ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ ಮಹಾಸಭೆ

ಸದಸ್ಯರ ದಾಖಲೆಯ ಹಾಜರಾತಿ, 14 ವರ್ಷಗಳಿಂದ ಲಾಭದಾಯಕ ಹೆಜ್ಜೆ

ಕುಂದಾಪುರ: ತಾಲೂಕಿನ ಹೆಮ್ಮಾಡಿ ಮೀನುಗಾರರ ಪ್ರಾಥಮಿಕ ಸಹಕಾರಿ ಸಂಘದ 2012-13ನೇ ಸಾಲಿನ  ವಾರ್ಷಿಕ ಮಹಾಸಭೆ ಇತ್ತೀಚೆಗೆ ಹೆಮ್ಮಾಡಿಯ ಜಯಶ್ರೀ ಸಭಾಂಗಣದಲ್ಲಿ ನಡೆಯಿತು. ಸಭೆಯಲ್ಲಿ ದಾಖಲೆ ಸಂಖ್ಯೆಯಲ್ಲಿ, ಸುಮಾರು 1500ಕ್ಕೂ ಹೆಚ್ಚು ಸದಸ್ಯರು ಭಾಗವಹಿಸಿದ್ದು ವಿಶೇಷವಾಗಿತ್ತು.
ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಚಂದ್ರ ನಾಯ್ಕ್ ಕಟ್‍ಬೇಲ್ತೂರು ಮಾತನಾಡಿ, ‘ಸದಸ್ಯರ ಸಕ್ರೀಯ ಭಾಗವಹಿಸುವಿಕೆ ಸಂಘದ ಕಾರ್ಯಚಟುವಟಿಕೆಗಳಿಗೆ ಸಾಕ್ಷಿಯಾಗಿದೆ. ಮುಂದೆಯೂ ಕೂಡಾ ಸಂಘದ ಪ್ರಗತಿಗೆ ಸರ್ವರೂ ಸಹಕರಿಸಿ, ಪಡೆದ ಸಾಲವನ್ನು ಸದ್ವಿನಿಯೋಗಗೊಳಿಸಿಕೊಂಡು ಅಭಿವೃದ್ಧಿ ಹೊಂದಬೇಕು’ ಎಂದರು. ಇದೇ ಸಂದರ್ಭದಲ್ಲಿ ಲೆಕ್ಕ ಪರಿಶೋಧನೆಯಲ್ಲಿ ಕಾಣಿಸಿದ ಲಾಭಾಂಶದ ಆಧಾರದ ಮೇಲೆ ಡಿವಿಡೆಂಡ್ ಘೋಷಿಸಿದರು.
ಸಂಘದ ವಾರ್ಷಿಕ ವರದಿಯನ್ನು ಮಂಡಿಸಿದ ಸಂಘದ ಪ್ರಧಾನ ವ್ಯವಸ್ಥಾಪಕ ಉದಯ್ ಕುಮಾರ್ ಹಟ್ಟಿಯಂಗಡಿ, ‘ ಸಂಘವು ವರದಿ ವರ್ಷದಲ್ಲಿ ಒಟ್ಟು 3156 ಸದಸ್ಯರನ್ನು ಹೊಸದಾಗಿ ನೋಂದಾಯಿಸಿಕೊಂಡು, ರೂ.31,00,61,240.56 ಆರ್ಥಿಕ ವಹಿವಾಟು ಮಾಡಿದೆ. ರೂ.9,95,190.00 ಷೇರು ಬಂಡವಾಳ ಮತ್ತು ರೂ.14,06,16,094.00 ಠೇವಣಿ ಸಂಗ್ರಹಿಸಿ, ರೂ.11,89,77,374.00 ಸದಸ್ಯರಿಗೆ ವಿವಿಧ ಉದ್ದೇಶದ ಮೇಲೆ ಸಾಲ ಸೌಲಭ್ಯ ನೀಡಿದೆ. 