ಡಾ| ಕಾರಂತ ಜನದಿನೋತ್ಸವ ಸರಣಿ ಕಾರ್ಯಕ್ರಮಕ್ಕೆ ಚಾಲನೆ

ಕೋಟ: ಕೋಟ ಶಿವರಾಮ ಕಾರಂತರು ಈ ನಾಡು ಕಂಡ ಅಪೂರ್ವ ವ್ಯಕ್ತಿಗಳಲ್ಲಿ ಒಬ್ಬರು. ಅವರು ತಮ್ಮ ಕಾದಂಬರಿಯಲ್ಲಿ ಸಮಾಜದ ವಸ್ತು ಸ್ಥಿತಿಗಳನ್ನು ಬಿಂಬಿಸಿದ್ದಾರೆ. ಅಲ್ಲದೇ ಈಗಿರುವ ಸಮಾಜವನ್ನು ಬದಲಾಯಿಸುವುದಾದರೆ ಹೇಗೆ ಎನ್ನುವ ಚಿಂತನೆಯನ್ನು ಸಾಕಷ್ಟು ಕಾದಂಬರಿಗಳ ಮೂಲಕ ಹೊರಹಾಕಿದ್ದಾರೆ ಎಂದು ಕರ್ನಾಟಕ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಹೇಳಿದರು.

ಅವರು ಮಂಗಳವಾರ ಕೋಟ ಕಾರಂತ ಥೀಂ ಪಾರ್ಕ್‌ನಲ್ಲಿ ಕೋಟತಟ್ಟು ಗ್ರಾಮ ಪಂಚಾಯತ್‌ ಸಾರಥ್ಯದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕರ್ನಾಟಕ ಸರಕಾರ, ಡಾ| ಶಿವರಾಮ ಕಾರಂತ ಟ್ರಸ್ಟ್‌ ಉಡುಪಿ, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಕೋಟ ಸಹಯೋಗದಲ್ಲಿ ಡಾ| ಶಿವರಾಮ ಕಾರಂತ ಜನದಿನೋತ್ಸವದ ಅಂಗವಾಗಿ ಆಯೋಜಿಸಲಾದ ಸಾಹಿತ್ಯ - ಸಾಂಸ್ಕೃತಿಕ ಜಾತ್ರೆ, ಡಾ| ಶಿವರಾಮ ಕಾರಂತ ಹುಟ್ಟೂರ ಪ್ರಶಸ್ತಿ ಪ್ರದಾನ ಕಾರ್ಯಕ್ರಮಗಳ 10 ದಿನಗಳ ಸರಣಿ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ವೆಬ್‌ಸೈಟ್‌ ಲೋಕಾರ್ಪಣೆ

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೋಟತಟ್ಟು ಗ್ರಾ.ಪಂ. ಅಧ್ಯಕ್ಷೆ ಶೋಭಾ ವಹಿಸಿದ್ದರು. ಕಾರಂತ ಥೀಂ ಪಾರ್ಕ್‌ ವೆಬ್‌ಸೈಟ್‌ ಲೋಕಾರ್ಪಣೆಗೊಳಿಸಲಾಯಿತು. ಡಾ| ಕಾರಂತ ಪ್ರತಿಷ್ಠಾನದ ಕಾರ್ಯಾಧ್ಯಕ್ಷ ಆನಂದ ಸಿ. ಕುಂದರ್‌ ನೂತನ ಗಣಕ ಯಂತ್ರದ ಕೊಠಡಿ ಉದ್ಘಾಟಿಸಿದರು. ಸಾಂಸ್ಕೃತಿಕ ಜಾತ್ರೆ ಅಂಗವಾಗಿ ಮೊದಲನೇ ದಿನ ರೋಟರಿ ಕ್ಲಬ್‌ ಹಂಗಾರಕಟ್ಟೆ ಸಾಸ್ತಾನ ಮತ್ತು ಜೇಸಿಐ ಕಲ್ಯಾಣಪುರ ಸಾದರಪಡಿಸುವ ಉಡುಪಿ ಜಿಲ್ಲಾ ಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನವನ್ನು ಮತ್ತು ಬ್ರಹ್ಮಾವರ ವಲಯ ಛಾಯಾಚಿತ್ರಗಾರರ ಛಾಯಾಚಿತ್ರ ಪ್ರದರ್ಶನವನ್ನು ಶ್ರೀ ಕ್ಷೇತ್ರ ಅಂಬಲಪಾಡಿ ಧರ್ಮದರ್ಶಿ ಡಾ| ನಿ. ವಿಜಯ ಬಲ್ಲಾಳ್‌ ಉದ್ಘಾಟಿಸಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಸದಸ್ಯೆ ಸುನೀತಾ ರಾಜಾರಾಮ್‌, ಜಿಲ್ಲಾ ಕೇಂದ್ರ ಗ್ರಂಥಾಲಯ ಮುಖ್ಯ ಗ್ರಂಥಾಲಯ ಅಧಿಕಾರಿ ವೆಂಕಟೇಶ್‌, ಕೋಟತಟ್ಟು ಗ್ರಾ.ಪಂ. ಸದಸ್ಯರಾದ ಪ್ರಮೋದ್‌ ಹಂದೆ, ಪ್ರಭಾಕರ್‌ ಕಾಂಚನ್‌, ಜಯಶ್ರೀ, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ ಅಧ್ಯಕ್ಷ ರೋ. ಚಂದ್ರಶೇಖರ ಹೊಳ್ಳ, ಕಲ್ಯಾಣಪುರ ಜೇಸಿಐ ಅಧ್ಯಕ್ಷ ಮಿತ್ರಕುಮಾರ್‌, ರೋಟರಿ ಜಿಲ್ಲೆ 3180ದ ಉಪರಾಜ್ಯಪಾಲ ರೋ ಮಹೇಶ್‌ ಕುಮಾರ್‌ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ವಿಧಾನಸಭೆಯ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ, ಶ್ರೀ ಕ್ಷೇತ್ರ ಅಂಬಲಪಾಡಿ ಧರ್ಮದರ್ಶಿ ಡಾ| ನಿ. ವಿಜಯ ಬಲ್ಲಾಳ್‌, ಹಂಗಾರಕಟ್ಟೆ ಸಾಸ್ತಾನ ರೋಟರಿ ಕ್ಲಬ್‌ ಅಧ್ಯಕ್ಷ ಚಂದ್ರಶೇಖರ ಹೊಳ್ಳ, ಕಲ್ಯಾಣಪುರ ಜೇಸಿಐ ಅಧ್ಯಕ್ಷ ಮಿತ್ರಕುಮಾರ್‌ ಅವರನ್ನು ಸಮ್ಮಾನಿಸಿ ಗೌರವಿಸಲಾಯಿತು. ಮಾಜಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಪ್ರಸ್ತಾವನೆಗೈದರು. ವಿದ್ಯಾರ್ಥಿಗಳಾದ ಉತ್ತಮ ಪ್ರಭು ಕಾರ್ಯಕ್ರಮ ನಿರೂಪಿಸಿದರು. ಕೋಟ ನರೇಂದ್ರ ಕುಮಾರ್‌, ವಿದ್ಯಾ ಹೇಳೆì ಸಹಕರಿಸಿದರು. ಕೋಟ ತಟ್ಟು ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಜಯರಾಮ್‌ ಶೆಟ್ಟಿ ವಂದಿಸಿದರು.

Udayavani | Oct 01, 2013


ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com