ಉಚಿತ ರಕ್ತ ಹೀನತೆ ತಪಾಸಣಾ ಶಿಬಿರ

ಕುಂದಾಪುರ: ಶ್ರೀ ಮಾತಾ ಆಸ್ಪತ್ರೆ ಕುಂದಾಪುರದಲ್ಲಿ ‘ಉಚಿತ ರಕ್ತ ಹೀನತೆ ತಪಾಸಣಾ ಶಿಬಿರ’ ವನ್ನು ಲಯನ್ಸ್ ಮತ್ತು ಲಯನೆಸ್ ಕ್ಲಬ್, ಬ್ರಹ್ಮಾವರ ಬಾರ್ಕೂರು ಇವರ ಜಂಟಿ ಆಶ್ರಯದಲ್ಲಿ ಅ. 26 ರಂದು ನಡೆಯಿತು.
ಶ್ರೀ ಮಾತಾ ಆಸ್ಪತ್ರೆಯ ಫಿಜಿಶಿಯನ್ ಡಾ ಅಶೋಕ್ ಅವರು ಶಿಬಿರ ಉದ್ಘಾಟಿಸಿ, ರಕ್ತ ಹೀನತೆ ಎನ್ನುವುದು ಮಹಿಳೆಯರಲ್ಲಿ ಹೆಚ್ಚಾಗಿ ಕಂಡು ಬರುತ್ತಿದ್ದು ನಾನಾ ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತಿದೆ. ಹಾಗೂ ಪೌಷ್ಟಿಕಾಂಶ ಆಹಾರದ ಕೊರತೆಯಿಂದ ಕೂಡ ರಕ್ತ ಹೀನತೆ ಕಂಡು ಬರುವುದು ರಕ್ತ ಹೀನತೆಯಿಂದ ಬಳಲುತ್ತಿರುವ ವ್ಯಕ್ತಿ, ಸರಿಯಾದ ತಪಾಸಣೆ ಮತ್ತು ಚಿಕಿತ್ಸೆಯನ್ನು ನಿಯಮಿತವಾಗಿ ಅನುಸರಿಸಬೇಕು ಎಂದು ಹೇಳಿದರು.
      ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಬ್ರಹ್ಮಾವರ ಬಾರ್ಕೂರು ಅಧ್ಯಕ್ಷರಾದ ದಯಾನಂದ ಶೆಟ್ಟಿ, ಲಯನೆಸ್ ಕ್ಲಬ್ ಅಧ್ಯಕ್ಷೆ ಶ್ರೀಮತಿ  ಪ್ರೇಮಾ ಡಿ. ಶೆಟ್ಟಿಯವರು ಉಪಸ್ಥಿತರಿದ್ದರು. ಖ್ಯಾತ ಮನೋ ವೈದ್ಯ ಡಾ ಪ್ರಕಾಶ್ ತೋಳಾರ್ ರವರು ಸ್ವಾಗತಿಸಿ, ಪ್ರಾಸ್ತವಿಕ ಮಾತುಗಳನ್ನಾಡಿದರು , ಬಪ್ನಾ ಪಾರ್ಮಸಿಟ್ಯುಕಲ್ಸ್ ನ ಗಣಪತಿ ಆಚಾರ್ ಕಾರ್ಯಕ್ರಮವನ್ನು ಪ್ರಾಯೋಜಿಸಿದರು. ಕು. ಲಕ್ಷ್ಮೀ ಕಾರ್ಯಕ್ರಮವನ್ನು ನಿರೂಪಿಸಿ, ವಂದಿಸಿದರು. 
ಇತರೆ ಸುದ್ದಿಗಳು:


ಈ ಸುದ್ದಿಯನ್ನು Share ಮಾಡಿ :

0 comments:

Post a Comment

 
© Copyright 2013-14 Kundapura News - ಕುಂದಾಪ್ರ ಡಾಟ್ ಕಾಂ ಸುದ್ದಿ All Rights Reserved.
Template Design by Herdiansyah Hamzah | Sunil Byndoor * Powered by Kundapra Dot Com