10 ಮಹಿಳಾ ಸದಸ್ಯರನ್ನೊಳಗೊಂಡ ಒಟ್ಟು 376 ಮಹಿಳಾ ಮತ್ಸ್ಯಜ್ಯೋತಿ ಸ್ವ-ಸಹಾಯ ಗುಂಪುಗಳನ್ನು ಹೊಸದಾಗಿ ರಚಿಸಿರುವುದರ ಜೊತೆಗೆ ಮೀನುಗಾರಿಕಾ ಫೆಡರೇಶನ್ ಮಂಗಳೂರು ಇವರ ಸಹಭಾಗಿತ್ವದೊಂದಿಗೆ ಕಾರ್ಪೋರೇಶನ್ ಬ್ಯಾಂಕ್ ವಡೇರಹೋಬಳಿ ಶಾಖೆಯ ಮೂಲಕ ರೂ.18,80,00,000 ಶೇ.3ರ ಬಡ್ಡಿ ದರದಲ್ಲಿ ಸಾಲ ಸೌಲಭ್ಯವನ್ನು ಒದಗಿಸಿಕೊಟ್ಟಿದೆ. ಸಂಘದ ಕಾರ್ಯಕ್ಷೇತ್ರದ  ಶಂಕರನಾರಾಯಣದಲ್ಲಿ ನೂತನ ಶಾಖೆಯನ್ನು ತೆರೆದು, ಮುಖ್ಯ ಕಛೇರಿ ಹೆಮ್ಮಾಡಿ, ಮತ್ತು ಶಂಕರನಾರಾಯಣ ಶಾಖೆಯ ವ್ಯವಹಾರವನ್ನು  ಗಣಕೀಕರಣಗೊಳಿಸಿ ತ್ವರಿತ ಸೇವೆಯೊಂದಿಗೆ ಪ್ರಗತಿ ಪಥದತ್ತ ಸಾಗುತ್ತಿದೆ’ ಎಂದರು.
‘ವರದಿ ವರ್ಷದ  ಮಾರ್ಚ್ ಅಂತ್ಯಕ್ಕೆ ಒಟ್ಟು 10,798 ಸದಸ್ಯರನ್ನು ಹೊಂದಿದ್ದು, ರೂ.41,34,300 ಷೇರು ಬಂಡವಾಳ, ರೂ.7,63,79,945.24 ಠೇವಣಾತಿ ಸಂಗ್ರಹಿಸಿ, ರೂ.8,35,33,807   ಸಾಲ ನೀಡಿದೆ. ಸಂಘವು ಪ್ರಾರಂಭವಾಗಿ ಕೇವಲ 14 ವರ್ಷದಲ್ಲೇ ಅಮೋಘ ಸಾಧನೆ ಮಾಡಿದೆ. ಲಾಭದಾಯಕವಾಗಿ ಮುನ್ನೆಡೆಯುತ್ತಿದೆ’ ಎಂದರು.
ಸಂಘದ ಸ್ಥಾಪಕಾಧ್ಯಕ್ಷ ಸುರೇಶ ಆರ್.ಪುತ್ರನ್, ನಿಕಟಪೂರ್ವ ಅಧ್ಯಕ್ಷ ಎ.ಶೀನ ಮೊಗವೀರ, ಮೊಗವೀರ ಮಹಾಜನ ಸೇವಾ ಸಂಘದ ಬಗ್ವಾಡಿ ಹೋಬಳಿ ಇದರ ಶಾಖಾಧ್ಯಕ್ಷ ಎಂ.ಎಂ.ಸುವರ್ಣ ಇವರನ್ನು ಗೌರವಿಸಲಾಯಿತು.
ಸಂಘದ ಉಪಾಧ್ಯಕ್ಷೆ ಸುಮತಿ ಬಿ.ಮೊಗವೀರ ಹೆಮ್ಮಾಡಿ, ನಿರ್ದೇಶಕರುಗಳಾದ ಭಾಸ್ಕರ್ ಕೆ.ನಾಯ್ಕ್ ಕುಂಟನೇರ್ಲು, ಉದಯ್ ಕೆ.ನಾಯ್ಕ್ ವಂಡ್ಸೆ, ಎಂ.ಆರ್. ನಾಯ್ಕ್ ಗುಲ್ವಾಡಿ, ವಿಜಯ್ ಪುತ್ರನ್ ಅರಾಟೆ, ರಾಘವೇಂದ್ರ ನೆಂಪು ಉಪಸ್ಥಿತರಿದ್ದರು.

*ಒಟ್ಟು ಸದಸ್ಯರು: 10,798 
*ಆರ್ಥಿಕ ವಹಿವಾಟು: ರೂ.31,00,61,240.56
*ಮಹಿಳಾ ಮತ್ಸ್ಯಜ್ಯೋತಿ ಸ್ವ-ಸಹಾಯ ಗುಂಪು:376 
*ಶೇ.3 ರ ಬಡ್ಡಿಯಲ್ಲ ರೂ.18,80,00,000 ಸಾಲ
* ಷೇರು ಬಂಡವಾಳ: ರೂ.41,34,300

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com