ಹೆ‌ದ್ದಾರಿ ವಿಸ್ತರಣೆ: ಭೂಸಂತ್ರಸ್ತರಿಂದ ಮನವಿ

ಕುಂದಾಪುರ : ಕುಂದಾಪುರದಿಂದ ಶಿರೂರು ತನಕ ರಾ.ಹೆ. 66ರ ವಿಸ್ತರಣೆ ಸಂದರ್ಭ ಭೂಮಿ ಕಳೆದುಕೊಂಡ ಸಂತ್ರಸ್ತರಿಗೆ ಭೂ ದಾಖಲೆ ಸ್ವೀಕಾರ ದಿನಾಂಕವನ್ನು ಮುಂದುವರಿಸುವಂತೆ ಹಾಗೂ ಭೂ ಸಂತ್ರಸ್ತರ ಜಮೀನಿನ ದಾಖಲೆಗಳನ್ನು ಸ್ವೀಕರಿಸಿಲು ಬೈಂದೂರಿನಲ್ಲಿ ತಾತ್ಕಾಲಿಕ ಕೇಂದ್ರವೊಂದನ್ನು ತೆರೆಯುವಂತೆ ಬೈಂದೂರು ಪರಿಸರದ ಭೂಸಂತ್ರಸ್ತರು ರಾಷ್ಟ್ರಿಯ ಹೆದ್ದಾರಿ ಪ್ರಾಧಿಕಾರದ ವಿಶೇಷ ಭೂ ಸ್ವಾಧೀನಾಧಿಕಾರಿ ಅವರಿಗೆ ಮನವಿ ಸಲ್ಲಿಸಿದ್ದಾರೆ.

ಕುಂದಾಪುರದಿಂದ ಶಿರೂರಿನ ತನಕ ಚತುಷ್ಪಥ ಹೆದ್ದಾರಿ ಕಾಮಗಾರಿಗೆ ಈಗಾಗಲೇ ಭೂಮಿ ಸ್ವಾಧೀನಪಡಿಸಿಕೊಂಡಿದ್ದು, ಈ ಭೂಮಿಗೆ ಪರಿಹಾರ ಪಡೆಯಲು ದಾಖಲೆಗಳನ್ನು ನಿರ್ದಿಷ್ಟ ದಿನಾಂಕಗಳ ಒಳಗೆ ನೀಡಲು ತಿಳಿಸಿದ್ದು, ಈ ದಿನಾಂಕದ ಒಳಗೆ ಮ್ಯುಟೇಶನ್‌ ಹಾಗೂ ಋಣಭಾರ ರಾಹಿತ್ಯ ಧೃಢಪತ್ರಿಕೆ ಪಡೆಯಲು ಅಸಾಧ್ಯವಾಗಿರುವುದರಿಂದ ದಾಖಲೆಗಳ ಸೀÌಕಾರ ದಿನಾಂಕವನ್ನು ಮುಂದುವರಿಸಬೇಕು ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ದಾಖಲೆಗಳ ಸ್ವೀಕಾರ ಹಾಗೂ ಪರಿಹಾರ ಪಾವತಿಗೆ ಉಡುಪಿ ಪ್ರಾಧಿಕಾರಕ್ಕೆ ಬರಲು ಅನಾರೋಗ್ಯ ಪೀಡಿತರಿಗೆ, ಹಿರಿಯ ನಾಗರಿಕರಿಗೆ ತುಂಬಾ ದೂರವಾಗಿರುವುದರಿಂದ ಬೈಂದೂರಿನಲ್ಲಿ ತಾತ್ಕಾಲಿಕ ಕೇಂದ್ರ ಆರಂಭಿಸಬೇಕು ಎಂದು ಅವರು ಮನವಿಯಲ್ಲಿ ವಿನಂತಿಸಿದ್ದಾರೆ.

ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com