ಕೊಲ್ಲೂರಿನಲ್ಲಿ ರಥೋತ್ಸವ, ವಿದ್ಯಾರಂಭ

ಕೊಲ್ಲೂರು: ಶ್ರೀ ಮೂಕಾಂಬಿಕೆ ದೇವಿಯ ಸನ್ನಿಧಾನದಲ್ಲಿ ನವರಾತ್ರಿ ಹಾಗೂ ವಿದ್ಯಾರಂಭ ದುರ್ಗಾಷ್ಟಮಿಯಂದು ಮಧ್ಯಾಹ್ನ ಚಂಡಿಕಾಯಾಗ ಹಾಗೂ ಮಹಾನವರಾತ್ರಿಯ ರಥೋತ್ಸವದೊಂದಿಗೆ ಸಡಗರ ಸಂಭ್ರಮದಿಂದ ಜರಗಿತು.

ದೇವಳದಲ್ಲಿ ನೆರೆದ ಅಸಂಖ್ಯಾತ ಭಕ್ತವೃಂದದ ಸಮ್ಮುಖದಲ್ಲಿ ಧರ್ಮದರ್ಶಿ ಕೃಷ್ಣಪ್ರಸಾದ ಅಡ್ಯಂತಾಯ, ಕಾರ್ಯನಿರ್ವಾಹಣಾಧಿಧಿಕಾರಿ ಎಲ್‌.ಎಸ್‌.ಮಾರುತಿ, ಉಪಕಾರ್ಯನಿರ್ವಾಹಣಾಧಿಕಾರಿ ಕೃಷ್ಣಮೂರ್ತಿ, ರಾಮಕೃಷ್ಣ ಅಡಿಗ, ಆಡಳಿತ ಮಂಡಳಿಯ ಸದಸ್ಯರು ಉಪಸ್ಥಿತರಿದ್ದರು.

ವಿವಿಧ ರಾಜ್ಯಗಳಿಂದ ಆಗಮಿಸಿದ ಭಕ್ತರು ರಥೋತ್ಸವದಲ್ಲಿ ಪಾಲೂYಂಡು ದೇವಿಯ ಪ್ರಸಾದದ ನಾಣ್ಯವನ್ನು ಪಡೆಯಲು ಮುಗಿಬಿದ್ದರು. 'ಶ್ರೀದೇವಿ ನಾರಾಯಣಿ' ಎಂಬ ಉದ್ಘೋಷವು ಮುಗಿಲು ಮುಟ್ಟಿತು.

ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎನ್‌. ನರಸಿಂಹ ಅಡಿಗ, ಕೆ.ಎನ್‌.ಗೋವಿಂದ ಅಡಿಗ, ಶ್ರೀಧರ ಅಡಿಗ, ಮಂಜುನಾಥ ಅಡಿಗರ ನೇತƒತ್ವದಲ್ಲಿ ಮಹಾ ನವರಾತ್ರಿ ಉತ್ಸವದ ಧಾರ್ಮಿಕ ವಿಧಿಧಿವಿಧಾನಗಳು ನೇರವೇರಿತು.

ವಿದ್ಯಾರಂಭ, ನವಾನ್ನ ಪ್ರಾಶನ:

ಸೋಮವಾರ ವಿಜಯದಶಮಿಯ ಅಂಗವಾಗಿ ಬೆಳಗ್ಗೆ 4 ಗಂಟೆಯಿಂದ ಶ್ರೀಮೂಕಾಂಬಿಕಾ ದೇವಿಯ ಸನ್ನಿಧಿಧಿಯ ಸರಸ್ವತಿ ಮಂಟಪದಲ್ಲಿ ಸಾವಿರಾರು ಪುಟಾಣಿಗಳ ವಿದ್ಯಾರಂಭ ನೇರವೇರಿತು. ಚಿನ್ನದ ಉಂಗುರದಿಂದ ಮಕ್ಕಳ ನಾಲಗೆಯಲ್ಲಿ 'ಓಂಕಾರ' ಬರೆದು ಅಕ್ಕಿಯಲ್ಲಿ ಪ್ರಥಮಾಕ್ಷರ ಬರೆಸಿದರು. ಮಧ್ಯಾಹನ್ನ 12.30ರಿಂದ ಕಂದಮ್ಮಗಳಿಗೆ ನವಾನ್ನ ಪ್ರಾಶನ ಕಾರ್ಯಕ್ರಮವೂ ಜರಗಿತು. ಸಂಜೆ ವಿಜಯೋತ್ಸವ ಸಡಗರ ಸಂಭ್ರಮದಿಂದ ನೆರವೇರಿತು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com