಾಲಯ ಪದವಿಪೂರ್ವ ಕಾಲೇಜು ನಾಲ್ಕು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡು ಅಗ್ರಸ್ಥಾನಿಯಾಗಿ ಮೂಡಿಬಂದಿತು. ಬಾಲ್ ಬ್ಯಾಡ್ಮಿಂಟನ್ ಮತ್ತು ಟೆನ್ನಿಕಾಯ್ಟ್‍ನಲ್ಲಿ ಈ ಕಾಲೇಜಿನ ಬಾಲಕರು ಪ್ರಥಮ ಸ್ಥಾನವನ್ನು ಗಳಿಸಿದರೆ, ಬಾಲಕಿಯರು ಟೆನ್ನಿಕಾಯ್ಟ್ ನಲ್ಲಿ ಪ್ರಥಮ ಹಾಗೂ ಬಾಲ್ ಬ್ಯಾಡ್ಮಿಂಟನ್‍ನಲ್ಲಿ ದ್ವಿತೀಯ ಸ್ಥಾನವನ್ನು ಪಡೆದು ತಮ್ಮ ಕಾಲೇಜಿನ ಈ ಸಾಧನೆಗೆ ಕಾರಣರಾದರು. ದೈಹಿಕ ಶಿಕ್ಷಣ ಉಪನ್ಯಾಸಕರಾದ ನಾಗರಾಜ ಶೆಟ್ಟಿ ಇವರಿಗೆ ಮಾರ್ಗದರ್ಶನ ನೀಡಿದ್ದರು."
   "ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿದ್ದ ಸರಸ್ವತಿ ವಿದ್ಯಾಲಯದ ಪ್ರಾಂಶುಪಾಲರಾದ ಕೆ.ಸರಸ್ವತಿ ರಾವ್ ವಿದ್ಯಾರ್ಥಿಗಳ ಈ ಸಾಧನೆಯನ್ನು ಅಭಿನಂದಿಸಿ ಮಾತನಾಡಿದರು. ಕಾಲೇಜಿನ ಕಾರ್ಯದರ್ಶಿ ಕೆ. ಸದಾಶಿವ ನಾಯಕ್, ಸ್ಥಳೀಯ ಉದ್ಯಮಿ ನಾಗೇಂದ್ರ ಪೈ , ಕೋಟ ವಿವೇಕ ಪ.ಪೂ.ಕಾಲೇಜಿನ ದೈಹಿಕ ಶಿಕ್ಷಕರಾದ ವಸಂತ ಶೆಟ್ಟಿ ವಿದ್ಯಾಥಿ9ಗಳಿಗೆ ಬಹುಮಾನ ವಿತರಿಸಿದರು. ವೆಂಕಟೇಶ ಮೂರ್ತಿ ಎನ್.ಸಿ. ನಿರ್ವಹಿಸಿದರು. ಉಳಿದಂತೆ ಬಾಲಕ ಮತ್ತು ಬಾಲಕಿಯರ ಟೆನ್ನಿಕಾಯ್ಟ್‍ನಲ್ಲಿ ಬಾರ್ಕೂರಿನ ನ್ಯಾóಷನಲ್ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ದ್ವಿತೀಯ ಸ್ಥಾನವನ್ನು ಪಡೆದರೆ ಬಾಲಕರ ಬಾಲ್ ಬ್ಯಾಡ್ಮಿಂಟನ್‍ನಲ್ಲಿ ಬ್ರಹ್ಮಾವರದ ಎಸ್ ಎಮ್ ಎಸ್ ಪದವಿಪೂರ್ವ ಕಾಲೇಜು ಹಾಗು ಬಾಲಕಿಯರ ಬಾಲ್ ಬ್ಯಾಡ್ಮಿಂಟನ್‍ನಲ್ಲಿ ವಿವೇಕ ಪದವಿಪೂರ್ವ ಕಾಲೇಜು ಕೋಟ ಪ್ರಥಮ ಸ್ಥಾನ ಪಡೆದುಕೊಂಡವು."

ವರದಿ : ನರೇಂದ್ರ ಎಸ್ ಗಂಗೊಳ್ಳಿ.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com