ಸಾಗರ ಕವಚ ಅಣುಕು ಕಾರ್ಯಾಚರಣೆ

ಕುಂದಾಪುರ: ಪೊಲೀಸ್ ಇಲಾಖೆ ಹಮ್ಮಿಕೊಂಡಿರುವ ಸಾಗರ ಕವಚ-2013 ಅಣುಕು ಕಾರ್ಯಾಚರಣೆಯಡಿ ಗುರುವಾರ ಸಂಜೆ ಬೀಜಾಡಿ ಕಡಲತಡಿಯಲ್ಲಿ ಒಳನುಸುಳಲು ಯತ್ನಿಸಿದ್ದ ಐವರು ಡಮ್ಮಿ ಉಗ್ರರನ್ನು ಕುಂದಾಪುರ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ.! 
    ಹಡಗಿನ ಮೂಲಕ ಆಗಮಿಸಿದ ಉಗ್ರರು ದೋಣಿ ಮೂಲಕ ಬೀಜಾಡಿ ಕಡಲ ತಡಿ ಪ್ರವೇಶಿಸಲು ಯತ್ನಿಸುತ್ತಿದ್ದ ವೇಳೆ ಮಾಹಿತಿ ಕಲೆ ಹಾಕಿದ ಗಸ್ತುನಿರತ ಕುಂದಾಪುರ ಎಎಸ್‌ಐ ನೀಲಯ್ಯ ಪೂಜಾರಿ, ಹೊಯ್ಸಳ ಚಾಲಕ ಅಶೋಕ್, ಪೊಲೀಸ್ ಸಿಬ್ಬಂದಿ ಪ್ರಕಾಶ್ ಭಂಡಾರಿ ಐವರನ್ನು ವಶಕ್ಕೆ ತೆಗೆದುಕೊಂಡು ಎರಡು ಬಾಂಬ್‌ಗಳನ್ನು ಸ್ವಾಧೀನಪಡಿಸಿಕೊಂಡಿದ್ದಾರೆ. 
     ಡಮ್ಮಿ ಉಗ್ರರಾದ ಕಾರವಾರ ನೇವಿ ಮುಖ್ಯಸ್ಥ ಎಂ.ಎಂ. ಪಾಂಡೆ, ಮಂಗಳೂರು ಕರಾವಳಿ ಕಾವಲು ಪಡೆಯ ಸಿಬ್ಬಂದಿಗಳಾದ ರಾಜ್‌ದೂತ್, ಪಾಂಡೆ, ರಾಜೇಶ್, ದೋಲಿ ನಟಿಸಿದ್ದರು. ವಶಪಡಿಸಿಕೊಂಡ ಬಾಂಬ್ ನಿಷ್ಕ್ರಿಯಗೊಳಿಸಲಾಯಿತು. 

ಕುತೂಹಲಕ್ಕೆ ಎಡೆಮಾಡಿಕೊಟ್ಟ ಪ್ರಹಸನ: ಸಂಜೆಯಾಗುತ್ತಿದ್ದಂತೆ ಬೀಜಾಡಿ ಕಡಲತಡಿಯತ್ತ ಪೊಲೀಸ್ ವಾಹನಗಳು, ಅಗ್ನಿಶಾಮಕ ವಾಹನ, ಆಂಬ್ಯುಲೆನ್ಸ್ ಒಂದರ ಹಿಂದೆ ಒಂದು ಸಾಗುತ್ತಿದ್ದದ್ದು ಕಂಡು ಆತಂಕಿತರಾದ ಸ್ಥಳೀಯರು ಕುತೂಹಲದಿಂದ ಕಡಲ ತಡಿಗೆ ಆಗಮಿಸಿದ್ದು ವಿಷಯ ಅರಿತು ನಿರುಮ್ಮಳರಾದರು. ಕುಂದಾಪುರ ಡಿವೈಎಸ್ಪಿ ಸಿ.ಬಿ. ಪಾಟೀಲ್, ಸರ್ಕಲ್ ಇನ್ಸ್‌ಪೆಕ್ಟರ್ ದಿವಾಕರ್, ಪಿಎಸ್‌ಐ ಜಯರಾಮ ಗೌಡ ಇದ್ದರು.
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com