ರಾಜ್ಯೋತ್ಸವ ವಿಶೇಷ: ತಿಂಗಳು ಪೂರ್ತಿ ಸಾಹಿತ್ಯಕ ಕಾರ್ಯಕ್ರಮ

ಉಡುಪಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಹಾಗೂ ರೋಟರಿ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವ ಅಂಗವಾಗಿ ನವಂಬರ್ ತಿಂಗಳು ಪೂರ್ತಿ ಸಾಹಿತ್ಯಕ ಕಾರ್ಯಕ್ರಮ 'ತಿಂಗಳ ಸಡಗರ' ನಡೆಯಲಿದ್ದು ನ.1ರಂದು ಉಡುಪಿಯಲ್ಲಿ ಚಾಲನೆ ಸಿಗಲಿದೆ.
 ನ.1 ಸಂಜೆ 3ಗಂಟೆಗೆ ಉಡುಪಿಯ ಪೂರ್ಣಪ್ರಜ್ಞಾ ಆಡಿಟೋರಿಯಂನ ಶ್ರೀ ವಿಬುಧೇಶ ತೀರ್ಥ ಸಭಾಂಗಣದಲ್ಲಿ ಉಡುಪಿಯ ಪೂರ್ಣಪ್ರಜ್ಞಾ ಸಂಧ್ಯಾ ಕಾಲೇಜಿನ ಪ್ರಿನ್ಸಿಪಾಲ್ ಡಾ.ಮಾಧವಿ ಭಂಡಾರಿ ಉದ್ಘಾಟಿಸಲಿದ್ದಾರೆ.
     ಬಳಿಕ ಕವಿಗೋಷ್ಠಿಯ ಮೂಲಕ ತಿಂಗಳ ಸಡಗರಕ್ಕೆ ಚಾಲನೆ ದೊರೆಯಲಾಗಿದೆ. ಅಧ್ಯಕ್ಷತೆಯನ್ನು ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ವಹಿಸುವರು. ಮುಖ್ಯ ಅತಿಥಿಗಳಾಗಿ ಜಿಲ್ಲಾ ಕಸಾಪ ಪೂರ್ವಾಧ್ಯಕ್ಷ ಅಂಬಾತನಯ ಮುದ್ರಾಡಿ, ಸುಹಾಸಂ ಅಧ್ಯಕ್ಷ ಶಾಂತರಾಜ ಐತಾಳ್, ರೋಟರಿ ಉಡುಪಿ ಅಧ್ಯಕ್ಷ ಬಿ.ವಿ.ಲಕ್ಷ್ಮೀನಾರಾಯಣ, ಉಡುಪಿ ತಾಲೂಕು ಕಸಾಪ ಅಧ್ಯಕ್ಷ ಉಪೇಂದ್ರ ಸೋಮಯಾಜಿ, ಕುಂದಾಪುರ ಘಟಕದ ಅಧ್ಯಕ್ಷ ನಾರಾಯಣ ಖಾರ್ವಿ, ಕಾರ್ಕಳ ಘಟಕದ ಅಧ್ಯಕ್ಷ ಬಿ.ಸಿ.ರಾವ್ ಶಿವಪುರ, ಉದ್ಯಮಿ ರಮೇಶ್ ರಾವ್ ಬೀಡು ಭಾಗವಹಿಸಲಿದ್ದಾರೆ.
           ನ.30ರಂದು ಬೈಂದೂರಿನ ರೋಟರಿ ಭವನದಲ್ಲಿ ತಿಂಗಳ ಸಡಗರ ಕಾರ್ಯಕ್ರಮದ ಸಮಾರೋಪ ನಡೆಯಲಿದೆ.

