ಕುಂದಾಪುರ: ದೇಹಕ್ಕೆ ವಿದ್ಯೆ ನೀಡುವುದರ ಜೊತೆಗೆ ಮನಸ್ಸಿಗೆ ವಿದ್ಯೆ ನೀಡಿದಾಗ ಕೌಟುಂಬಿಕ ಸಂಬಂಧ, ಮಾನವೀಯ ಮೌಲ್ಯ, ಉತ್ತಮ ವ್ಯಕ್ತಿತ್ವ ಬೆಳೆಯುದರೊಂದಿಗೆ ಸಾರ್ಥಕ ಜೀವನ, ಪೃಕೃತಿ ಸಹಜ ಬದುಕು ನಮ್ಮದಾಗುತ್ತದೆ ಎಂದು ಜ್ಞಾನ ವಿಕಾಸ ಯೋಗ ಮುಖ್ಯ ತರಬೇತುದಾರೆ ಮುಕ್ತ ಮಾತಾಜೀ ಹೇಳಿದರು.
   ಅವರು ಅಂಪಾರು ನೆಲ್ಲಿಕಟ್ಟೆಯಲ್ಲಿ ಆರೋಗ್ಯ ಮತ್ತು ಸಾಂಸ್ಕøತಿಕ ವಿಕಾಸ ಕೇಂದ್ರ ಬ್ರಹ್ಮಾವರ, ಜ್ಞಾನ ವಿಕಾಸ ಯೋಗ ಕುಂದಾಪುರ,ಸಾರ್ವಜನಿಕ ಶಾರದೋತ್ಸವ ಸಮಿತಿ, ಶಾಲಾಭಿವೃದ್ಧಿ ಸಮಿತಿ ಮತ್ತು ಆಡಳಿತ ಮಂಡಳಿ, ಜೈ ಭಾರತಿ ಹಿ.ಪ್ರಾ,ಶಾಲೆ ನೆಲ್ಲಿಕಟ್ಟೆ, ಶಕ್ತಿ ಯುವಕ ಮಂಡಲ ಸಂಯುಕ್ತ ಆಶ್ರಯದಲ್ಲಿ ಜ್ಞಾನ ವಿಕಾಸ ಯೋಗ ತರಬೇತಿ ಶಿಬಿರದಲ್ಲಿ ಆಶೀರ್ವಚಿಸಿ ಮಾತನಾಡಿದರು. 
      ಹಿರಿಯ ಯೋಗ ಸಾಧಕ ವಕೀಲ ಆವರ್ಸೆ ರತ್ನಾಕರ್ ಶೆಟ್ಟಿ ಶಿಬಿರ ಉಧ್ಘಾಟಿಸಿ, ಆತ್ಮ ಸ್ವಾತಂತ್ರ್ಯ ಅನುಭವಿಸುವ  ಜೀವನ ನಮ್ಮದಾಗಿರಿಸಿಕೊಂಡು ಎಲ್ಲರ ಕಷ್ಟ-ಸುಖಗಳಿಗೆ ಭಾಗಿಯಾಗಿ ಸದೃಢ ಸಮಾಜ ನಿರ್ಮಿಸಿದಾಗ ಯೋಗ ಜೀವನ ಸಾರ್ಥಕ ಎಂದರು. ಜೈ ಬಾರತಿ ಶಾಲಾ ಸಂಚಾಲಕರಾದ ಉದಯ ಕುಮಾರ ಶೆಟ್ಟಿ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಕೆ.ಗಣಪಯ್ಯ ಶೆಟ್ಟಿ, ಸಂತೋಷ್ ಕುಮಾರ್ ಶೆಟ್ಟಿ, ಕೃಷ್ಣಯ್ಯ ಶೆಟ್ಟಿ ಉಪಸ್ಥಿತರಿದ್ದರು.
        ಹಿರಿಯ ಸಾಧಕರಾದ  ನಿವೃತ್ತ ಕಾರ್ಯಪಾಲಕ ಇಂಜಿನಿಯರ್ ರತ್ನಾಕರ್ ಶೆಟ್ಟಿ,ಶ್ರೀನಿವಾಸ ಪ್ರಭು, ಬಾಬಣ್ಣ,ಗಣೇಶ್ ನಾಯಕ್, ಉಷಾ ಪ್ರಭು ಯೋಗದ ಅನುಭವ ಹಂಚಿಕೊಂಡರು. ಸಟ್ವಾಡಿ ಅನಿಲ್ ಕುಮಾರ್ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾಳಿಂಗ ಶೆಟ್ಟಿ ಸ್ವಾಗತಿಸಿದರು, ಗ್ರಾ.ಪಂ. ಉಪಾಧ್ಯಕ್ಷ ಗಣೇಶ್  ಕಾರ್ಯಕ್ರಮ ನಿರೂಪಿಸಿದರು. ನಾಗೇಶ್ ಶೇಟ್ ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com