ಸರಳತೆ, ಧಾರ್ಮಿಕ ಮನೋವೃತ್ತಿಯಿಂದ ಅಭಿವೃದ್ಧಿ ಸಾಧ್ಯ

ಕೋಟ: ಕೋಟ ಕಾಶೀ ಮಠದಲ್ಲಿ ಮುರುಳೀಧರ ಕೃಷ್ಣ ದೇವರನ್ನು ಪ್ರತಿಷ್ಠಾಪಿಸಿದ ಕೋಟ ಸುಬ್ರಾಯ ನರಸಿಂಹ ಭಟ್‌ ಅವರು ಸರಳ, ಸಾತ್ವಿಕರು ಆಗಿದ್ದರು. ಅದ್ದರಿಂದ ಅವರು ತಮ್ಮ ಜೀವನದಲ್ಲಿ ಯಶಸ್ವಿಯಾದರು. ಅಂತೆಯೇ ಜೀವನದಲ್ಲಿ ಸರಳತೆ, ಧಾರ್ಮಿಕ ಮನೋವೃತ್ತಿ ಮೈಗೂಡಿಸಿಕೊಳ್ಳುವುದರಿಂದ ಯಶಸ್ಸು ಸಾಧ್ಯ ಎಂದು ಶ್ರೀ ಸಂಸ್ಥಾನ ಕಾಶೀ ಮಠಾಧಿಧೀಶ ಪರಮಪೂಜ್ಯ ಶ್ರೀ ಸುಧಿಧೀಂದ್ರ ತೀರ್ಥ ಶ್ರೀಪಾದಂಗಳವರು ನುಡಿದರು.

ಅವರು ಬುಧವಾರ ಕೋಟ ವರುಣತೀರ್ಥ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ವತಿಯಿಂದ ಕೋಟ ಕಾಶೀ ಮಠದಲ್ಲಿ ನಡೆದ ಭಜನಾ ಸಪ್ತಾಹದ ವಜ್ರ ಮಹೋತ್ಸವ ಅಂಗವಾಗಿ ಕೊಡ ಮಾಡುವ 'ವಜ್ರ ಮಹೋತ್ಸವ ಪ್ರಶಸ್ತಿ' ಹಾಗೂ ಕೋಟದ ಯುವಕ ಸಮಾಜ ಶಾರದಾ ಮಹೋತ್ಸವ ಪ್ರಯುಕ್ತ ನೀಡಲಾಗುವ 'ಸರಸ್ವತಿ ಪುರಸ್ಕಾರ - 2013' ಪ್ರಧಾನ ಸಮಾರಂಭದಲ್ಲಿ ಭಾಗವಹಿಸಿ ಆಶೀರ್ವಚನ ನೀಡಿದರು.

ಹೆಚ್ಚುತ್ತಿರುವ ಆಡಂಬರ

ಸಮಾಜದಲ್ಲಿ ಇಂದು ಹಿರಿಯರು, ದೇವರ ಮೇಲೆ ಭಕ್ತಿ - ಭಾವ ಕಡಿಮೆಯಾಗುತ್ತಿದೆ. ಭಕ್ತಿ ಇದ್ದರೂ ಆಡಂಬರ ಹೆಚ್ಚುತ್ತಿದೆ. ಆಡಂಬರದ ಭಕ್ತಿ ತ್ಯಾಗ ಮಾಡಿ ಸರಳ ಸಜ್ಜನಿಕೆಯಿಂದ ಭಗವಂತನನ್ನು ಪ್ರಾರ್ಥಿಸಿದರೆ ಫಲ ಖಂಡಿತ ಎಂದು ಅವರು ಹೇಳಿದರು.

ಪ್ರಶಸ್ತಿ ಪ್ರದಾನ

ಕಾರ್ಯಕ್ರಮದಲ್ಲಿ 'ಸರಸ್ವತಿ ಪುರಸ್ಕಾರ'ವನ್ನು ಜೋತಿಷ್ಯ ವಿದ್ವಾನ್‌, ವೇದಮೂರ್ತಿ ಕೋಟ ರಾಮದಾಸ ನಾಗೇಶ್‌ ಭಟ್‌ ಅವರಿಗೆ ಶ್ರೀಗಳು ಪ್ರದಾನ ಮಾಡಿದರು. ಭಜನಾ ಸಪ್ತಾಹದ 'ವಜ್ರಮಹೋತ್ಸವ ಪ್ರಶಸ್ತಿ'ಯನ್ನು ಡಾ| ಪಿ ದಯಾನಂದ ಪೈ ಅವರ ಅನುಪಸ್ಥಿತಿಯಲ್ಲಿ ಸಂಘಟನೆಗೆ ಹಸ್ತಾಂತರಿಸಿದರು.

ಎಸೆಸೆಲ್ಸಿಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ನವ್ಯಾ ನಾಗಪ್ಪಯ್ಯ ಪ್ರಭು ಅವರಿಗೆ ದಿ. ಪ್ರವೀಣ್‌ ಹೆಗ್ಡೆ ಸ್ಮಾರಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮಂಗಳೂರಿನಿಂದ ಆಗಮಿಸಿದ ಗುರುಗಳನ್ನು ಪೂರ್ಣ ಕುಂಭ ಸ್ವಾಗತ ನೀಡಿ ಬರ ಮಾಡಿಕೊಳ್ಳಲಾಯಿತು. ಆಶೀರ್ವಚನ, ದೇವಭೇಟಿ, ಹತ್ತು ಸಮಸ್ತರಿಂದ ಶ್ರೀಗಳ ಭೇಟಿ ನಡೆಯಿತು.

ಈ ಸಂದರ್ಭ ಕೋಟ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘದ ಅಧ್ಯಕ್ಷ ಎಂ. ರಮೇಶ್‌ ಪಡಿಯಾರ್‌, ಉಪಾಧ್ಯಕ್ಷ ಕೆ. ನರಸಿಂಹ ಪ್ರಭು, ಕೋಶಾಧ್ಯಕ್ಷ ಎಂ. ಗೌತಮ್‌ ಶೆಣೈ, ಕಾರ್ಯದರ್ಶಿ ದೇವದಾಸ ಭಟ್‌, ಯುವಕ ಸಮಾಜದ ಕಾರ್ಯದರ್ಶಿ ಕೆ. ಸತೀಶ್‌ ಹೆಗ್ಡೆ, ಅರ್ಚಕ ವೇ| ಮೂ. ಕಪಿಲದಾಸ್‌ ಭಟ್‌, ಸಮಾಜದ ಪ್ರಮುಖರಾದ ಕುಂಭಾಶಿ ಕೇಶವ ಪ್ರಭು, ಕೋಟೇಶ್ವರ ಸುರೇಂದ್ರ ಕಾಮತ್‌, ಕುಂದಾಪುರ ರಾಧಾಕೃಷ್ಣ ಶೆಣೈ, ದಾಮೋದರ ಶೆಣೈ, ಕೇಶವ್‌ ದತ್‌ ಭಟ್‌, ಹಿಂದಿನ ವರುಷ ಸರಸ್ವತಿ ಪುರಸ್ಕಾರ ಪಡೆದ ಸುಬ್ರಾಯ ಕಾಮತ್‌, ಕೋಟ ರಾಧಾಕೃಷ್ಣ ನಾಯಕ್‌ ಮೊದಲಾದವರು ಉಪಸ್ಥಿತರಿದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com