ಕಾರ್ಯಕ್ರಮ ವಿವರ: ತಿಂಗಳ ಸಡಗರದಲ್ಲಿ ಕವಿ-ಕಾವ್ಯ-ಗಮಕ, ಹಿರಿಯರೆಡೆಗೆ ಸಾಹಿತ್ಯದ ನಡಿಗೆ, ಯಕ್ಷಗಾನ ತಾಳಮದ್ದಲೆ, ನವೋದಯ ಕವಿ ಕಾವ್ಯ, ಚಿಂತನ ಮಾಲೆಯ ಅಡಿಯಲ್ಲಿ ಡಿ.ಎಸ್.ಕರ್ಕಿ ಸಾಹಿತ್ಯ ಬದುಕು ಉಪನ್ಯಾಸ, ಸುಗಮ ಸಂಗೀತ, ಮನೆಯಂಗಳದಲ್ಲಿ ಸಾಹಿತ್ಯ, ಗೋಪಾಲಕೃಷ್ಣ ಅಡಿಗರ ಕಾವ್ಯ ವಿಮರ್ಶೆ, ವಿದ್ಯಾರ್ಥಿ ಕವಿಗೋಷ್ಠಿ, ಸಾಹಿತ್ಯ-ಸಾಂಸ್ಕೃತಿಕ ಸೌರಭ, ಬಾಲ ಪ್ರತಿಭಾನ್ವೇಷಣೆ ಮುಂತಾದ 34 ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.


ಹಿರಿಯರೆಡೆಗೆ ಸಾಹಿತ್ಯ ನಡಿಗೆ ಎಲ್ಲೆಲ್ಲಿ : 
 ನ.2ರಂದು ಕುಂದಾಪುರದ ವತ್ಸಲಾ ಉಪ್ಪೂರ್,
 ನ.3ರಂದು ಪಡುಕೋಣೆಯ ರಾಮಚಂದ್ರಯ್ಯ ಪಿ.,
 ನ.4ರಂದು ಕಾಂತಾವರ ಬೇಲಾಡಿ ವಿಠಲ ಶೆಟ್ಟಿ ,
 ನ.10ರಂದು ಮಂದಾರ್ತಿಯ ಕೆ.ಎಂ.ಉಡುಪ,
 ನ.12ರಂದು ಪಣಿಯೂರು ಕುಂಜೂರಿನ ಪದ್ಮನಾಭ ಉಡುಪ,
 ನ.14ರಂದು ಸಾಲಿಕೇರಿ ಎನ್.ಎಸ್.ಅಡಿಗ, ನ.16ಕ್ಕೆ ಕೋಟತಟ್ಟು ಕೆ.ಸಿ.ಕುಂದರ್,
 ನ.17ರಂದು ಚೇರ್ಕಾಡಿ ಗೊದ್ದನಕಟ್ಟೆ ಗೋಪಾಲ ರಾವ್,
 ನ.20ಕ್ಕೆಗಂಗೊಳ್ಳಿ ಗಣಪತಿ ಶಿಪಾಯಿ ಅವರ ಮನೆಯಲ್ಲಿ ಈ ಕಾರ್ಯಕ್ರಮ ನಡೆಯಲಿದೆ.
 ನ.24ರಂದು ಚಿತ್ರಾಪಾಡಿ ರಾಘವೇಂದ್ರ ಹೊಳ್ಳ ಅವರ ಮನೆಯಂಗಳದಲ್ಲಿ ಸಾಹಿತ್ಯ ಹಮ್ಮಿಕೊಳ್ಳಲಾಗಿದೆ. ಈ ಎಲ್ಲಾ ಕಾರ್ಯಕ್ರಮಗಳು ಸಂಜೆ 5ಗಂಟೆಗೆ ನಡೆಯಲಿವೆ. ಈ ಕಾರ್ಯಕ್ರಮದಡಿ ಸಾಹಿತಿಗಳನ್ನು ಸನ್ಮಾನಿಸಿ ಅವರ ಅನುಭವಗಳನ್ನು ದಾಖಲಿಸಿಕೊಳ್ಳಲಾಗುವುದು. ಹಾಗೆಯೇ 15ಕಡೆ ಕವಿ-ಕಾವ್ಯ-ಗಮಕ ಹಾಗೂ 2ಕಡೆಗಳಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com